Karuniso Ranga

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು

“Karuniso Ranga Karuniso” is the keerthane written by Shri Purandaradasa.

In this song, he pleads lord Narayana to bless us even though we are not capable of performing bhakti, vruta, namasmarane, seve etc.

Karuniso Ranga Karuniso Song Lyrics In Kannada

ಕರುಣಿಸೋ ರಂಗ ಕರುಣಿಸೋ 
ಕೃಷ್ಣ ಕರುಣಿಸೋ ರಂಗ ಕರುಣಿಸೋ| 
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಪ || 

ರುಕುಮಾಂಗದನಂತೆ ವ್ರತವ ನಾನರಿಯೆ | 
ಶುಕಮುನಿಯಂತೆ ಸ್ತುತಿಸಲು ಅರಿಯೆ | 
ಬಕವೈರಿಯಂತೆ ಧ್ಯಾನವ ಮಾಡಲರಿಯೇ| 
ದೇವಕಿಯಂತೆ ಮುದ್ದಿಸಲೂ ಅರಿಯೆನೋ || 1 ||

ಗರುಡನಂದದಿ ಪೊತ್ತು ತಿರುಗಲು ಅರಿಯೆ | 
ಕರಿಯಲು ಅರಿಯೆ ಕರಿರಾಜ ನಂತೆ | 
ವರಕಪಿಯಂತೆ ದಾಸ್ಯವ ಮಾಡಲರಿಯೇ | 
ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || 2 ||

ಬಲಿಯಂತೆ ದಾನವ ಕೊಡಲು ಅರಿಯೆ | 
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | 
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ | 
ಸಲಹೋ ದೇವರ ದೇವ ಶ್ರೀ ಪುರಂದರವಿಠ್ಠಲ || 3 ||

Karuniso Ranga Karuniso Song Meaning In Kannada

“ಕರುಣಿಸೋ ರಂಗ ಕರುಣಿಸೋ” ಕೀರ್ತನೆಯಲ್ಲಿ ಪುರಂದರದಾಸರು ಕೃಷ್ಣನಲ್ಲಿ ನಿಮ್ಮ ನಾಮಸ್ಮರಣೆ ಮರೆಯದಂತೆ ಕರುಣಿಸು ಎಂದು ಮೊರೆಯಿಡುತ್ತಾರೆ. ಇಲ್ಲಿ ನವ ವಿಧವಾದ ಭಕ್ತಿ ನಾನು ಮಾಡುವದಿಲ್ಲ ಆದರೂ ನನ್ನನ್ನು ಕರುಣಿಸು ಎಂದು ಹಾಡುತ್ತಾರೆ.


ಅದಕ್ಕೆ ಹಲವಾರು ದೃಷ್ಟಾಂತಗಳನ್ನು ಕೊಡುತ್ತಾರೆ.

ರುಕುಮಾಂಗದ ರಾಜನಂತೆ ಏಕಾದಶಿ ವೃತ ಆಚರಿಸುವ ನಿಷ್ಠೆ ಇಲ್ಲ, ಶುಕ ಮುನಿಗಳಂತೆ ಪುರಾಣ, ದೇವರ ಮಹಿಮಾ ಪೂರ್ವಕ ಸ್ತುತಿಗಳನ್ನು ಮಾಡಲು ಬರುವದಿಲ್ಲ, ಬಕಾಸುರನ ಸಂಹಾರ ಮಡಿದ ಭೀಮಸೇನ ದೇವರಂತೆ ದೇವರೇ ನಿನ್ನ ಧ್ಯಾನ ಮಾಡಲು ಬರುವದಿಲ್ಲ, ದೇವಕಿಯಂತೆ ನಿನ್ನನ್ನು ಮಗುಯೆಂದು ತಿಳಿದು ಮುದ್ದಿಸಲು ಗೊತ್ತಿಲ್ಲ ಎಂದು ಹೇಳಿತ್ತಾರೆ.

ಎರಡೆನೇಯ ನುಡಿಯಲ್ಲಿ, ಗರುಡ ದೇವರಂತೆ ನಿನ್ನ ವಾಹನನಾಗಿ ನಿನ್ನ ಹೊತ್ತುಕೊಂಡು ಇರಲು ಗೊತ್ತಿಲ್ಲ, ಗಜೇಂದ್ರಮೋಕ್ಷದ ಪ್ರಕರಣದಲ್ಲಿ ಹೇಗೆ ಗಜರಾಜ ಕರೆದನೋ ಹಾಗೆ ನಿನ್ನನು ಕರೆಯಲು ಬರುವದಿಲ್ಲ ಕೃಷ್ಣ, ವಾಯುದೇವರಂತೆ ನಿನ್ನ ದಾಸ್ಯವ ಮಾಡಲು ಗೊತ್ತಿಲ್ಲ , ಇನ್ನು ಲಕ್ಷ್ಮೀದೇವಿಯಂತೆ ನಿನ್ನ ಮೋಹಿಸಲು ಸಾಧ್ಯವೇ ಎಂದು ಮೊರೆಯಿಡುತ್ತಾರೆ.

ಮೂರನೇಯ ನುಡಿಯಲ್ಲಿ, ಬಳಿ ಚಕ್ರವರ್ತಿಯಂತೆ, ದಾನ ನೀಡಲು ಬರುವದಿಲ್ಲ, ಪ್ರಹ್ಲಾದರಾಜರಂತೆ ನಿನ್ನ ಮೇಲಿನ ನಂಬಿಕೆ, ನೀನು ಇದ್ದು ನಮ್ಮನ್ನು ರಕ್ಷಿಸುತ್ತೀಯಾ ಅಂತ ಧೃಡವಾದ ಭಕ್ತಿ, ಛಲ ಇಲ್ಲ, ಅರ್ಜುನನಂತೆ ನಿನ್ನ ಸಖ್ಯವ ಮಾಡಲು ಅಸಾಧ್ಯ, ಹೀಗಿದ್ದರೂ ದೇವರದೇವನದ ಸರ್ವೋತ್ತಮನಾದ ದೇವರೇ, ನನ್ನ ಮೇಲೆ ಕರುಣೆ ಇಟ್ಟು ನಿನ್ನ ಸ್ಮರಣೆ ಎಂದೆಂದೂ ಮರೆಯದಂತೆ ಮಾಡು ಎಂದು ಬೇಡುತ್ತಾರೆ.

Karuniso Ranga Karuniso Song Lyrics In English

Karuniso ranga karuniso krishna
Karuniso ranga karuniso |
Hagalu irulu ninna samrane Mareyadanthe || Pa ||

Rukmangadanante vrathava nanariye |
Shuka muniyanthe struthisalu ariye |
Bakavairiyenthe dhyanava maadalariye |
Devakiyanthe muddisaloo ariye krishna || 1 ||

Garudanandadi pottu thirugalu ariye |
Kariyalu ariye Kari Raajanante |
Vara kapiyanthe daasyava maadalariye |
Siriyante neredu mohisalu ariye krishna || 2 ||

Baliyante daanava kodalu ariye |
Bhakthi cheluvanariye Prahalladanante |
Varisalu ariye Arjunanante sakhanaagi |
Salaho devara deva salaho devara deva |
Purandara vittala sri Purandara vittala || 3 ||

Karuniso Ranga Karuniso Song Meaning In English

In the song “Karuniso Ranga Karuniso”, the Shri Purandaradas pleads lord Krishna to bless us with his namasmarane. Though I do not practice nava vidha bhakuti, still bless us with your namasmarane .
He gives several illustrations.

As a king of Rukumangada, I do not follow Ekadashi vruta with at most dedication, Like Shuka Muni, I do not praise you, like Bheemsena, who killed Bakasura, I do not meditate, I do not shower love as mother Devaki.

In the second part, Purandaradasa says, I can not carry you always like Garuda does, In Gajendra moksha scenario, Gajendra call you with atmost devotion to save him from crocodile. I can not call you like that, Vaayu deva does your seva with supreme love and affection. I do not do that kind of seve. Then like Godess Lakshmi, I can not show love on you.

In the third, Purandaradasa says, I do no how to offer dana as Bali Chakravarthi did. I do not have devotion, bhakti, confidence as Prahladaraja had on you, I do have friendship as Arjun had with you.

Still Purandaradasa pleads lord Krishna to shower blessings with mercy so that we do not forget lord Krishna and always do his namasmarana.

2 thoughts on “[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು”

Leave a Comment

Your email address will not be published. Required fields are marked *