Vadiraja Kavacha Lyrics In Kannada

ಶ್ರೀ ವಾದಿರಾಜ ಕವಚ | ಶ್ರೀ ಪಂಢರಿನಾಥ ವಿಠಲದಾಸರು|Vadiraja Kavacha | Lyrics In Kannada

ರಚನೆ : ಶ್ರೀ ಪಂಢರಿನಾಥ ವಿಠಲದಾಸರು

Also see : Shri Vadiraja Kavacha Lyrics In English

Shri Vadiraja Kavacha Lyrics In Kannada | ಶ್ರೀ ವಾದಿರಾಜ ಕವಚ

ಸ್ಮರಣೆ ಮಾಡಿರೋ ಸೋದೆ ವಾದಿರಾಜರ
ಮರುತ ಪಟ್ಟಕೇ ಮುಂದೆ ಬರುವ ರಾಜರ || ಪ ।।

ಯತಿಯುವಾಗೀಶರ ಕರಜಖ್ಯಾತರ
ಹಿತವ ಕೊಡುವರ ಇದ್ದ ದುರಿತ ಕಳೆವರ || ೧ ।।

ರಾಮಾಚಾರ್ಯರ ಗೌರಿ ಪ್ರೇಮಪುತ್ರರ
ಸೋಮಶೇಖರಗೆ ಇವರು ಗುರುಗಳೆನಿಪರ || ೨ ।।

ಗೃಹದ ಬಾಹ್ಯ ಗದ್ದೆ ಯಲಿ ಜನಿಸಿ ಮೆರೆದರ
ಮಹಾಮಹಿಮರಾ ಲಾತವ್ಯ ಪದಸ್ಥ್ರರ || ೩ ।।

ಭೂವರಾಹನಾ ಪಾದ ಭಜಿಪ ಶ್ರೇಷ್ಠರ
ಭೂವರಾಹನಾ ನಾಮದಲ್ಲಿ ಮೆರೆದರ || ೪ ।।

ಸಕಲ ಕ್ಷೇತ್ರವ ಕಂಡು ವರ್ಣಿಸಿಪ್ಪರ
ಸಕಲ ಸುಜನರ ಸೇವೆಗೊಂಡು ಕಾಯ್ವರ || ೫ ।।

ಶಾಲಿಗ್ರಾಮದ ಹಾರ ಹರಿಗೆ ಇತ್ತರ
ಶಾಲ್ಮಲೀ ತೀರದಲ್ಲಿ ತಪವಗೊಂಡರ || ೬ ।।

ಪಂಢರಾಪುರಕೆ ಹೋಗಿ ಹರಿಯ ಕಂಡರ
ಪಾಂಡುರಂಗನನ್ನು ಕಂಡು ಹರುಷಗೊಂಡರ || ೭ ।।

ರುಕ್ಮಿಣೀಶ ವಿಜಯ ರಚಿಸಿ ಸ್ತುತ್ಯರಾದರಾ
ರುಕ್ಮಿಣೀಶ ಕರ್ತೃವೆಂದು ಅರ್ಪಿಸಿಪ್ಪರ || ೮ ।।

ಮದುವೆಕಾಲದಲ್ಲಿ ಸತ್ತ ವರನ ಕಾದರಾ
ಮುದದಿ ನೆರೆದ ಜನರಿಗೆಲ್ಲ ಮುದವನಿತ್ತರ || ೯ ।।

ಮಂತ್ರ ರೇಖೆ ರಚಿಸಿ ನಕ್ರ ಗಳನು ಆಟ್ದರ
ಮಂತ್ರ ವಾದಿ ತಂತ್ರವನ್ನು ಬಯಲು ಮಾಡ್ದರ || ೧೦ ।।

ಕ್ಲಿಷ್ಟ ಭಾರತದ ಪದಕೆ ಅರ್ಥ ಬರೆದರ
ಶ್ರೇಷ್ಠ ಮಾತೆ ವಚನವನ್ನು ಮಾನ್ಯ ಮಾಡ್ದರ || ೧೧ ।।

ಲೋಭಿಯನ್ನು ಕಂಡು ಶಾಲಿಗ್ರಾಮವಿತ್ತರಾ
ಲೋಭಿ ಧಾರಾಳಿಯಾದ ದಯದಿ ಗುರುವರಾ || ೧೨ ।।

ವಾದಿಗಳನು ವಾದದಲ್ಲಿ ಗೆದ್ದ ರಾಜರಾ
ವೇದವ್ಯಾಸರನ್ನು ಬದರಿಯಲ್ಲಿ ಕಂಡರಾ || ೧೩ ।।

ಬಂಡೆಸೀಳಿ ರಾಜನೀಗೆ ದ್ರವ್ಯ ವಿತ್ತರಾ
ಕಂಡು ಕರುಣಿ ವಿಠ್ಠಲನ್ನ ಇಟ್ಟುಕೊಂಡರಾ || ೧೪ ।।

ಪ್ರಸಂಗ ಆಭರಣ ತೀರ್ಥ ಪ್ರಶಸ್ತಿ ಪಡೆದರಾ
ಅಸದ್ರುಶರು ರಾಜರೆಂಬ ಖ್ಯಾತಿ ಪಡೆದರಾ || ೧೫ ।।

ಭೂತಗಣದ ಬೀಡಿನಲ್ಲಿ ಹರನ ನಿಲಿಸಿದ
ಖ್ಯಾತವಾಯ್ತು ಬೀಡು ಧರ್ಮಸ್ಥಳವು ಎನ್ನುತಾ || ೧೬ ।।

ದಂಡದಿಂದ ದಂಡ ತೀರ್ಥ ಉಂಟು ಮಾಡಿದ
ಕಂಡು ಹರುಷ ಪಟ್ಟರೆಲ್ಲ ಪುರದ ಬಹುಜನ || ೧೭ ।।

ಎರಡು ಮಾಸ ಪೂಜೆ ಎರಡು ವರುಷ ಮಾಡಿದ
ಪರಮ ಪುಣ್ಯ ಕ್ಷೇತ್ರ ಉಡುಪಿ ಯಲ್ಲಿ ಕ್ರಿಷ್ಣ ನ || ೧೮ ।।

ಭೂತರಾಜ ಗುರು ಅಯ್ಯ ವಾದಿರಾಜರಾ
ಪ್ರೀತಿಯಿಂದ ಸ್ತೋತ್ರ ಮಾಡೆ ಒಲಿದು ಕಾಯ್ವರಾ || ೧೯ ।।

ಮಗುವ ಕಂಡರ ಮಾಯದ ಮಗುವ ಕಂಡರ
ನಗುತಲಿದ್ದ ಕ್ರಿಷ್ಣ ನೆಂಬ ಮಗುವ ಕಂಡರ || ೨೦ ।।

ಸ್ತುತ್ಯ ವೈಕುಂಠ ದಾಸ ರನ್ನು ನೋಡಿದ
ಮತ್ತೆ ದಾಸೋತ್ತಮರು ಎಂದು ಪೊಗಳಿದ || ೨೧ ।।

ಪಂಚ ವೃಂದಾವನದಿ ಪಂಚರೂಪನಾ
ಮುಂಚೆ ಸನ್ನಿಧಾನವನ್ನು ಅಲ್ಲಿ ಬರಿಸಿದ || ೨೨ ।।

ಮೂರು ವಿಕ್ರಮನ ರಥದ ಉತ್ಸವ ಮಾಡಿದ
ಕಾರಣಾತ್ಮಕ ಸಾರ್ವಭೌಮ ನನ್ನು ನಿಲಿಸಿದ || ೨೩ ।।

ವೇದ ವೇದ್ಯ ವೇದ ನಿಧಿಯ ವಿಶ್ವ ಪ್ರೀಯರಾ
ಮೋದದಿಂದ ಕಾದು ಆಖ್ಯಾನ ಪೇಳಿದ || ೨೪ ।।

ಕನಕದಾಸ ರಾಯರನ್ನು ಕಂಡು ಹಿಗ್ಗಿದಾ
ಕನಕವೆಂದಗ್ರಹಿಸಿ ಇವರ ಜನಕೆ ಸಾರಿದಾ || ೨೫ ।।

ಹರಿಯ ಕಂಡು ಅವನ ಪುರಕೆ ಪಯಣ ಬೆಳೆಸಿದಾ
ಹರಿಯ ಶ್ರೇಷ್ಠ ದಾಸರೆಂಬ ವಾದಿರಾಜರಾ || ೨೬ ।।

ವಾದಿರಾಜ ಕವಚವನ್ನು ದಿನದಿ ಪಠಿಪರಾ
ಮೋದದಿಂದ ಕಾಯ್ವೆನೆಂದು ಹರಿಯು ನುಡಿಸಿದ || ೨೬ ।।

ಇವರ ಚರಿತೆ ಏನು ಬಲ್ಲ ಮದಡ ಮಾನವ
ಕವಿಯು ಪಂಢರಿನಾಥ ವಿಠಲ ಇದನು ಪೇಳಿದ || ೨೭ ।।

Shri Vadiraja Kavacha In Kannada

Vadiraja Kavacha Kannada

1 thought on “ಶ್ರೀ ವಾದಿರಾಜ ಕವಚ | ಶ್ರೀ ಪಂಢರಿನಾಥ ವಿಠಲದಾಸರು|Vadiraja Kavacha | Lyrics In Kannada”

  1. Pingback: Shri Vadiraja Kavacha Lyrics | In English | Shri Pandarinatha Vitthala Dasa - Holagi Shri Vadiraja Kavacha Lyrics | In English | Shri Pandarinatha Vitthala Dasa

Leave a Comment

Your email address will not be published. Required fields are marked *