Ugabhoga | Aaneyu Karedare Aadimoola Bandante| Lyrics|Kannada|Purandaradasa| ಉಗಾಭೋಗ ಆನೆಯು ಕರೆದರೆ ಆದಿಮೂಲ ಬಂದಂತೆ

Aaneyu Karedare Aadimoola Bandante Ugabhoga Lyrics In Kannada

ಆನೆಯು ಕರೆದರೆ ಆದಿಮೂಲ
ಬಂದಂತೆ |
ಅಜಾಮಿಳನು ಕರೆದರೆ ನಾರಾಯಣನು
ಬಂದಂತೆ |
ಅಡವಿಯಲ್ಲಿ ಧ್ರುವರಾಯ ಕರೆದರೆ
ವಾಸುದೇವ ಬಂದಂತೆ
ಸಭೆಯಲ್ಲಿ ದ್ರೌಪದಿ ಕರೆದರೆ
ಶ್ರೀಕೃಷ್ಣ ಬಂದಂತೆ |
ನಿನ್ನ ದಾಸರ ದಾಸನು ನಾ ಕರೆದರೆ |
ಎನ್ನ ಪಾಲಿಸಬೇಕು ಪುರಂದರ ವಿಠಲ

ಈ ಉಗಾಭೋಗದಲ್ಲಿ ಶ್ರೀ ಪುರಂದರದಾಸರು ನಮ್ಮನ್ನು ರಕ್ಷಿಸಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.
ಹೇಗೆ ರಕ್ಷಿಸಬೇಕೆಂದರೆ ಹಲವು ಉದಾಹರಣೆಗಳನ್ನು ಕೊಡುತ್ತಾರೆ.

ಹಿಂದೆ ಗಜೇಂದ್ರಮೋಕ್ಷ ಪ್ರಕರಣ. ಅಲ್ಲಿ ಹೇಗೆ ಗಜೇಂದ್ರನೆಂಬ ಆನೆಯ ಕಾಲನ್ನು ಮೊಸಳೆಯು ಗಟ್ಟಿಯಾಗಿ ೧೦ ಸಾವಿರ ವರ್ಷ ಹಿಡಿದು ಕೂತ. ಗಜೇಂದ್ರನು ಸಾಕಷ್ಟು ಪ್ರಯತ್ನಪಟ್ಟರೂ ಬಿಡಿಸಿಕೊಳ್ಳಲಾಗಲಿಲ್ಲ. ಕೊನೆಗೆ ಭಕ್ತಿನಿಂದ “ನಾರಾಯಣ, ನಾರಾಯಣ, ರಕ್ಷಿಸು” ಎಂದು ಕೂಗಿದಾಗ ಮೂಲ ನಾರಾಯಣನೇ ಸತ್ಯಲೋಕದಿಂದ ಗರುಡನ ಮೇಲೆ ಬಂದ. ಬಂದವನೇ ತನ್ನ ಚಕ್ರದಿಂದ ಮೊಸಳೆಯನ್ನು ಹತ ಮಾಡಿ, ಆನೆಯನ್ನು ರಕ್ಷಿಸಿದನು.

ಹಾಗೆ ಅಜಮಿಳನು ತನ್ನ ಮಗ ‘ನಾರಾಯಣನನ್ನು’ ಕರೆದ. ನಾರಾಯಣನು ಮರಣಶಯ್ಯೆಯಲ್ಲಿರುವ ಅಜಮಿಳನನ್ನು ರಕ್ಷಿಸಿದನು.
ನಾರಾಯಣನು ತನ್ನ ಭಟರಿಂದ ಯಮಭಟರನ್ನು ಓಡಿಸಿದನು. ಅಜಮಿಳನನ್ನು ಜೀವದಾನ ಮಾಡಿದನು.

೫ ವರ್ಷದ ಹಸುಳೆ ಧ್ರುವ ಕಾಡಲ್ಲಿ ಒಬ್ಬನೇ ಭಕ್ತಿ ಇಂದ ಉಗ್ರ ತಪಸ್ಸನ್ನು ಮಾಡಿದ. ಅವನಿಗೆ ಬಂದ ಅನೇಕ ಆಪತ್ತುಗಳನ್ನು ಪರಿಹರಿಸಿ ಪರಮಾತ್ಮ ಧ್ರುವನನ್ನು ರಕ್ಷಿಸಿದ. ಅವನ ಭಕ್ತಿಗೆ ಮೆಚ್ಚಿ ಧ್ರುವ ಲೋಕದ ಅಧಿಪತ್ಯವನ್ನೇ ಕೊಟ್ಟ.

ಇನ್ನು ಮಾಹಾಭಾರತದಲ್ಲಿ ದ್ರೌಪದಿಯನ್ನು ರಕ್ಷಿಸಿದ. ಚದುರಂಗದಲ್ಲಿ ಧರ್ಮರಾಜ ಎಲ್ಲವನ್ನು ಸೋತಾಗ ದ್ರೌಪದಿಯನ್ನೂ ಪಣಕ್ಕಿಟ್ಟು ಸೋತ. ದುಷ್ಶಾಸನ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಲು ಎತ್ನಿಸಿದ. ದ್ರೌಪದಿ ಅಚಲ ಭಕ್ತಿಯಿಂದ ‘ಕೃಷ್ಣ ರಕ್ಷಿಸು’ ಏನು ಬೇಡಿಕೊಂಡಳು. ಕೃಷ್ಣ ದ್ರೌಪದಿಯ ಮಾನ ಕಾಪಾಡಿದ.

ಈ ಎಲ್ಲ ಮಹಾ ಭಕ್ತರನ್ನು ಕಾಪಾಡಿದಂತೆ ನನ್ನನ್ನು ಕಾಪಾಡು ಎಂದು ಪುರಂದರದಾಸರು ಪರಮಾತ್ಮನಲ್ಲಿ ಕೇಳಿಕೊಳ್ಳುತ್ತಾರೆ.
ಹಾಗೆ ನಾನು ಚಿಕ್ಕವ, ದೇವರ ದಾಸರ ದಾಸ. ಆದರೂ ನನ್ನ ಮೇಲೆ ಕೃಪೆ ಮಾಡಿ ರಕ್ಷಿಸು ಅಂತ ಪ್ರಾರ್ಥಿಸುತ್ತಾರೆ.

ಯಾರು ಭಗವಂತನಲ್ಲಿ ಭಕ್ತಿಯನ್ನು ಮಾಡುತ್ತಾರೋ , ಅವರಿಗೆ ಭಗವಂತನೇ ರಕ್ಷಕ.
ಯಾರು ಭಗವಂತನ ನಾಮಸ್ಮರಣೆ ಮಾಡುತ್ತಾರೋ ಅವರಿಗೆ ಭಗವಂತ ಕೈ ಬಿಡುವದಿಲ್ಲ.

Aaneyu Karedare Aadimoola Bandante Ugabhoga Lyrics In English

Āneyu karedare ādimūla
bandante |
Ajāmiḷanu karedare
Nārāyaṇanu bandante |
aḍaviyalli Dhruvarāya karedare
Vāsudēva bandante |
sabheyalli Draupadi karedare
śrīkr̥ṣṇa bandante |
ninna dāsara dāsanu nā karedare |
enna pālisabēku Purandara viṭhala

In this ugabhoga, Sri Purandaradasa pleads with God to save us.

He gives many examples of how god protected many bhaktas in the past.

Gajendra Moksha case-There, the crocodile bites and holds the elephant’s leg, for ten thousand years. Gajendra (the elephant) tried hard but could not take  out his leg from crocodile’s mouth. Finally Gajendra with at most devotion shouted, “Narayana, Narayana, save me”, Moola Narayana came with Garuda from Satya loka. Narayana killed the crocodile with his chakra, saved the elephant.

Ajamila called his son ‘Narayana’. Narayan rescued Ajamila, who was on death row.

Narayana’s troops chased the Yamabhata away. Ajamila was brought to life.

Dhruva’s history: Five year old baby Dhruva alone made a fierce penance filled with Bhakti. The Lord saved Dhruv by solving the many problems that came to him. Narayana admired his devotion and gave him the lordship of the Druva loka.

God protected Draupadi in the Mahabharata. Dharmaraja lost everything in chess and lost Draupadi. At a meeting filled with people, Draupadi tried to get dressed by Dushyasana. Draupadi pleads with devotion to Lord Krishna. Krishna protected Draupadi.

Purandaradasa invoke the Supreme Lord to protect him as he had saved all these great devotees.

For he is but a little man, the servant of god’s servants.Still he requests to protect him..

Whoever advocates bhakti, god will same them.

God’s name chanting is the investment and god himself is the insurance !!

Leave a Comment