ರಚನೆ:ಶ್ರೀ ವಿಜಯದಾಸರು
ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ ಮುಂತಾದವುಗಳಿಗೆ ನಾವು ನರಸಿಂಹ ದೇವರಿಗೆ ಮೊರೆಹೋಗಬೇಕು.
ಶ್ರೀ ವಿಜಯದಾಸರು ನರಸಿಂಹ ಸುಳಾದಿ ರಚಿಸಿ ಕೊಟ್ಟು ನಮಗೆ ಮಹದುಪಕಾರ ಮಾಡಿದ್ದಾರೆ.
ನರಸಿಂಹ ಸುಳಾದಿಯನ್ನು ನಿತ್ಯದಲ್ಲಿ ಭಕ್ತಿಯಿಂದ ಪಾರಾಯಣ ಮಾಡಿದರೆ ಎಲ್ಲ ತರಹದ ಭಯ, ರೋಗ, ಅಪಮೃತ್ಯು ಪರಿಹಾರ ವಾಗುತ್ತದೆ.
ದುರ್ಗಾ ಸುಳಾದಿಯ ಲಿರಿಕ್ಸ್ ಅನ್ನು ನೋಡಿರಿ
Narasimaha Devara Suladi In Kannada
ರಾಗ – ಕಲ್ಯಾಣ
ತಾಳ – ಧ್ರುವ
ವೀರ ಸಿಂಹನೆ ನಾರಸಿಂಹನೆ ದಯ ಪಾರಾ
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಿಸಿ ಕೀಳುವ ಬಿರಿದು ಭಯಂಕರ
ಘೋರವತಾರ ಕರಾಳವದನ ಅ-
ಘೋರ ದುರಿತ ಸಂಹಾರ ಮಾಯಾಕಾರ
ಕ್ರೂರದೈತ್ಯರ ಶೋಕ ಕಾರಣ ಉದುಭವ
ಈರೇಳು ಭುವನ ಸಾಗರದೊಡೆಯ
ಅರೌದ್ರನಾಮಕ ವಿಜಯ ವಿಠ್ಠಲ ನರಸಿಂಗ
ವೀರರ ಸಾತುಂಗ ಕಾರುಣ್ಯಪಾಂಗ || 1 ||
ತಾಳ – ಮಟ್ಟ
ಮಗುವನು ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದು ನಗಪನ್ನಗ ವನಧಿ
ಗಗನ ಮಿಗಿಲಾದ ಅಗಣಿತ ಬಾಧಿಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು ಹೇ
ಜಗದ ವಲ್ಲಭನೇ ಸುಗುಣಾನಾದಿಗನೆ
ನಿಗಮಾ ವಂದಿದತೆ ಪೊಗಳಿದ ಭಕುತರ
ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು
ಯುಗ ಯುಗದೊಳು ದಯಾಳುಗಳ ದೇವರದೇವ
ಯುಗಾದಿ ಕೃತನಾಮಾ ವಿಜಯ ವಿಠ್ಠಲ ಹೋ ಹೋ
ಯುಗಳ ಕರವ ಮುಗಿದು ಮಗುವು ಮೊರೆ ಇಡಲು || 2 ||
ತಾಳ – ರೂಪಕ
ಕೇಳಿದಾಕ್ಷಣದಲಿ ಲಾಲಿಸಿ ಭಕ್ತನ್ನ ಮೌಳಿ ವೇಗದಲಿ ಪಾಲಿಸುವೆನೆಂದು
ತಾಳಿಸಂತೋಷವ ತೂಳಿ ತುಂಬಿದಂತೆ
ಮೂಲೋಕದಪತಿವಾಲಯದಿಂದ ಸು
ಸ್ತೀಲ ದುರ್ಲಭ ನಾಮ ವಿಜಯ ವಿಠ್ಠಲ ಪಂಚ
ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ || 3 ||
ತಾಳ – ಝಂಪೆ
ಲಟಲಟಾ ಲಟಲಟಾ ಲಟಕಟಿಸಿ ವನಜಾಂಡ
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತಲಿರಲು
ಪುಟ ಪುಟ ಪುಟನೆಗೆದು ಚೀರಿಹಾರುತ್ತ ಪ-
ಲ್ಕಟಾಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಊರ್ಭಟಗೆ ಅರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯ ವಿಠ್ಠಲ ಶಕ್ತ
ದಿಟಿ ನಿಟಿಲ ನೇತ್ರ ಸುರಕಟಕ ಪರಿಪಾಲಾ || 4 ||
ತಾಳ – ತ್ರಿವಿಡಿ
ಬೊಬ್ಬಿರಿಯೇ ವೀರ ಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಚೋಣಿ ಉರಿ ಹೊರಗೆದ್ದು ಸುತ್ತೆ
ಉಬ್ಬಸ ರವಿಗಾಗೆ ಅಬ್ಜ ನಡುಗುತಿರೆ
ಅಬ್ಧಿಸಪುತ ಉಕ್ಕಿ ಹೊರಚೆಲ್ಲಿ ಬರುತಿರೆ
ಅಬುಜ ಭವಾದಿಗಳು ತಬ್ಬಬ್ಬಿ ಗೊಂಡರು
ಅಬ್ಬರವೇನೆನುತ ನಭದ ಗೂಳೆಯು ತಗೆಯೆ
ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಝರಿ ಝರಿಸಲು
ಒಬ್ಬರಿಗೊಶವಲ್ಲದ ನಮ್ಮಾ ವಿಜಯ ವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ || 5 ||
ತಾಳ – ಅಟ್ಟ
ಘಡಿಘಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ
ತೊಡೆಯ ಮೇಲಿರಿಸಿ ಹೇರೊಡಲ ಕೂರುಗುರದಿಂದ
ಪಡುವಲ ಗಡಲ ತಡಿಯ ತರಣಿಯ ನೋಡಿ
ಕಡುಕೋಪದಲ್ಲಿ ಸದಬಡಿದು ರಕ್ಕಸನ ಕೆಡಹಿ
ನಿಡಿಗರಳನು ಕೊರಳೆಡಿಯಲ್ಲಿ ಧರಿಸಿದ ಸಡಗರದ ದೈವ
ಕಡುಗಲಿ ಭೂರ್ಭೂವ ವಿಜಯ ವಿಠ್ಠಲ
ಪಾಲ್ಗಡಲೊಡೆಯಾ ಶರಣರ ವಡೆವೆ ವಡನೊಡನೆ || 6||
ತಾಳ – ಆದಿ
ಉರಿಮಸೆಗೆ ಚತುರ್ದಶ ಧರಣಿ ತಲ್ಲಣಿಸಲು
ಪರಮೇಷ್ಟಿ ಹರಸುರರು ಸಿರಿದೇವಿಗೆ ಮೊರೆಯಿಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನು ಸುರರು ಕುಸುಮ ವರುಷ
ಗರಿಯಲು ಭೇರಿ ವಾದ್ಯ ಮೊರೆ ಉತ್ತರರೆ ಎನುತ
ಪರಿಪರಿ ವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ ಕಾಯ್ದೆ
ಪರದೈವೆ ಗಂಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲ || 7 ||
ಜತೆ
ಪ್ರಹ್ಲಾದವರದ ಪ್ರಸನ್ನ ಕ್ಲೇಶಭಂಜನ್ನ
ಮಹಹವಿಷೆ ವಿಜಯವಿಠ್ಠಲ ನರಮೃಗವೇಷಾ || 8 ||
Download Narasimaha Devara Suladi In Kannada & English
Narasimaha Devara Suladi In English
By reciting Narasimha Suladi daily with devotion, lord Narsimha will remove all types of fear, avoid apamrutyu, removes enemies from our lives.
Rāga – kalyāṇa
tāḷa – dhru
vīra sinhane nārasinhane daya pārā
vārane bhaya nivāraṇa nirguṇa
sāridavara sansāra vr̥kṣada mūla
bērarisi kīḷuva biridu bhayaṅkara
ghōravatāra karāḷavadana a-
ghōra durita sanhāra māyākāra
krūradaityara śōka kāraṇa udubhava
īrēḷu bhuvana sāgaradoḍeya araudranāmaka vijaya viṭhṭhala narasiṅga
vīrara sātuṅga kāruṇyapāṅga || 1 ||
Tāḷa – maṭṭa
maguvanu rakkasanu hagaliruḷu biḍade
hageyindali hoydu nagapannaga vanadhi
gagana migilāda agaṇita bādhiyali negedu ogadu sāvu bagedu kollutiralu hē jagada vallabhanē suguṇānādigane
nigamā vandidate pogaḷida bhakutara
tagali tolaganendū mige kūgutaliralu
yuga yugadoḷu dayāḷugaḷa dēvaradēva
yugādi kr̥tanāmā vijaya viṭhṭhala hō hō
yugaḷa karava mugidu maguvu more iḍalu || 2 ||
Tāḷa – rūpaka
kēḷidākṣaṇadali lālisi bhaktanna mauḷi vēgadali pālisuvenendu
tāḷisantōṣava tūḷi tumbidante
mūlōkadapativālayadinda su
stīla durlabha nāma vijaya viṭhṭhala pan̄cha
mauḷi mānava kambha sīḷi mūḍida dēva || 3 ||
tāḷa – jhampe
laṭalaṭā laṭalaṭā laṭakaṭisi vanajāṇḍa
kaṭaha paṭa paṭa puṭutkaṭadi biccutaliralu
puṭa puṭa puṭanegedu cīrihārutta pa- l
kaṭākaṭā kaṭa kaḍidu rōṣadinda
miṭi miṭi miṭane raktākṣiyalli nōḍi
taṭitkōṭi ūrbhaṭage arbhaṭavāgiralu
kuṭila rahita vyakta vijaya viṭhṭhala śakta
diṭi niṭila nētra surakaṭaka paripālā || 4 ||
Tāḷa – triviḍi
bobbiriyē vīra dhvaniyinda tanigiḍi
habbi mun̄cōṇi uri horageddu sutte
ubbasa ravigāge abja naḍugutire
abdhisaputa ukki horachelli barutire
abuja bhavādigaḷu tabbabbi goṇḍāru
abbaravēnenuta nabhada gūḷeyu tageye
śabda tumbitu avyākr̥tākāśa pariyanta
nibbara tarugiri jhari jharisalu
obbarigośavallada nam’mā vijaya viṭhṭhala
ibbageyāgi kambhadinda poramaṭṭā || 5 ||
tāḷa – aṭṭa
ghaḍighaḍisuta kōṭi siḍilu girige bandu
hoḍedante chīri bobbiḍutali laṅghisi
hiḍidu rakkasanna keḍahi maḍ’̔uhi tuḍuki
toḍeya mēlirisi hēroḍala kūruguradinda
paḍuvala gaḍala taḍiya taraṇiya nōḍi
kaḍukōpadalli sadabaḍidu rakkasana keḍahi
niḍigaraḷanu koraḷeḍiyalli dharisida saḍagarada daiva
kaḍugali bhūrbhūva vijaya viṭhṭhala
pālgaḍaloḍeyā śaraṇara vaḍeve vaḍanoḍane || 6 ||
tāḷa – ādi
urimasege caturdaśa dharaṇi tallaṇisalu
paramēṣṭi harasuraru siridēvige moreyiḍalu
karuṇadindali tanna śaraṇanna sahita ninna
charaṇakke eragalu parama śāntanāgi
harahide dayavannu suraru kusuma varuṣa
gariyalu bhēri vādya more uttarare enuta
paripari vālaga vistāradinda kaikoḷḷutta
meredu surarupadra harisi bālakana kāyde
paradaive gambhīrātma vijayaviṭhṭhala nim’ma
charite duṣṭarige bhīkaravō sajjana pāla || 7 ||
jate
prahlādavarada prasanna klēśabhan̄janna
mahahaviṣe vijayaviṭhṭhala naramr̥gavēṣā || 8 ||
Pingback: ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru - Kannada Lyrics Technology Recipe And Much More ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru