ಶ್ರೀ ಶ್ರೀ ವಾದಿರಾಜತೀರ್ಥರು ಕೃಷ್ಣನ ಮೇಲೆ ಒಂದು ಅದ್ಭುತವಾದ ಕೀರ್ತನೆಯನ್ನು ರಚಿಸಿದ್ದಾರೆ.
ಇದು ಒಂದು ವಿಡಂಬನಾತ್ಮಕ ಕೀರ್ತನೆಯಾಗಿದ್ದು ಕೃಷ್ಣನ ಲೀಲೆಗಳನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ.
ರಚನೆ: ಶ್ರೀ ಶ್ರೀ ವಾದಿರಾಜತೀರ್ಥರು
ಶ್ರೀ ಅನಂತರಾಜ್ ಮಿಸ್ತ್ರಿ ಅವರು ಭಕ್ತಿ ಉಕ್ಕೇರುವಂತೆ ಹಾಡಿದ್ದಾರೆ.
ತಿರುಮಲೆ ಶ್ರೀನಿವಾಸ್ ಸಂಗೀತ ನೀಡಿದ್ದಾರೆ.
ಧ್ವನಿಸುರುಳಿ ಹಕ್ಕು: ಅನಂತರಾಜ್ ಮಿಸ್ತ್ರಿ
ಆವ ಕುಲವೋ ರಂಗಾ ವೆಬ್ ಸ್ಟೋರಿ ನೋಡಿರಿ
Aava Kulavo Ranga Song Lyrics In Kannada
ಆವ ಕುಲವೋ ರಂಗಾ
ಅರಿಯಲಾಗದು ।।ಪ।।
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||1||
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ ||2||
ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ ||3||
Also read Shri Vadiraja's keerthana : 'Ondu Bari Smarane Salade Aanandateerthara'
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ ||4||
You can read Aavakulavo Ranga Lyrics in Telugu
Aava Kulavo Ranga Song Lyrics In English
Ava kulavo Ranga,
Ariyalagadu ||Pa||
Ava kulavendariyalagadu
Govakaivagollanthe
Devalokada Parijatha
Hoova satige tandanante ||1||
Gokuladalli Puttidanante
Govugallannu kaydaanante
Kolalanudi mruga pakshigala
Maralu madidanante
Taralatanadi orala nigaahi
Marava muridu matte Hari
Tereda bayolageerelu lokava irisi
Taayige tordanante ||2||
Gollatiyara maneya pokku
Kallatanava maddanante
Vallida putaniya vishavanundu
Mellane Trunana kondanante
Pakshi tanna vaahanavante
Haavu tanna haasigeyante
Mukkanna tanna mommaganante
Muddu mukhada chelvanante ||3||
Karadimagala tandanante
Sharadhimagalu madadiyante
Dharaniyannu bedidanante
Irelu lokada Odeyanante
Hadaginindali bandanante
Kadala dadeyali nindanante
Odane Madhvarigolidanante
Odeya Hayavadanante ||4||
Very good divine.
Thanks
Thank you