ರಚನೆ : ಶ್ರೀ ವಾದಿರಾಜತೀರ್ಥರು
Table of Contents
‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡು ಬರೆದವರು ಯಾರು?
‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡನ್ನು ರಚಿಸಿದವರು ಮಹಾನುಭಾವರಾದ ಶ್ರೀ ಶ್ರೀ ವಾದಿರಾಜತೀರ್ಥರು.
‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡಿನಲ್ಲೇನಿದೆ?
‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನಲ್ಲಿ ಶ್ರೀ ವಾದಿರಾಜರು ಶ್ರೀ ಆನಂದತೀರ್ಥರ ಅಥವಾ ಶ್ರೀ ಮಧ್ವಾಚಾರ್ಯರ ಸ್ಮರಣೆಯ ಮಹತ್ವವನ್ನು ಹೇಳಿದ್ದಾರೆ.
‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನ ಸಾರಾಂಶ
ಅನೇಕ ಪಾಪಗಳನ್ನು ಮಾಡಿದ , ಅರಿಷಡ್ವರ್ಗಗಳಿಂದ (ಕಾಮ, ಕ್ರೋಧ, ಲೋಭ, ಮೋಹ,ಮದ ,ಮತ್ಸರ) ಕೂಡಿದವರಾದ , ಸಂಸಾರ ಬಂಧನದಲ್ಲಿ ಲೋಕಿಕರಾಗಿ ಜೀವನ ಕಳೆದು , ಭಗವಂತನ ಸರ್ವೋತ್ತಮತ್ವವನ್ನು ತಿಳಿಯದೆ, ಅವನನನ್ನು ನಂಬದ ಮನುಷ್ಯರು ಮೋಕ್ಷ ಹೊಂದಬೇಕೆಂದು ಭಕ್ತಿಯಿಂದ ಶ್ರೀ ಮಧ್ವಾಚಾರ್ಯರ ಸ್ಮರಣೆ ಮಾಡಿದರೆ ಸಾಕು ಎಂದು ಶ್ರೀ ವಾದಿರಾಜತೀರ್ಥರು ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ಹಾಡಿನಲ್ಲಿ ಹೇಳಿದ್ದಾರೆ.
Ondu Bari Smarane Salade Ananda Teerthara Song Lyrics In Kannada
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ
ಸರ್ವಜ್ಞ ರಾಯರ ಮಧ್ವರಾಯರ || Pa ||
ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ || 1 ||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ || 2 ||
ಆರು ಮಂದಿ ವೈರಿಗಳನು ಸೇರಲೀಸದಂತೆ ಜರಿದು
ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ || 3 ||
ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ || 4 ||
ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವ ಮುನಿಯ || 5 ||
Who Has Written ‘Ondu Bari Smarane Salade Ananda Teerthara’ Song?
Shri Vaadirajateertha has written/composed the song ‘ Ondu Bari Smarane Salade Ananda Teerthara ‘ song.
What Is There In ‘Ondu Bari Smarane Salade Ananda Teerthara’ Song?
In the song ‘Ondu Bari Smarane Salade’, Sri Vadirajateertha spoke of the importance of Sri Ananditheertha or Sri Madhvacharya’s namasmarana.
What Is The Summary of ‘Ondu Bari Smarane Salade Ananda Teerthara’ Song?
Sri Vadirajarthateertha says that it is sufficient to remember Sri Madhvacharya’s name once with devotion to have the moksha/salvation of the people who do not believe in supreme lord Vishnu, who have committed many sins, who in indulged in materialistic world and is full of arishadvargas (Kama, Krodha, Lobha, Moha,Mada, Matsara).
Ondu Bari Smarane Salade Ananda Teerthara Song Lyrics In English
Ondu bari smarane salade
Anandatirthara Purnapragnara Sarvagnarayara madhvarayara || Pa ||
Hindaneka janmagalali nondu yonigalali bandu
Indiresha Hariya padava hondabekembuvarige || 1 ||
Prakruti bandhadalli siluki sakala vishayagalali nondu
Akalankacharita Hariya pada bhakuti bekembuvarige || 2 ||
Aru mandi vairigalanu seralisadante jaridu
Dhiranagi Hariya padava serabekembuvarige || 3 ||
Ghora samsarambudhige paramagnanavemba wade
Eri mellane Hariya pada serabekembuvarige || 4 ||
Hinabuddhiyinda Sri Hayavadananna jaridu
Tanu badukariyadiralu tori kotta Madhva muniya || 5 ||
Pingback: ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada - ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada