ಆವ ಕುಲವೋ ರಂಗ

ರಚನೆ

ಶ್ರೀ ವಾದಿರಾಜತೀರ್ಥರು

ಇದು ಒಂದು ವಿಡಂಬನಾತ್ಮಕ ಕೀರ್ತನೆಯಾಗಿದ್ದು ಕೃಷ್ಣನ ಲೀಲೆಗಳನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ

ಆವ ಕುಲವೋ ರಂಗಾ ಅರಿಯಲಾಗದು ।।ಪ।। ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ

ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ

ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ ತೆರೆದು ಬಾಯಿ‌ಯೊಳಗಿರೇಳು ಲೋಕವ ಇರಿಸಿ ತಾಯಿಗೆ ತೋರ್ದನಂತೆ

ಗೊಲ್ಲತಿಯರ ಮನೆಗೆ ಪೊಕ್ಕು ಕಳ್ಳತನವ ಮಾಡಿದನಂತೆ || ಒಲ್ಲದ ಪೂತನಿಯ ವಿಷವನುಂಡು ಮೆಲ್ಲನೆ ತೃಣನ ಕೊಂದನಂತೆ