What is Web 3.0 In Kannada

Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ?

ವೆಬ್‌ನ ವಿಕಾಸದಲ್ಲಿ ನಾವು ಹೊಸ ಆದಿಯಲ್ಲಿದ್ದೇವೆ. ಕೆಲವು ಆರಂಭಿಕ ಪ್ರವರ್ತಕರು ಇದನ್ನು ವೆಬ್ 3.0 ಎಂದು ಕರೆಯುತ್ತಾರೆ.

ವೆಬ್ 3.0 ಅಂದರೆ ಏನು ? | What is Web 3.0 In Kannada

ನೀವು ಏನನ್ನು ಇನ್‌ಪುಟ್ ಮಾಡುತ್ತೀರೋ ಅದನ್ನು ನಿಖರವಾಗಿ ಅರ್ಥೈಸುವುದಲ್ಲದೆ, ಪಠ್ಯ, ಧ್ವನಿ ಅಥವಾ ಇತರ ಮಾಧ್ಯಮದ ಮೂಲಕ ನೀವು ತಿಳಿಸುವ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊಸ ಪ್ರಕಾರದ ಇಂಟರ್ನೆಟ್ ಅನ್ನು ಕಲ್ಪಿಸಿಕೊಳ್ಳಿ, ನೀವು ಉಪಯೋಗಿಸುವ ಎಲ್ಲಾ ವಿಷಯವು ಹಿಂದೆಂದಿಗಿಂತಲೂ ಹೆಚ್ಚು ನಿಮಗೆ ಅನುಗುಣವಾಗಿರುತ್ತದೆ. ನಿಮ್ಮ ಎಲ್ಲ ಡೇಟಾ, ಕಂಟೆಂಟ್ ನಿಮ್ಮ ಹಿಡಿತದಲ್ಲಿರುತ್ತದೆ.

ವೆಬ್ 3.0, ಬ್ಲಾಕ್‌ಚೈನ್‌ ತಂತ್ರಜ್ನ್ಯಾನ ದಲ್ಲಿ ನಿರ್ಮಿಸಲಾಗುವುದು – ಇದೇ ತಂತ್ರಜ್ಞಾನದ ಆಧಾರವಾಗಿರುವ ಬಿಟ್‌ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳು – ಕೇಂದ್ರೀಕೃತ ಆಡಳಿತ ಮಂಡಳಿಗಳು ಅಥವಾ ರೆಪೊಸಿಟರಿಗಳು ಸೇರಿದಂತೆ ಎಲ್ಲಾ ದೊಡ್ಡ ಮಧ್ಯವರ್ತಿಗಳ ಸಹಾಯವಿಲ್ಲದೇ ಕೆಲಸ ಮಾಡುವ ಗುರಿಯನ್ನು ಹೊಂದಿದೆ.

ಆದರೆ ವೆಬ್ 3.0 ಅಂದರೆ ನಿಖರವಾಗಿ ಏನು, ಅದು ಹೇಗಿರುತ್ತದೆ ಮತ್ತು ಅದು ನಮ್ಮ ಜೀವನವನ್ನು ಮುಂದಿನ ದಿನಗಳಲ್ಲಿ ಹೇಗೆ ಬದಲಾಯಿಸುತ್ತದೆ?

ವೆಬ್ 3.0 ಯ ಬಗ್ಗೆ ನಿಖರವಾಗಿ ತಿಳಿಯಬೇಕೆಂದರೆ ನಾವು ಮೊದಲು ವೆಬ್ 1.0 ಮತ್ತು ವೆಬ್ 2.0 ಬಗ್ಗೆ ತಿಳಿದುಕೊಳ್ಳಬೇಕು.

ವೆಬ್ 1.0 | Web 1.0 In Kannada

ಮೊದಲ ತಲೆಮಾರಿನ ಇಂಟರ್ನೆಟ್ . ಇದು ಜಾರಿಗೆ ಬಂದದ್ದು 1990 ರಲ್ಲಿ. ಆಗ ಡಾಟ್ ಕಾಮ್ ಬೂಮ್ (dot com boom)ಆಗಿತ್ತು. ಇದರಿಂದ ಜಗತ್ತಿನ ಮಾಹಿತಿಯನ್ನು ಪಡೆಯಲು ಅನುಕೂಲವಾಯ್ತು. ಒಂದು ಡಿಜಿಟಲ್ ಪುಸ್ತಕದ ಹಾಗೆ.

ವೆಬ್ 1.0 ಸಮಸ್ಯೆಗಳು| Web 1.0 Problems In Kannada

ಅವು ವೆಬ್ ಸೈಟ್ ನ ಸ್ಥಿರ (ಸ್ಟಾಟಿಕ್) static ಪುಟಗಳು. ಅವುಗಳಲ್ಲಿ ಓದುಗರು ಯಾವ ಬದಲಾವಣೆ/ಸಂಕಲನ ಮಾಡಲು ಬರುತ್ತಿರಲಿಲ್ಲ.
ಸಂಪೂರ್ಣ ವ್ಯವಸ್ಥೆಯು ಎಲ್ಲಾ ಇಂಟರ್ನೆಟ್ ಬಳಕೆದಾರರ ಮೇಲೆ ಅವಲಂಬಿತವಾಗಿತ್ತು.
ಕಂಟೆಂಟ್ ಒಬ್ಬ ಮಾಲೀಕರ ಹಿಡಿತದಲ್ಲಿ ಇರುತ್ತಿತ್ತು.

ಪ್ರದರ್ಶಿಸಿದ ಕಂಟೆಂಟ್ ಅನ್ನು ಉಪಯೋಗಿಸಿದಂತೆ , ಬಳಕೆದಾರರು ವೀಕ್ಷಿಸುವ ಪ್ರತಿ ಪುಟಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಆನ್‌ಲೈನ್ ಡೈರೆಕ್ಟರಿಗಳು ಅವರು ಹುಡುಕುತ್ತಿರುವ ಮಾಹಿತಿಯ ಕಡೆಗೆ ಕೊಂಡಯೊತ್ತಿದ್ದವು.

ವೆಬ್ ಡೈರೆಕ್ಟರಿಗಳು, ಸಾಫ್ಟ್ವೆರ್ ಲೈಸೆನ್ಸ್ ಇವು ವೆಬ್ 1.0 ದ ಮುಖ್ಯ ಉಪಯೋಗಗಳು.

ವೆಬ್ 2.0 | Web 2.0 In Kannada

ವೆಬ್ 2.0 ಎರಡನೇಯ ತಲೆಮಾರಿನ ಇಂಟರ್ನೆಟ್.
ಮಾಹಿತಿಯ ಹರಿವು ಮುಕ್ತವಾಯಿತು ಮತ್ತು ವೆಬ್‌ಸೈಟ್ ಮಾಲೀಕರು ಮತ್ತು ವೆಬ್‌ಸೈಟ್ ಬಳಕೆದಾರರ ನಡುವಿನ ಸಂವಹನ ಸುಧಾರಿಸಿತು.
ಈ ವಿಕಸಿತ ಇಂಟರ್ನೆಟ್ ವೆಬ ಸೈಟ್ ಗಳಲ್ಲಿ ಓದುಗರು ಕಂಟೆಂಟ್ಅನ್ನು ಬದಲಾಯಿಸಬಹುದು. ಎಡಿಟ್ ಮತ್ತು ಡಿಲೀಟ್ ಮಾಡ ಬಹುದು. ಈಗ ನಾವು ಈ ವೆಬ್ 2.0 ನಲ್ಲಿ ಇದ್ದೇವೆ.

ವೆಬ್ ಸೈಟ್ಗಳು ಡೈನಾಮಿಕ್ (Dynamic pages) ಆಗಿವೆ. ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು. ಕುಳಿತಲ್ಲಿಯೇ ರೈಲು, ಬಸ್ಸು, ಕಾರ್ ಟಿಕೆಟ್ ಬುಕ್ ಮಾಡ ಬಹುದು. ಶೇರ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ, ವ್ಯಾಪಾರ ಮಾಡ ಬಹುದು. ಸಾಫ್ಟ್ವೇರ್ ಆಸ್ ಆ ಸರ್ವಿಸ್ (Software As A Service – SAAS) ಒಂದು ಪ್ರಮುಖ ಬೆಳೆವಣಿಗೆ.
ಈಗಿನ ಸಾಮಾಜಿಕ ಜಾಲತಾಣಗಳು ಸಹ ವೆಬ್ 2.0 ನಲ್ಲಿ ಬರುತ್ತವೆ. ಇಲ್ಲಿ ಲಾಗಿನ್ ಆದವರು ಕಂಟೆಂಟ್ ಹಾಕಬಹುದು, ಫೋಟೋ, ವಿಡಿಯೋ ಹಾಕಬಹುದು. ಅದನ್ನು ಬೇರೆಯವರು ಬೇಕಾವಾದಾಗ ನೋಡಬಹುದು.

ವೆಬ್ 2.0 ಯುಗದಲ್ಲಿ ಅಭಿಪ್ರಾಯಗಳು, ಪ್ರತಿಕ್ರಿಯೆ ಮತ್ತು ಬಳಕೆದಾರರ ದೃಷ್ಟಿಕೋನಗಳ ಪ್ರಾಮುಖ್ಯತೆಯು ಬೆಳೆಯಿತು.

ವೆಬ್ 2.0 ಸಮಸ್ಯೆಗಳು| Web 2.0 Problems In Kannada

ಇಲ್ಲಿನ ಸಮಸ್ಸ್ಯೆ ಅಂದರೆ ಈ ಎಲ್ಲ ಕಂಟೆಂಟ್ ಇರೋದು,ನಿರ್ವಹಿಸುವದು ಒಂದು ಸಂಸ್ಥೆ. ಉದಾಹರಣೆಗೆ Facebook. ಇಲ್ಲಿ ನಾವು ಹಾಕಿರುವ ಮಾಹಿತಿಯನ್ನು Facebook ಅಥವಾ Meta ಕಂಪನಿ. ಮೆಟಾ ಕಂಪನಿ ಬಳೆಕೆದಾರರ ಮಾಹಿತಿಯನ್ನು ಸ್ಟೋರ್ ಮಾಡಿ ಅದನ್ನು ಜಾಹೀರಾತುದಾರರಿಗೆ ಮಾರುತ್ತದೆ. ಆ ಜಾಹಿರಾತು ಕಂಪನಿಗಳು ನಮ್ಮ ಪೋಸ್ಟ್ ಗಳ ಆಧಾರದ ಮೇಲೆ ಜಾಹಿರಾತುಗಳನ್ನು ತೋರಿಸುತ್ತದೆ.

ಇದೆ ತರಹ Google ಕಂಪನಿ ಕೆಲಸ ಮಾಡುತ್ತದೆ. ಹೀಗಾಗಿ ನಮ್ಮ ಮಾಹಿತಿಯಲ್ಲ ಮತ್ತೊಬ್ಬರ ಹಿಡಿತದಲ್ಲಿ ಇರುತ್ತದೆ.

ವೆಬ್ 3.0 | Web 3.0 In Kannada

ವೆಬ್ 2.0 ಸಂಪರ್ಕ ಮತ್ತು ಆನ್‌ಲೈನ್ ಸಂವಹನವನ್ನು ಸುಧಾರಿಸಿದರೆ, ವೆಬ್ 3.0 ಸಂಪರ್ಕ, ವಿಷಯ ಪ್ರಸ್ತುತತೆ, ವಿಷಯದ ಪ್ರಭಾವ ಮತ್ತು ಕಾರ್ಯಕ್ಷಮತೆಗೆ ತನ್ನ ಗಮನವನ್ನು ಬದಲಾಯಿಸುತ್ತದೆ.

ಈ ಮೂರನೇ ತಲೆಮಾರಿನ ವೆಬ್‌ನಲ್ಲಿ, ಸೈಟ್‌ಗಳು ಮತ್ತು ಪುಟಗಳು ಬಳಕೆದಾರರು ತಿಳಿಸುವ ಮಾಹಿತಿಯನ್ನು ಸಂಗ್ರಹಿಸುತ್ತವೆ (ಧ್ವನಿ, ಪಠ್ಯ ಅಥವಾ ಇತರ ಮಾಧ್ಯಮಗಳ ಮೂಲಕ) ಮತ್ತು ಪ್ರತಿ ಬಳಕೆದಾರರಿಗೆ ತಕ್ಕಂತೆ ಅದನ್ನು ಬುದ್ಧಿವಂತಿಕೆಯಿಂದ ಪ್ರಕ್ರಿಯೆಗೊಳಿಸುತ್ತವೆ. ವಿಭಿನ್ನ ಬಳಕೆದಾರರಿಗೆ ಒಂದೇ ವಿಷಯವನ್ನು ವಿಭಿನ್ನವಾಗಿ ಪ್ರದರ್ಶಿಸಲಾಗುತ್ತದೆ.

ಆದ್ದರಿಂದ ವೆಬ್ 3.0 ನ ಪ್ರಮುಖ ವೈಶಿಷ್ಟ್ಯವೆಂದರೆ ಡೇಟಾವು ಇನ್ನು ಮುಂದೆ ಒಂದೇ ಘಟಕದ ಅಥವಾ ಸಂಸ್ಥೆ ಅಥವಾ ಕಂಪನಿಯ ಮಾಲೀಕತ್ವದಲ್ಲಿರುವುದಿಲ್ಲ ಆದರೆ ಹಂಚಿಕೆಯ ಸಂಪನ್ಮೂಲವಾಗಿರುತ್ತದೆ.

Web 3.0 In Kannada

ವೆಬ್ ೩.0 ಯು ಬ್ಲಾಕ್ ಚೈನ್ (Blockchain) ತಂತ್ರಜ್ನ್ಯಾನದ ಮೇಲೆ ಡೆವೆಲೆಪ್ ಆಗ್ತಾ ಇದೆ. ಅಂದರೆ ಇದು ಯಾವುದೇ ಕಂಪನಿ ಅಥವಾ ಸಂಸ್ಥೆಯ ನಿಯಂತ್ರಣದಲ್ಲಿ ಇರುವದಿಲ್ಲ .

ಇದು ವಿಕೇಂದ್ರೀಕೃತ ವೆವಸ್ಥೆ(Decentralized system).

ವೆಬ್ 3.0 ಇಂಟರ್ನೆಟ್‌ನ ಹೆಚ್ಚು ‘ಪ್ರಜಾಪ್ರಭುತ್ವ’ ಆವೃತ್ತಿಯನ್ನು ರಚಿಸಲು ತಯಾರಾಗುತ್ತಿದೆ. .

ಮೇಲೆ ಹೇಳಿದ Facebook ಜಾಹಿರಾತಿನ ಉದಾಹರಣೆ ತೆಗೆದುಕೊಂಡರೆ – ಬಳಕೆದಾರರಾದ ನಾವು ಜಾಹಿರಾತನ್ನು ನಿಯಂತ್ರಿಸಬಹುದು. ಬೇಕೋ ಬೇಡವೋ ನಿರ್ಧರಿಸಬಹುದು.

Web 3 Applications Kannada

ವೆಬ್ 3.0 ಲಾಭಗಳು| Web 3.0 Advantages In Kannada

ವಿಕೇಂದ್ರೀಕೃತ ವೆವಸ್ಥೆ ಇರುವದರಿಂದ, ವೆಬ್ 3.೦ ಕ್ರಿಪ್ಟೋ ಕರೆನ್ಸಿ ಗಳಿಗೆ (Crypto currency) ಉಪಯೋಗವಾಗುತ್ತದೆ. ಡಿಜಿಟಲ್ ನಾಣ್ಯಗಳು (Digital currency)ಹೆಚ್ಚು ಚಲಾವಣೆಗೆ ಬರುತ್ತವೆ.
ಇಂಟರ್ನೆಟ್ ಈಗಿರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆ ಗಳಿಸುತ್ತದೆ. ಯಾಕೆಂದರೆ NFT -ನೋನ್ ಫುನ್ಜಿಬಲ್ ಟೋಕನ್ (Non Fungible Tokens)ಗಳ ಉಪಯೋಗ.
ವರ್ಚುಯಲ್ ರಿಯಾಲಿಟಿ (Virtual Reality) ಮತ್ತು ವರ್ಧಿತ ರಿಯಾಲಿಟಿ (ಆಗುಮೆಂಟೆಡ್ ರಿಯಾಲಿಟಿ | Augmented Reality)ಗೆ ಸಹಾಯಕಾರಿ.

ಓದಿ : ಕ್ರಿಪ್ಟೋ ಕರೆನ್ಸಿ (ಬಿಟ್ ಕಾಯಿನ್) ಹೇಗೆ ಕೊಳ್ಳುವದು ?

Also Read : How To Buy Cryptocurrency (Bitcoin) In Kannada

ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಇನ್ನೊಂದು ಮೂಲೆಯಲ್ಲಿರುವವರ ಜೊತೆ ಮೀಟಿಂಗ್ ಮಾಡಬಹುದು, ಆಟ ಆಡಬಹುದು .
ಮನೆಯಲ್ಲಿ ಕುಳಿತೇ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕುಳಿತು ಆಟ ನೋಡುವ ಅನುಭವ ಪಡೆಯಬಹುದು.

ಸಾರಾಂಶ

ವೆಬ್ 3.0 ಈಗಿರುವ ಇಂಟರ್ನೆಟ್ ಬಳಕೆಯನ್ನೇ ಬದಲಾಯಿಸುತ್ತದೆ. ಅದು ಹೆಚ್ಚಿನ ನಂಬಿಕೆಯನ್ನು ಆನ್ಲೈನ್ ವೆವಹಾರಗಳಿಗೆ ಕೊಡುತ್ತದೆ.
ಸೈಬರ್ ವಂಚನೆಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. NFT ಗಳು, ಕ್ರಿಪ್ಟೋ ನಾಣ್ಯಗಳು ಮತ್ತು ಹೆಚ್ಚು ಹೆಚ್ಚು ವರ್ಚುಯಲ್ ಜೀವನ ನಡೆಸಲಿದ್ದೇವೆ .

Leave a Comment

Your email address will not be published. Required fields are marked *