Madhwanama Lyrics Kannada English

ಮಧ್ವನಾಮ | Madhwanama Lyrics | Kannada | English

ರಚನೆ : ಶ್ರೀ ಶ್ರೀ ಶ್ರೀಪಾದರಾಜರು

Madhwanama Lyrics In Kannada

ಜಯ ಜಯ ಜಗತ್ರಾಣ 
ಜಗದೊಳಗೆ ಸುತ್ರಾಣ
ಅಖಿಳ ಗುಣ ಸದ್ಧಾಮ ಮಧ್ವನಾಮ || ಪ. ||


ಆವ ಕಚ್ಚಪ ರೂಪದಿಂದ 
ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು 
ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು 
ಆ ವಾಯು ನಮ್ಮ ಕುಲ ಗುರುರಾಯನು || 1 ||


ಆವವನು ದೇಹದೊಳಗಿರಲು ಹರಿ ನೆಲಸಿಹನು 
ಆವವನು ತೊಲಗೆ ಹರಿ ತಾ ತೊಲಗುವ 
ಆವವನು ದೇಹದ ಒಳ ಹೊರಗೆ ನಿಯಾಮಕನು 
ಆ ವಾಯು ನಮ್ಮ ಕುಲ ಗುರುರಾಯನು || 2 ||


ಕರಣಾಭಿಮಾನಿ ಸುರರು ದೇಹವ ಬಿಡಲು 
ಕುರುಡ ಕಿವುಡ ಮೂಕನೆಂದೆನಿಸುವ 
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು 
ಅರಿತು ಪೆಣವೆಂದು ಪೇಳುವರು ಬುಧ ಜನ || 3 ||

ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ 
ಪರತರನೆನಿಸಿ ನಿಯಾಮಿಸಿ ನೆಲಸಿಹ 
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು 
ಗುರು ಕುಲ ತಿಲಕ ಮುಖ್ಯ ಪವಮಾನನು || 4 ||

ಹನುಮಾವತಾರ

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು 
ವಾತ ಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ 
ಈತಗೆಣೆಯಾರು ಮೂರ್ಲೋಕದೊಳಗೆ || 5 ||

ತರಣಿ ಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ 
ಉರವಣಿಸಿ ಹಿಂದು ಮುಂದಾಗಿ 
ನಡೆದ ಪರಮ ಪವಮಾನಸುತ ಉದಯಾಸ್ತ 
ಶೈಲಗಳಭರದಿಯೈದಿದಗೀತಗುಪಮೆ ಉಂಟೇ || 6 ||

ಅಖಿಳ ವೇದಗಳ ಸಾರ ಪಠಿಸಿದನು ಮುನ್ನಲ್ಲಿ 
ನಿಖಿಳ ವ್ಯಾಕರಣಗಳ ಇವ ಪಠಿಸಿದ 
ಮುಖದಲ್ಲಿ ಕಿಂಚಿದಪ ಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ || 7 ||

ತರಣಿ ಸುತನನು ಕಾಯ್ದು ಶರಧಿಯನು 
ನೆರೆ ದಾಟಿ ಧರಣಿ ಸುತೆಯಳ ಕಂಡು ದನುಜರೊಡನೆ 
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು || 8 ||

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ 
ಶರಧಿಯನು ಕಟ್ಟಿ ಬಲು ರಕ್ಕಸರನು ಒರಸಿ ರಣದಲಿ 
ದಶ ಶಿರನ ಹುಡಿ ಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ || 9 ||

ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ 
ತರಣಿ ಕುಲ ತಿಲಕನಾಜ್ಞೆಯ ತಾಳಿದಗಿರಿ ಸಹಿತ 
ಸಂಜೀವನವ ಕಿತ್ತು ತಂದಿತ್ತ ಹರಿವರಗೆ 
ಸರಿಯುಂಟೆ ಹನುಮಂತಗೆ || 10 ||

ವಿಜಯ ರಘುಪತಿ ಮೆಚ್ಚಿ ಧರಣಿ ಸುತೆಯಳಿಗೀಯೆ 
ಭಜಿಸಿ ಮೌಕ್ತಿಕದ ಹಾರವನು ಪಡೆದ 
ಅಜ ಪದವಿಯನು ರಾಮ ಕೊಡುವೆನೆನೆ ಹನುಮಂತ 
ನಿಜ ಭಕುತಿಯನೆ ಬೇಡಿ ವರವ ಪಡೆದ || 11 ||

ಭೀಮಾವತಾರ

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ 
ಸೋಮ ಕುಲದಲಿ ಜನಿಸಿ ಪಾರ್ಥನೊಡನೆ 
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ 
ಆ ಮಹಿಮನಮ್ಮ ಕುಲ ಗುರು ರಾಯನು || 12 ||

ಕರದಿಂದ ಶಿಶು ಭಾವನಾದ ಭೀಮನ ಬಿಡಲು. 
ಗಿರಿ ವಡೆದು ಶತ ಶೃಂಗವೆಂದೆನಿಸಿತು 
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರನಿಗೆ 
ಸುರ ನರರು ಸರಿಯೇ || 13 ||

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ 
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ 
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ 
ಜಾಹ್ನವಿಗೊಯ್ದ ತನ್ನನುಜರ || 14 ||

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ 
ಲೋಕ ಕಂಟಕರನು ಬಲ್ಲಿದಸುರರ ಗೆಲಿದು 
ದ್ರೌಪದಿಯ ಕೈವಿಡಿದು 
ಎಲ್ಲ ಸುಜನರಿಗೆ ಹರುಷವ ತೋರಿದ || 15 ||

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ 
ರಾಜಸೂಯ ಯಾಗವನು ಮಾಡಿಸಿದನು 
ಆಜಿಯೊಳು ಕೌರವರ ಬಲವ ಸವರುವೆನೆಂದು 
ಮೂಜಗವರಿಯೆ ಕಂಕಣ ಕಟ್ಟಿದ || 16 ||

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು 
ದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು 
ಕಿಮ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ || 17 ||

ದುರುಳ ಕೀಚಕನು ತಾಂ ದ್ರೌಪದಿಯ 
ಚಲುವಿಕೆಗೆ ಮರುಳಾಗಿ ಕರ ಕರೆಯ ಮಾಡಲವನಾ
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ ಕುರುಪನಟ್ಟಿದ 
ಮಲ್ಲ ಕುಲವ ಸದೆದ || 18 ||

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ 
ಓರಂತೆ ಕೌರವನ ಮುರಿದು ಮೆರೆದ 
ವೈರಿ ದುಶ್ಯಾಸನ್ನ ರಣದಲ್ಲಿ ಎಡೆ ಗೆಡಹಿ 
ವೀರ ನರಹರಿಯ ಲೀಲೆಯ ತೋರಿದ || 19 ||

ಗುರು ಸುತನು ಸಂಗರದಿ ನಾರಾಯಣಾಸ್ತ್ರವನು 
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು 
ಹರಿ ಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ 
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ || 20 ||

ಚಂಡ ವಿಕ್ರಮನು ಗದೆಗೊಂಡು ರಣದಿ 
ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ 
ಬಿಸುಟಿಹ ವೃಕೋದರನ ಪ್ರತಾಪವನುಕಂಡು
ನಿಲ್ಲುವರಾರು ತ್ರಿಭುವನದೊಳು || 21 ||

ನಾರಿರೋದನ ಕೇಳಿ ಮನಮರುಗಿ ಗುರುಸುತನ
ಹಾರಿ ಹಿಡಿದು ಶಿರೋರತ್ನ ಕಿತ್ತಿ ತೆಗೆದ
ನೀರೊಳಡಗಿದ್ದ ದುರ್ಯೋಧನನ ಹೊರಗೆಡಹಿ
ಉರುದ್ವಯ ತನ್ನ ಗದೆಯಿಂದ ಮುರಿದ || 22 ||

ಮಧ್ವಾವತಾರ

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತ ವನರುಹಲದನರಿತು 
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ 
ಮಾನನಿಧಿ ಮಧ್ವಾಖ್ಯನೆಂದೆನಿಸಿದ || 23 ||

ಅರ್ಭಕತನದೊಳೈದಿ ಬದರಿಯಲಿ 
ಮಧ್ವಮುನಿ ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ 
ಉರ್ವಿಯೊಳು ಮಾಯೆ ಬೀರಲು ತತ್ವ ಮಾರ್ಗವನು 
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ || 24 ||

ಸರ್ವೇಶ ಹರ ವಿಶ್ವ ಎಲ್ಲ ತಾ ಪುಸಿಯೆಂಬ 
ದುರ್ವಾದಿಗಳ ಮತವ ನೆ ಖಂಡಿಸಿ 
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿ
ದಾಶರ್ವಾದಿ ಗೀರ್ವಾಣ ಸಂತತಿಯಲಿ || 25 ||

ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ
ಲೋಕತ್ರಯದೊಳಿದ್ದಸುರರು ಆಲಿಸುವಂತೆ
ಆಕಮಲನಾಭಯತಿನಿಕರಕೊರೆದ || 26 ||

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ 
ಪದಕೆರಗಿ ಅಖಿಳ ವೇದಾರ್ಥಗಳನು 
ಪದುಮನಾಭನ ಮುಖದಿ ತಿಳಿದು 
ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ || 27 ||

ಜಯ ಜಯತು ದುರ್ವಾದಿ ಮತ 
ತಿಮಿರ ಮಾರ್ತಾಂಡ ಜಯ ಜಯತು ವಾದಿ ಗಜ ಪಂಚಾನನ 
ಜಯ ಜಯತು ಚಾರ್ವಾಕ ಗರ್ವ ಪರ್ವತ ಕುಲಿಶ 
ಜಯ ಜಯ ಜಗನ್ನಾಥ ಮಧ್ವನಾಥ || 28 ||

ತುಂಗ ಕುಲ ಗುರು ವರನ ಹೃತ್ಕಮಲದಲಿ ನಿಲಿಸಿ 
ಭಂಗ ವಿಲ್ಲದೆ ಸುಖದ ಸುಜನಕೆಲ್ಲ 
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ 
ರಂಗವಿಠಲನೆಂದು ನೆರೆ ಸಾರಿರೈ || 29 ||

Madhwanama Phalashruti by Shri Jagannathadasa in Kannada

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವರಿಗೆ || 1 ||

ಪುತ್ರರಿಲ್ಲದವರು ಸತ್ಪುತ್ರರೈದುವನು
ಸರ್ವತ್ರದಲಿ ದಿಗ್ವಿಜಯವಹುದನುದಿನ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ || 2 ||

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪಕಳೆದಖಿಲ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು || 3 ||

ನಿಮ್ಮ ಅನಿಸಿಕೆ ಅಥವಾ ಬೇರೇ ಯಾವದಾದರೂ ಹಾಡಿನ ಸಾಹಿತ್ಯ (ಲಿರಿಕ್ಸ್) ಬೇಕಾದರೆ ನಮ್ಮ ಕಮೆಂಟ್ಸ್ ನಲ್ಲಿ ತಿಳಿಸಿ

Madhwanama Lyrics In English

Composed by : Shri Shri Shripadaraja

Jaya jaya jagatrana,
jagadolage sutrana
Akhila guna sadhdhama madhvanama || Pa ||

Ava kachchhapa rupa dinda landodakava
Ovi dharisida sheshamurutiyanu
Avavana balivididu hariya suraraiduvaro
A vayu namma kula guru rayanu || 1 ||

Avavanu dehadolagiralu hari ta nelesihanu
Avavanu tolage hari ta tolaguva
Avavanu dehadolahorage niyamakanu
A vayu namma kula guru rayanu || 2 ||

Karanabhimani suraru dehava bidalu
Kuruda kivuda mukanendenisuva
Parama mukhyaprana tolagala dehavanu
Aritu penanendu pelvaru budhajana || 3 ||

Surarolage nararolage sarvabhutagalolage
Parataranenisi nemadi (niyamisi) nelesiha
Hariyanallade bageyanannyaranu lokadolu
Gurukulatilaka mukhya pavamananu || 4 ||

Hanumanta avatara

Treteyali raghupatiya seve maduvenendu
Vatasuta hanumantanendenisida
Potabhavadi taranibimbake langhisida
Itagene yaru murlokadolage || 5 ||

Taranigabhimukhavagi shabdashastrava pathisi
Uravanisi hindumundagi nadeda
Parama pavamana udayasta shailagala
Bharadi aidida etagupameyunte || 6 ||

Akhilavedagala sarava pathisidanu munnalli
Nikhila vyakaranagala iva pelida
Mukhadalli kinchidapashabda ivagillendu
Mukhyapranananu ramananukarisida || 7 ||

Taranisutananu kayda sharadhiyanu neredati
Dharanisuteyala kandu danujarodane
Bharadi ranavanemadi gelidu divyastragala
Uruhi lankeya banda hanumantanu || 8 ||

Harige chudamaniyanittu harigala kudi
Sharadhiyanu katti bahu rakkasaranu
Orisi ranadali dashashirana hudigutti ta
Mereda hanumanta balavanta dhira || 9 ||

Uragabandhake siluki kapivararu mai mareye
Taranikulatilakanagneyane tali
Girisahita sanjivanava kittu tanditta (tanditta)
Harivarage sariyunte hanumantage || 10 ||

Vijaya raghupati mechchi dharanisuteyaligiye
Bhajisi mouktikada haravanu padeda
Ajapadaviyanu rama koduvenene hanumanta
Nijabhakutiyane bedi varava padeda || 11 ||

Bhima avatara

Aa marutane bhimanenisi dvaparadi
Somakuladalli janisi partharodane
Bhimavikrama rakkasara muridottida
Aa mahima namma kulagururayanu || 12 ||

Karadinda shishubhavanada bhimana bidalu
Giriyodedu shatashrungavendenesitu
Harigala harigalim karigala karigalim
Areda viranige sura nararu sariye || 13 ||

Kurupa garalavanikke nereyundu tegi
Uragagala melbidalu adanorasida
Aragina maneyalli uriyanikkalu dhira
Dharisi jahnavigoyda tannanujara || 14 ||

Allidda baka hidimbakaremba rakkasara
Nilladorisida lokakantakaranu
Ballidasurara gelidu droupadi karavididu
Yella sujanarige harushava birida || 15 ||

Rajakula vajranenisida magadhana sili
Rajasuyayagavanu madisidanu
Ajiyolu kouravara balava savaruvenendu
Mujagavariye kankanakattida || 16 ||

Danavara savarabekendu byaga
Mananidhi droupadiya manadingitavanaritu
Kananava pokku kimmiradigala muridu
Maninige sougandhikavane tanda || 17 ||

Durula kichakanu droupadiya cheluvikege
Marulagi karakariya madalavana
Garadimaneyolu barasi orisi avananvayava
Kurupanattida mallakulava savarida || 18 ||

Kouravara bala savari vairigala neggotti
Orante kouravana muridu mereda
Vairi dushyasanana ranadali edegedehi (todeya laddagedahi)
Viranarahariya lileya torida || 19 ||

Gurusutanu sangaradi narayanastravanu
Uravanisi bidalu shastrava bisutaru
Harikrupeya padedirda bhima hunkaradali
Hariya divyastravanu nere attida || 20 ||

Chandavikrama gadegondu ranadolage bhu
Mandaladolidiradanta khalaranella
Hindi bisutida vrukodarana pratapavanu
Kandu nilluvararu tribhuvanadolu || 21 ||

Narirodana keli manamarugi gurusutana
Harhididu shiroratna kitti tegeda
Niroladagidda duryodhanana horagedahi
Uruyuga tanna gadeyinda murida || 22 ||

Madhva avatara

Danavaru kaliyugadolavatarisi vibhudarolu
Venana matavanaruhaladanaritu
Gyani ta pavamana bhutaladolavatarisi
Mananidhi madhvakhyanendenisida || 23 ||

Arbhakatanadolaidi badariyali madhvamuni
Nirbhayadi sakala shastragala pathisida
urviyolu amnaya tatvada margavanu)
Orva madhvamuni torda sujanarge|| 24 ||

Ekavinshati kubhaṣyagala beranu taridu
shrikararcitanolume shastra rachisi
lokatrayadoliddasuraru alisuvante
a kamalanabhayatinikarakoreda || 25 ||

Sarvesha hara, vishwa ella ta pusiyemba
Durvadigala matava nere khandisi
Sarvesha hari, vishwa satyavendaruhida
Sharvadigirvana santatiyali || 26 ||

Badarikashramake punarapiyaidi vyasamuni
Padakeragi akhila vedarthagalanu
Padumanabhana mukhadi tilidu brahmatvavaidida
Madhvamunirayagabhivandipe || 27 ||

Jaya jayatu durvadimatatimira martanda
Jaya jayatu vadigajapanchanana
Jaya jayatu charvakagarvaparvata kulisha
Jaya jayatu jagannatha madwanatha || 28 ||

Tungakulaguruvarana hrutkamaladolu nelesi
Bhangavillada sukhava sujanakella
Hingade koduva guru madhwantaratmaka
Rangaviththalanendu nere sarirai || 29 ||

Madhwanama Phalashruti by Shri Jagannathadasa in English

Soma suryoparagadi gosahasragaḷa
bhumidevarige suranadiya tatadi
shrimukundarpanavenuta kotta phalavakku
i madhvanama baredodidavarige || 1 ||

Putrarilladavaru satputraraiduvanu
sarvatradali digvijayavahudanudina
shatrugalu keḍuvarapamrutyu baralanjuvudu
sutranamakana sanstuti matradi || 2 ||

shripadaraya pelida madhvanama sam
tapakaledakhila saukhyavanivudu
shripati jagannathavithalana tori bhava
kuparadinda kade hayisuvudu || 3 ||

Madhwanama Song By Shri Putturu Narasimhanayak

Madhwanama Song By Shri Venugopal.K

14 thoughts on “ಮಧ್ವನಾಮ | Madhwanama Lyrics | Kannada | English”

  1. Shobha Sripathi

    Madhwa stuthi yalli samanyavagi innondhu para baruththade. “Ekavimshathi kubhashyada beranu taridu Shreekararchitha olume shastra rachisi, Lokatrayadolagidda suraru aalisuvanthe aa kamalanabha yathi nikhara koreda.”

  2. Shobha Sripathi

    Jagannathadasaru bareda Phala shruthiya bittu hogide. E madwanamadalli. Ene aadaru nimma e prasthuthi abhinandanarha vaadaddu

Leave a Comment

Your email address will not be published. Required fields are marked *