‘ಸೂರ್ಯಂಗೂ ಚಂದ್ರಂಗು ಬಂದಾರೆ ಮುನಿಸು’ 1975 ರಲ್ಲಿ ಬಿಡುಗಡೆಯಾದ ‘ಶುಭಮಂಗಳ ‘ ಕನ್ನಡ ಚಲನಚಿತ್ರದ ಜನಪ್ರಿಯ ಕನ್ನಡ ಹಾಡು. ‘ಶುಭಮಂಗಳ’ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದು, ರವಿ ನಿರ್ಮಿಸಿದ್ದಾರೆ.
ಆರತಿ, ಶ್ರೀನಾಥ್, ಅಂಬರೀಶ್ ಮತ್ತು ಶಿವರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ
ಸಾಹಿತ್ಯ: ಎಂ.ಎನ್. ವ್ಯಾಸರಾವ್
ಸಂಗೀತ: ವಿಜಯಭಾಸ್ಕರ
ಗಾಯನ: ರವಿ
ಮಾಹಿತಿ:
1. ‘ಶುಭಮಂಗಳ’ ಚಿತ್ರ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ
2. ಸಂಭಾಷಣೆ ಬರೆದವರು ಹಾಸ್ಯ ಸಾಹಿತಿ ಬೀಚಿ ಅವರು
3. IMDB ರೇಟಿಂಗ್: 8.4/10
Sooryangu Chandrangu Bndare Munisu Lyrics in Kannada
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು,
ಅರಮನ್ಯಾಗೆ ಏನೈತೆ ಸೊಗಸು
ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು
ಗುಡಿಯಾಗೆ ಬೆಳ್‍ಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೇ
ಕರಿಮೋಡ ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ ತುಳುಕೈತೆ ಹರುಸದಾ ಒನಲು
ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
ಮುಂಬಾಗಿಲ ರಂಗೋಲಿ ಮನಗೈತೆ ಹಾಯಾಗೀ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ
ಆನಂದ ಸಂತೋಸ ಈ ಮನೆಗೆ ಬರಲೀ
ಬೇಡುವೆನು ಕೈಮುಗಿದು ಆ ನನ್ನ ಸಿವನಾ,ಆ ನನ್ನ ಸಿವನಾ
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
Sooryangu Chandrangu Bndare Munisu Lyrics in English
Soorayangu Chandrangu Bandare Munisu
Naguthada Bhoothaayi Manasu
Soorayangu Chandrangu Bandare Munisu
Naguthada Bhoothaayi Manasu
Raajangu Raanigu Muridhodre Manasu
Aramaneyagenaithe Sogasu
Aramaneyagenaithe Sogasu
Mane Thumba Haridhaite Kene Haalu Mosaru
Edheyage Byarathaite Byasaradha Usiru
Gudiyaage Belagaithe Thuppadha Deepa
Nduyaage Nadeyaage SididhaiteKwaapa, Sididhaite Kwaapa
Soorayangu Chandrangu Bandare Munisu
Naguthada Bhoothaayi Manasu
Raajangu Raanigu Muridhodre Manasu
Aramaneyagenaithe Sogasu Aramaneyagenaithe Sogasu
Beladhinagalu Chellaithe
Anagaladha Thumba
Karimoda Musukatihe Manasina Olage
Bayalaage Thulukaithe Harusadha Honalu
Preethiya Therige Badidhaite Sidilu, Badidhaite Sidilu
Soorayangu Chandrangu Bandare Munisu
Naguthada Bhoothaayi Manasu
Raajangu Raanigu Muridhodre Manasu
Aramaneyagenaithe Sogasu Aramaneyagenaithe Sogasu
Mumbagila rangoli managaite hayagi
Kirunageya mukhavella mududaite soragi
Ananda santosa i manege barali
Beduvenu kaimugidu aa nanna sivanaa , aa nanna sivanaa
Soorayangu Chandrangu Bandare Munisu
Naguthada Bhoothaayi Manasu
Soorayangu Chandrangu Bandare Munisu
Naguthada Bhoothaayi Manasu
Raajangu Raanigu Muridhodre Manasu
Aramaneyagenaithe Sogasu
Aramaneyagenaithe Sogasu