Floral Pattern
Floral Pattern

Ondu Bari Smarane Salade Lyrics

Floral Pattern
Floral Pattern

Ondu Bari Smarane Salade Lyrics

Floral Pattern
Floral Pattern

‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡು ಬರೆದವರು ಯಾರು?

‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ' ಹಾಡನ್ನು ರಚಿಸಿದವರು ಮಹಾನುಭಾವರಾದ ಶ್ರೀ ಶ್ರೀ ವಾದಿರಾಜತೀರ್ಥರು.

Floral Pattern
Floral Pattern

‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನ ಸಾರಾಂಶ ಅನೇಕ ಪಾಪಗಳನ್ನು ಮಾಡಿದ , ಅರಿಷಡ್ವರ್ಗಗಳಿಂದ (ಕಾಮ, ಕ್ರೋಧ, ಲೋಭ, ಮೋಹ,ಮದ , ಮತ್ಸರ) ಕೂಡಿದವರಾದ , ಸಂಸಾರ ಬಂಧನದಲ್ಲಿ ಲೋಕಿಕರಾಗಿ ಜೀವನ ಕಳೆದು , ಭಗವಂತನ ಸರ್ವೋತ್ತಮತ್ವವನ್ನು ತಿಳಿಯದೆ, ಅವನನನ್ನು ನಂಬದ ಮನುಷ್ಯರು ಮೋಕ್ಷ ಹೊಂದಬೇಕೆಂದು ಭಕ್ತಿಯಿಂದ ಶ್ರೀ ಮಧ್ವಾಚಾರ್ಯರ ಸ್ಮರಣೆ ಮಾಡಿದರೆ ಸಾಕು ಎಂದು ಶ್ರೀ ವಾದಿರಾಜತೀರ್ಥರು ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ಹಾಡಿನಲ್ಲಿ ಹೇಳಿದ್ದಾರೆ

Floral Pattern
Floral Pattern

ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞ ರಾಯರ ಮಧ್ವರಾಯರ || Pa || ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ || 1 || ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ || 2 || ಆರು ಮಂದಿ ವೈರಿಗಳನು ಸೇರಲೀಸದಂತೆ ಜರಿದು ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ || 3 || ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ || 4 || ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವ ಮುನಿಯ || 5 ||