Chandrachooda Shivashankara Lyrics

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa

ರಚನೆ : ಶ್ರೀ ಪುರಂದರದಾಸರು

‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song) :

‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.
ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ.

ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ.

ನಂದಿ ವಾಹನದ ಮೇಲೆ ಶಿವನು ಆನಂದದಿಂದ ತ್ರಿಲೋಕಗಳಲ್ಲೂ ಸಂಚರಿಸುತ್ತಾರೆ. ಸುಮುದ್ರ ಮಥನ ಕಾಲದಲ್ಲಿ ಬಂದ ಹಾಲಾಹಲ ವಿಷವನ್ನು ಕುಡಿದವನು. ಹಿಂದೆ ಕಾಮನನ್ನು ಮೂರನೇಯ ಕಣ್ಣಿನಿಂದ ಸುಟ್ಟು ಬೂದಿ ಮಾಡಿದ್ದಾನೆ. ಯಾವಾಗಲೂ ಶ್ರೀ ರಾಮನ ಜಪ ಮಾಡುತ್ತ ಪೂಜಿಸುತ್ತಿರುತ್ತಾನೆ.
ಮೃಕಂಡ ಋಷಿಗಳ ಮಗನಾದ ಮಾರ್ಕಂಡೇಯನನ್ನು ರಕ್ಷಿಸಿ ವರವ ಕೊಟ್ಟವರು ಮಹಾದೇವರು. ಪತ್ರೆ ಹಿಡಿದು ಭಿಕ್ಷೆ ಬೇಡುವ ಪರಮ ವಿರಕ್ತರು. ಕಾಲಕೂಟ ಮಹಾ ವಿಷವನ್ನು ಪಾನ ಮಾಡಿದ ನೀಲಕಂಠ. ಯುಕ್ತಿಯಿಂದ ಸರ್ವೋತ್ತಮನಾದ ವಿಷ್ಣು ಹಾಕಿದ ಮೋಹಿನಿಯ ರೂಪಕ್ಕೆ ಮೋಹಿತನಾದ ಮನೋ ನಿಯಾಮಕ ಮಹಾದೇವರು.

ದಕ್ಷಿಣ ಕಾವೇರಿ ತೀರದ ಕುಂಭಪುರ (ತಮಿಳುನಾಡಿನಲ್ಲಿರುವ ಕುಂಭಕೋಣ) ಕುಂಭೇಶ್ವರ. ಭಸ್ಮ, ರುದ್ರಾಕ್ಷಿ ಧರಿಸಿದ ಪರಮ ವೈಷ್ಣವ ವಿಷ್ಣು ಭಕ್ತ ಶಿವ . ವೀಣೆ ನುಡಿಸುತ್ತ ವಿಷ್ಣುವಿನ ಗುಣಗಾನ ಮಾಡುವ ಹಾವಿನಿಂದ ಅಲಂಕೃತನಾದ ಪರಮಶಿವ. ಗರುಡ ವಾಹನನಾದ ಶ್ರೀ ಹರಿಯ ಪ್ರೀತಿಗೆ ಪಾತ್ರನಾದ ಆತ್ಮೀಯನಾದ ಮಹಾದೇವ ನೀನು ಎಂದು ಶ್ರೀ ಪುರಂದರ ದಾಸರು ಗುಣಗಾನ ಮಾಡಿದ್ದಾರೆ.

Chandrachooda Shivashankara Lyrics In Kannada

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕ ಧನುಕರ
ಗಂಗಾ ಶಿರ ಗಜಚರ್ಮಾಂಬರಧರ ನಮೋ ನಮೋ || ಅ ಪ ||

ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || 1 ||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ
ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || 2 ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || 3 ||

If you are looking for detailed meaning or lyrics of any other song, please post in our forum

Chandrachooda Shivashankara Lyrics In English

Chandrachuḍa shivashankara paarvati ramanane ninage namo namo || Pa ||
sundara mrugadhara pinaka dhanukara
gangaa shira gajacarmambaradhara namo namo || A Pa ||

Nandivaahanaanandadinda moojagadi merave neene
andu amruta ghatadindudisida visha tandu bhnujisidava neene
kandarpana krodhadinda kanteredu konda ugranu neene
indiresha shri raamana paadava chandadi pogaluva neene || 1 ||

Baalamrukandajana kaalanu elevaaga paalisidava neene
vaalayadi kapaala pididu bhikshe bedo digambara neene
kaalakootava paanamaadida neelakanhhanu neene
jaala maadida gopaalanemba hennige marulaadava neene || 2 ||

Dharege dakshina kaaveriteera kumbhapuravaasanu neene
koralolu bhasma rudraakshiya dharisida parama vaishnava neene
karadali veeneya nudisuva namma uragabhooshananu neene
garudagamana shri purandaravithalage praanapriyanu neene || 3 ||

If you need meaning of song ‘Chandrachooda Shivashankara’ in English, please mention so in comments below. We will add.

By Anoop Sankar
By Dr.Vidyabhooshana
By Sandeep Narayan

Leave a Comment

Your email address will not be published.