Innashtu Bekenna Hrudayakke Rama

Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದವರು ಯಾರು? (Who Has Written Innashtu Bekenna Hrudayakke Rama ?)

‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಅಥವಾ ‘ರಾಮ ರಾಮ’ ಹಾಡು ಬರೆದವರು ಡಾ|| ಗಜಾನನ ಶರ್ಮಾ ಅವರು.
ಡಾ|| ಗಜಾನನ ಶರ್ಮಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಇಂಜಿನೀಯರ್ ಆಗಿ ನಿವೃತ್ತರಾದವರು.


ಡಾ|| ಗಜಾನನ ಶರ್ಮಾ ಅವರು ಅನೇಕ ಕಾದಂಬರಿ, ಕಥೆ, ಕವಿತೆ,ಮಕ್ಕಳ ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.
ಅವರು ಪ್ರಕಟಿಸಿದ ಪುಸ್ತಕಗಳಲ್ಲಿ ಪ್ರಮುಖವಾದವುಗಳು:
ಪುನರ್ವಸು, ಚೆನ್ನಭೈರಾದೇವಿ , ಗೋಮುಖ,ಸರ್ ಎಮ್ . ವಿಶ್ವೇಶ್ವರಯ್ಯ – ಮೈಸೂರು ವಿಶ್ವವಿದ್ಯಾಲಯದ ರೂವಾರಿಗಳು ಇತ್ಯಾದಿ.

Note: Click on the Book names above to buy online!!

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದ ಹಿನ್ನೆಲೆ (Background of Writing Innashtu Bekenna Hrudayakke Rama Lyrics)

ಡಾ|| ಗಜಾನನ ಶರ್ಮಾ ಅವರು ಶ್ರೀ ರಾಮಚಂದ್ರಾಪುರ ಮಠದ ಅನುಯಾಯಿಗಳು. ಶ್ರೀ ರಾಮಚಂದ್ರಾಪುರ ಮಠದ ಸ್ವಾಮಿಗಳ ಶಿಷ್ಯರು. ಶ್ರೀ ಸ್ವಾಮಿಗಳ ಆದೇಶದ ಮೇಲೆ ಬರೆದ ಹಾಡು ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’.


ನಿಮಗೆ ಗೊತ್ತೇ, ಡಾ|| ಗಜಾನನ ಶರ್ಮಾ ಅವರಿಗೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡಿಗೆ ಸ್ಪೂರ್ತಿ ಒಂದು ದೂರದರ್ಶನ ಜಾಹಿರಾತು.
ಆ ಜಾಹಿರಾತಿನಲ್ಲಿ ಸಚಿನ್ ತೆಂಡೂಲ್ಕರ್ ‘ ಏಹ್ ದಿಲ್ ಮಾಂಗೆ ಮೋರ್’ ಅಂದರಂತೆ. ಅದು ಶ್ರೀ ಗಜಾನನ ಅವರಿಗೆ ಅದು ‘ಏಹ್ ದಿಲ್ ಮಾಂಗೆ ರಾಮ್’ ಅಂತ ಕೇಳಿಸಿತ್ತಂತೆ !!
ಅದೇ ಸ್ಪೂರ್ತಿಯಿಂದ ಅವರು ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂದು ಕವಿತೆ ಬರೆದರಂತೆ. ನಂತರ ಅದನ್ನು ಶ್ರೀ ಶ್ರೀಗಳಿಗೆ ತೋರಿಸಿದಾಗ ಆನಂದ ಪಟ್ಟರಂತೆ. ಅವರೇ ಆ ಹಾಡಿನಲ್ಲಿ ‘ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ’ ಸಾಲನ್ನು ಜೋಡಿಸಿದರಂತೆ.


ಈ ಹಾಡಿಗೆ ಡಾ|| ಗಜಾನನ ಶರ್ಮಾ ಅವರ ಪುತ್ರರಾದ ಶ್ರೀ ಸಾಕೇತ ಶರ್ಮಾ ಅವರೇ ಸಂಗೀತ ಸಂಯೋಜನೆ ಮಾಡಿದರಂತೆ.
ಅದೇ ಹಾಡು ಶ್ರೀಗಳ ಚಾತುರ್ಮಾಸ್ಯ ವೃತ್ತದಲ್ಲಿ ದಿನವೂ ಹಾಡುತ್ತಿದ್ದರಂತೆ ಶ್ರೀ ಗಜಾನನ ಅವರ ಶ್ರೀಮತಿಯವರು.


ರಾಮನವಮಿಯ ಉತ್ಸವದಲ್ಲಿ ವಿಶೇಷವಾಗಿ ಹಾಡಲಾಗುತ್ತದೆಯೆಂತೆ .

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಲಿರಿಕ್ಸ್(Innashtu Bekenna Hrudayakke Rama Lyrics In Kannada)

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ |
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ |
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ |
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ |
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ |
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ |
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ |

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ |
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||

ರಾಮ ರಾಮ ರಾಮ ರಾಮ

ಒಳಿತಿನೆಡೆ ಮುನ್ನಡೆವ ಮನವ ಕೊಡು ರಾಮ |
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ |
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ |
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ |
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ |
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ |
ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ |
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ |

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ |
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||

ರಾಮ ರಾಮ ರಾಮ ರಾಮ

ಕೌಸಲ್ಯೆಯಾಗುವೆನು ಮಡಿಲಲಿರು ರಾಮ |
ವೈದೇಹಿಯಾಗುವೆನು ಒಡನಾಡು ರಾಮ |
ಪಾದುಕೆಯ ತಲೆಯಲಿಡು ಭಾರತನಾಗುವೆ ರಾಮ |
ಸಹವಾಸ ಕೊಡು ನಾನು ಸೌಮಿತ್ರಿ ರಾಮ |
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ |
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ |
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ |

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ |
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||

ರಾಮ ರಾಮ ರಾಮ ರಾಮ

ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ |
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ |
ನಾ ವಿಭೀಷಣ ಶರಣುಭಾವ ಕೊಡು ರಾಮ |
ನನ್ನೊಳಿಹ ರಾವಣಗೆ ಸಾವ ಕೊಡು ರಾಮ |
ಕಣ್ಣೀರ ಕರೆಯುವೆನು ನನ್ನತನ ಕಳೆ ರಾಮ |
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ |

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ |
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||

ರಾಮ ರಾಮ ರಾಮ ರಾಮ

ಋತ ನೀನೆ ಋತು ನೀನೆ ಶೃತಿ ನೀನೆ ರಾಮ |
ಮತಿ ನೀನೆ ಗತಿ ನೀನೆ ದೃತಿ ನೀನೆ ರಾಮ |
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ |
ಪೂರ್ಣ ನೀ ಪ್ರಕಟ ನೀ ಆನಂದ ರಾಮ |
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ |
ಗುರಿ ನೀನೆ ಗುರು ನೀನೆ ಅರಿವು ನೀ ರಾಮ |
ಗುರ ನೀನೆ ಗುರು ನೀನೆ ಅರಿವು ನೀ ರಾಮ |
ರಘುರಾಮ ರಘುರಾಮ ರಘುರಾಮ ರಾಮ |
ನಗುರಾಮ ನಗರಾಮ ಜಗರಾಮ ರಾಮ |

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ |
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ||

Download PDF -Innashtu Bekenna Hrudayakke Rama Lyrics In Kannada | English

Innashtu Bekenna Hrudayakke Rama Lyrics In English

Innashtu Bekenna Hrudhayakke Rama |
Ninnashtu Nemmadhiyu Ellihudhu Rama |
Innashtu Bekenna Hrudhayakke Rama |
Ninnashtu Nemmadhiyu Ellihudhu Rama |
Rama Rama Rama Rama ||

Innashtu Bekenna Hrudhayakke Rama |
Ninnashtu Nemmadhiyu Ellihudhu Rama ||
Rama Rama Rama Rama |

Ninnishtadhanthenna Ittiruve Rama |
Nannishtadhanthella Kottiruve Rama |
Kashtagala Kodabeda Enalare Rama |
Kashta Sahisuva Sahane Kodu Nanage Rama |
Kashta Sahisuva Sahane Innashtu Rama |
Kashta Sahisuva Sahane Ninnashtu Rama |
Rama Rama Rama Rama

nnashtu Bekenna Hrudhayakke Rama |
Ninnashtu Nemmadhiyu Ellihudhu Rama ||
Rama Rama Rama Rama,

Olithinade Munnadeva Manava Kodu Rama |
Selathakke Sigadhanthe Sthirathe Kodu Rama |
Ninnegala Papagala Sonneyagisu Rama |
Nalegalu Punyagala Hadhiyagali Rama |
Nanna Balige Ninna Hasiva Kodu Rama |
Nanna Tholige Ninna Kasuva Kodu Rama |
Kannu Kaledaru Ninna Kanasu Kodu Rama |
Nanna Haranake Ninna Charana Kodu Rama |

Innashtu Bekenna Hrudhayakke Rama |
Ninnashtu Nemmadhiyu Ellihudhu Rama ||
Rama Rama Rama Rama

Kousalyeyaguvenu Madilaliru Rama |
Vydhehiyaguvenu Odanadu Rama |
Padhukeya Thaleyalidu Bharathanaguve Rama |
Sahavasa Kodu Nanu Soumitri Rama |
Sugrivanaguvenu Sneha Kodu Rama |
Hanuma Naguve Ninna Seva Kodu Rama |
Hanuma Naguve Ninna Seva Kodu Rama |

Shabariyaguve Ninna Bhava Kodu Rama |
Raghu Rama Raghu Rama Raghu Rama Raghu Rama |

Innashtu Bekenna Hrudhayakke Rama |
Ninnashtu Nemmadhiyu Ellihudhu Rama ||
Rama Rama Rama Rama

Madilalli Marana Kodu Na Jatayuvu Rama |
Mudiyalli Adiyanidu Na Ahalyeyu Rama |
Na Vibhishana Sharanubhava Kodu Rama |
Nannoliha Ravanage Sava Kodu Rama |
Kanniru Kareyuvenu Nannathana Kale Rama |
Ninnolage Karaguvenu Nirmoha Kodu Rama |
Ninnolage Karaguvenu Nirmoha Kodu Rama |
Raghu Rama Raghu Rama Raghu Rama Raghu Rama

Innashtu Bekenna Hrudhayakke Rama |
Ninnashtu Nemmadhiyu Ellihudhu Rama ||
Rama Rama Rama Rama,

Rutha Nine Ruthu Nine Sruthi Nine Rama |
Mathi Nine Gathi Nine Dhruthi Nine Rama |
Arambha Asthithva Anthya Ni Rama |
Purna Ni Prakata Ni Ananda Rama |
Hara Nine Hari Nine Brahma Ni Rama |
Hara Nine Hari Nine Brahma Ni Rama |
Guri Nine Guru Nine Arivu Ni Rama |
Guri Nine Guru Nine Arivu Ni Rama |
Raghu Rama Raghu Rama Raghu Rama Raghu Rama |
Nagu Rama Naga Rama Jagarama Rama |

Innashtu Bekenna Hrudhayakke Rama |
Ninnashtu Nemmadhiyu Ellihudhu Rama ||
Rama Rama Rama Rama |

Innashtu Bekenna Hrudhayakke Rama |
Ninnashtu Nemmadhiyu Ellihudhu Rama |
Rama Rama Rama Rama |

Innashtu Bekenna Hrudayakke Rama Video Songs

Innashtu Bekenna Hrudayakke Rama song by Subrabha KV
Innashtu Bekenna Hrudayakke Rama song by ShreeHarsha

Leave a Comment

Your email address will not be published. Required fields are marked *