Vijayadasa Kavacha

Vijaya Kavacha | Vijayadasa Kavacha | Vyasavithala | ಶ್ರೀ ವಿಜಯದಾಸರ ಕವಚ

ರಚನೆ : ಶ್ರೀ ವ್ಯಾಸವಿಠಲ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯ)

Vijaya Rayara Kavacha Lyrics In Kannada

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || 1 ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || 2 ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || 3 ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || 4 ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || 5 ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || 6 ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || 7 ||

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || 8 ||

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || 9 ||

ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ
ಶಾಂತ ಗುರುಗಳ ಪಾದವಂತು ನಂಬಿರೋ || 10 ||

ಖೇದವಾಗದೊ ನಿಮಗೆ ಮೋದವಾಹುದೊ
ಆದಿದೇವನ ಸುಪ್ರಸಾದವಾಹುದೊ || 11 ||

ತಾಪ ತಡೆವನೊ ಬಂದ ಪಾಪ ಕಡಿವನೊ
ಶ್ರೀಪತಿಯಪಾದ ಸಮೀಪವಿಡುವನೋ || 12 ||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೊ ಭಕ್ತಸಂಗದೊರೆಯದೇ || 13 ||

ವೇದ ಓದಲು ಬರಿದೆ ವಾದಮಾಡಲು
ಹಾದಿಯಾಗದೊ ಬುಧರ ಪಾದ ನಂಬದೆ || 14 ||

ಲೆಕ್ಕವಿಲ್ಲದಾ ದೇಶ ಸುತ್ತಿಬಂದರು
ದುಃಖವಲ್ಲದೆ ಲೇಶ ಭಕುತಿ ದೊರೆಯದೊ || 15 ||

ದಾನ ಮಾಡಲು ದಿವ್ಯಗಾನಪಾಡಲು
ಜ್ಞಾನ ದೊರೆಯದೊ ಇವರ ಅಧೀನವಾಗದೆ || 16 ||

ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || 17 ||

ಪೂಜೆ ಮಾಡಲು ಕಂಡ ಗೋಜುಬೀಳಲು
ಬೀಜಮಾತಿನ ಫಲಸಹಜ ದೊರೆಯದು || 18 ||

ಸುರಸು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ || 19 ||

ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || 20 ||

ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ
ಆದಿದೇವನ ಸುಪ್ರಸಾದವಾಹುದೊ || 21 ||

ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ || 22 ||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬ್ಯಾಗ ತರಿವ ದಯದಲಿ || 23 ||

ಮಂದಮತಿಗಳು ಇವರ ಚೆಂದವರಿಯದೆ
ನಿಂದೆ ಮಾಡಲು ಭವದಬಂಧ ತಪ್ಪದೊ || 24 ||

ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದವಚನವ ನಿಜಕೆ ತಂದು ಕೊಡುವನೊ || 25 ||

ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || 26 ||

ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು || 27 ||

Vijaya Rayara Kavacha Lyrics In English

Composed By : Shri Vyasavithala (Shri Kalluru Subbannacharya)

Smarisi badukiro divya charanakeragiro
durita taridu poreva vijaya gurugalembara ||

Dasarayana dayava susi padedana
dosharahitana santoshabharitana ||1||

Jnyanavamtana balu nidhani shantana
manyavantana bahu dhanyadatana ||2||

Hariya bhajisuva narahariya yajisuva
durita tyajisuva janake harusha surisuva ||3||

Modabharitana panchabhedavaritana
sadhucharitana manavishada maretana ||4||

Ivara nambida janake bhavavidembudu
havanavagado nammavara matavidu ||5||

Papakotiya rashi lepavagado
tapa kalevanu balu dayapayonidhi ||6||

Kavanarupadi hariya stavana madida
bhuvana bedida madhavana nodida ||7||

Ranganendana bhavavu hingitendana
mangalangana antarangavaritana ||8||

Kashinagaradallidda vyasadevana
dayava susi padedana ullasatanadali ||9||

Chinte byadiro nishchintaragiro
shantagurugala padavantu nambiro ||10||

Khedavagado nimage modavahudo
adidevana suprasadavahudo ||11||

Tapa tadevano banda papa kadivano
shripatiya paadada samipaviduvano ||12||

Veda Odalu baride vada madalu
hadi doreyadu budhara pada nambade ||13||

Gange mimdare malavu himgitallade
ranganoliyano bhaktara samga dorakade ||14||

Lekkavillada desha sutti bamdaru
duhkhavallade lesha bhakti dorakadu ||15||

Dana madalu divyagana padalu
j~jana doreyado ivaradhinavagade ||16||

Ishti yatake kanda kashtavyatake
ditta gurugala pada mutti bhajisiro ||17||

Puje madalu kanda goju bilalu
bijamatina phala sahaja dorakado ||18||

Suraru ellaru ivara karava pidivaro
taralarandadi himde tirugutipparo ||19||

Grahagalellavu ivarge sahaya maduta
ahoratrili sukhada nivaha koduvavu ||20||

Vyadhi barado dehabadhe tattado
adidevana suprasadavahudo ||21||

Patitapamara mandamatiyu na balu
tutisalapene ivara atishayangala ||22||

Karunadindali emma porevanallade
duritakotiya bega tariva dayadali ||23||

Mandamatigalu ivara chandavariyade
ninde madalu bhavada bandha tappado ||24||

Indirapati ivara munde kunivano
anda vachanava nijake tandu koduvano ||25||

Udayakaladi ee padava pathisalu
madadanadaru jnyana udayavahudo||26||

Sateyidallavo vyasavithala ballanu
pathisabahudido keli kutilarahitaru ||27||

FAQ About Vijaya Kavacha

1. Who has composed Vijaya Kavacha?

Shri Kalluru Subbannachar having the ankita of Vyasavithala composed Vijaya Kavacha.

2. What is Vijaya Kavacha?

It is a poem written by Shri Vyasavithala on his guru Shri Vijayadasa.
Vijaya Kavcha contains the greatness of Shri Vijayarayaru

3. What are the benefits of reading/singling Vijaya Kavacha?

If read/sung with at most bhakti daily, Vijaya Kavacha has many benefits.
All diseases will be cured. There will not be any effect due to navagrahas. The person becomes intelligent and many more.

4. Who can read/sing Vijaya Kavacha?

Anyone who has bhakti in Vijaya Dasaru and god, and who does not do cheating to others can read/sing Vijayadasara Kavacha

Leave a Comment

Your email address will not be published. Required fields are marked *