ಸಾವಧಾನದಿಂದಿರು ಮನವೇ |
ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ ||
ಡಂಭವ ನೀ ಬಿಡಲೊಲ್ಲೇ | ರಂಗನಾ |
ನಂಬಿದ ಆ ಕ್ಷಣದಲ್ಲಿ || ೧ ||
ದೃಡ ಮಾಡಾತನ ಸ್ಮರಣೆ | ಭಕ್ತನಾ |
ಬಿಡನಾತನು ಬಹು ಕರುಣೆ || ೨ ||
ಪುರಂಧರ ವಿಠ್ಠಲನ ನಂಬು | ನಿನಗೆ |
ಇಹಪರ ಸಂಪದಗಳ ನೀವ || ೩ ||
ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆ
ದೇವರು ಕೊಟ್ಟಾನು ||ಪ||
ಡಂಭವ ನೀ ಬಿಡಲೊಲ್ಲೆ , ರಂಗನ
ನಂಬಿದಾಕ್ಷಣದಲ್ಲಿ ||
ದೃಢ ಮಾಡಾತನ ಸ್ಮರಣೆ , ಭಕ್ತರ
ಬಿಡಾತನು ಬಲ್ಲತಿ ಕರುಣಿ ||
ಪುರಂದರವಿಠಲನ ನಂಬು , ನಿನಗಿಹ
ಪರಲೋಕ ಸಂಪದಗಳನೆಲ್ಲ ||