Anuvaagaballa Lyrics

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English

ರಚನೆ:ಶ್ರೀ. ಪುರಂದರದಾಸರು

ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ.


ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ.

ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .
ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.
ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ.

ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.
ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು ಕೊಂಡಾಡಿದ್ದಾರೆ.

Anuvaagaballa Mahattagaballa Lyrics In Kannada

ಅಣುವಾಗಬಲ್ಲ
ಮಹತ್ತಾಗಬಲ್ಲ
ಅಣು ಮಹತ್ ಎರಡೊಂದಾಗಬಲ್ಲ

ರೂಪನಾಗಬಲ್ಲ
ಅರೂಪನಾಗಬಲ್ಲ
ರೂಪ ಅರೂಪ ಎರಡೊಂದಾಗಬಲ್ಲ

ಸುಗುಣನಾಗಬಲ್ಲ
ನಿರ್ಗುಣನಾಗಬಲ್ಲ
ಸುಗುಣ ನಿರ್ಗುಣ ಎರಡೊಂದಾಗಬಲ್ಲ

ವ್ಯಕ್ತನಾಗಬಲ್ಲ
ಅವ್ಯಕ್ತನಾಗಬಲ್ಲ
ವ್ಯಕ್ತ ಅವ್ಯಕ್ತ ಎರಡೊಂದಾಗಬಲ್ಲ

ಘಟಿತ ಅಘಟಿತ ಅಚಿಂತ್ಯಾದ್ಭುತ
ಸ್ವಗತ ಸ್ವರೂಪ ನಮ್ಮ ಪುರಂದರ ವಿಠಲ

Anuvaagaballa Mahattagaballa Lyrics In English

Anuvaagaballa
Mahattagaballa
Anu mahatteradadongaballa


Roopanaagaballa
Aroopanagaballa
Roopa roopa yeradondaagaballa


Sugunanaagaballa
Nirgunanaagaballa
Suguna Nirguna yeradondagaballa

Vyaktanaagaballa
Avyaktanaagaballa
Vyakta avvyakta yeradondagaballa


Ghatita aghatita achintyadbhuta
Swagat swaroop namma purandara vithala

Leave a Comment

Your email address will not be published. Required fields are marked *