Kaksha Taratamya Sandhi Harikatamrutasara Lyrics In Kannada
ರಚನೆ: ಶ್ರೀ ಜಗನ್ನಾಥ ದಾಸರು
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ
ದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣ
ಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣ
ಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ||1||
ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆ
ನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆ
ಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿ
ಭೃತ್ಯ ವರ್ಗವ ಕಾಯೆ ತ್ರಿಜಗನ್ಮಾತೆ ವಿಖ್ಯಾತೆ||2||
ರೋಮ ಕೂಪಗಳಲ್ಲಿ ಪೃಥ್ ಪೃಥಕು ಆ ಮಹಾ ಪುರುಷನ
ಸ್ವಮೂರ್ತಿ ತಾಮರಸಜಾಂಡಗಳ ತದ್ಗತ ವಿಶ್ವ ರೂಪಗಳ
ಶ್ರೀ ಮಹಿಳೆ ರೂಪಗಳ ಗುಣಗಳ ಸೀಮೆಗಾಣದೆ ಯೋಚಿಸುತ
ಮಮ ಸ್ವಾಮಿ ಮಹಿಮೆಯದು ಎಂತೋ ಎಂದು ಅಡಿಗಡಿಗೆ ಬೆರಗಾದೆ||3||
ಒಂದು ಅಜಾಂಡದೊಳು ಒಂದು ರೂಪದೊಳು ಒಂದು ಅವಯವದೊಳು ಒಂದು ನಖದೊಳಗೆ
ಒಂದು ಗುಣಗಳ ಪಾರುಗಾಣದೆ ಕೃತ ಪುಟಾಂಜಲಿಯಿಂ
ಮಂದಜಾಸನ ಪುಳಕ ಪುಳಕಾನಂದ ಬಾಷ್ಪ ತೊದಲು ನುಡಿಗಳಿಂದ
ಇಂದಿರಾವಲ್ಲಭನ ಮಹಿಮೆ ಗಂಭೀರ ತೆರವೆಂದ||4||
ಏನು ಧನ್ಯರೋ ಬ್ರಹ್ಮ ಗುರು ಪವಮಾನ ರಾಯರು
ಈ ಪರಿಯಲಿ ರಮಾ ನಿವಾಸನ ವಿಮಲ ಲಾವಣ್ಯ ಅತಿಶಯಗಳನು
ಸಾನುರಾಗದಿ ನೋಡಿ ಸುಖಿಪ ಮಹಾನುಭಾವರ ಭಾಗ್ಯವೆಂತೋ
ಭವಾನಿಧವನಿಗೆ ಅಸಾಧ್ಯವೆನಿಸಲು ನರರ ಪಾಡೇನು||5||
ಆ ಪಿತಾಮಹ ನೂರು ಕಲ್ಪ ರಮಾಪತಿಯ ಗುಣ ಜಪಿಸಿ ಒಲಿಸಿ
ಮಹಾ ಪರಾಕ್ರಮ ಹನುಮ ಭೀಮ ಆನಂದ ಮುನಿಯೆನಿಸಿ
ಆ ಪರಬ್ರಹ್ಮನ ಸುನಾಭೀ ಕೂಪಸಂಭವ ನಾಮದಲಿ ಮೆರೆವ
ಆ ಪಯೋಜಾಸನ ಸಮೀರರಿಗೆ ಅಭಿನಮಿಪೆ ಸತತ||6||
ವಾಸುದೇವನ ಮೂರ್ತಿ ಹೃದಯ ಆಕಾಶ ಮಂಡಲ ಮಧ್ಯದಲಿ
ತಾರೇಶನಂದದಿ ಕಾಣುತ ಅತಿ ಸಂತೋಷದಲಿ ತುತಿಪ
ಆ ಸರಸ್ವತಿ ಭಾರತೀಯರಿಗೆ ನಾ ಸತತ ವಂದಿಸುವೆ
ಪರಮೋಲ್ಲಾಸದಲಿ ಸುಜ್ಞಾನ ಭಕುತಿಯ ಸಲಿಸಲಿ ಎಮಗೆಂದು||7||
ಜಗದುದರನ ಸುರೋತ್ತಮನ ನಿಜಪೆಗಳೊಂತಾತು ಕರಾಬ್ಜದೊಳು ಪದಯುಗ ಧರಿಸಿ
ನಖ ಪಂಕ್ತಿಯೊಳು ರಮಣೀಯ ತರವಾದ ನಗಧರನ ಪ್ರತಿಬಿಂಬ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುವ ಖಗ ಕುಲಾಧಿಪ
ಕೊಡಲಿ ಮಂಗಳ ಸರ್ವ ಸುಜನರಿಗೆ||8||
ಯೋಗಿಗಳ ಹೃದಯಕೆ ನಿಲುಕ ನಿಗಮಾಗಮೈಕ ವಿನುತನ
ಪರಮಾನುರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ
ಭೂಗಗನ ಪಾತಾಳ ವ್ಯಾಪ್ತನ ಯೋಗ ನಿದ್ರಾಸ್ಪದನು ಎನಿಪ
ಗುರು ನಾಗರಾಜನ ಪದಕೆ ನಮಿಸುವೆ ಮನದೊಳು ಅನವರತ||9||
ದಕ್ಷ ಯಜ್ಞ ವಿಭಂಜನನೆ ವಿರುಪಾಕ್ಷ ವೈರಾಗ್ಯಾಧಿಪತಿ
ಸಂರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು
ಯಕ್ಷಪತಿ ಸಖ ಯಜಪರಿಗೆ ಸುರವೃಕ್ಷ ವೃಕ್ಷದಾನುಜಾರಿ
ಲೋಕಾಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು||10||
ನಂದಿವಾಹನ ನಳಿನಿಧರ ಮೌಳಿ ಇಂದು ಶೇಖರ ಶಿವ ತ್ರಿಯಂಬಕ
ಅಂಧಕಾಸುರ ಮಥನ ಗಜ ಶಾರ್ದೂಲ ಚರ್ಮಧರ
ಮಂದಜಾಸನ ತನಯ ತ್ರಿಜಗದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ
ವಂದಿಸುವೆನು ಅನವರತ ಕರುಣಿಸಿ ಕಾಯೋ ಮಹದೇವ||11||
ಹತ್ತು ಕಲ್ಪದಿ ಲವ ಜಲಧಿಯೊಳು ಉತ್ತಮ ಶ್ಲೋಕನ ಒಲಿಸಿ
ಕೃತಕ್ರುತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ಬಿತ್ತರಿಸಿ ಮೋಹಿಸಿ
ದುರಾತ್ಮರ ನಿತ್ಯ ನಿರಯ ನಿವಾಸರೆನಿಸಿದ
ಕೃತ್ತಿ ವಾಸನೆ ನಮಿಪೆ ಪಾಲಿಸೊ ಪಾರ್ವತೀ ರಮಣ||12||
ಫಣಿ ಫಣಾoಚಿತ ಮಕುಟ ರಂಜಿತ ಕ್ವಣಿತ ಡಮರು ತ್ರಿಶೂಲ
ಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ
ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ
ರಾವಣ ಮದ ವಿಭಂಜನ ಶೇಷ ಪದ ಅರ್ಹನು ಅಹುದೆಂದು||13||
ಕಂಬುಪಾಣಿಯ ಪರಮ ಪ್ರೇಮ ನಿತಂಬಿನಿಯರು ಎಂದೆನಿಪ
ಲಕ್ಷಣೆ ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖ ವಿಂದಾರೆಂಬ
ಷಣ್ಮಹಿಷಿಯರ ದಿವ್ಯ ಪದಾಂಬುಜಗಳಿಗೆ ನಮಿಪೆ
ಮಮ ಹೃದಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನ ಒಡಗೂಡಿ||14||
ಆ ಪರಂತಪನ ಒಲುಮೆಯಿಂದ ಸದಾ ಅಪರೋಕ್ಷಿಗಳೆನಿಸಿ
ಭಗವದ್ರೂಪ ಗುಣಗಳ ಮಹಿಮೆ ಸ್ವಪತಿಗಳ ಆನನದಿ ತಿಳಿವ
ಸೌಪರ್ಣಿ ವಾರುಣಿ ನಗಾತ್ಮಜರ ಆಪನಿತು ಬಣ್ಣಿಸುವೆ
ಎನ್ನ ಮಹಾಪರಾಧಗಳ ಎಣಿಸದೆ ಈಯಲಿ ಪರಮ ಮಂಗಳವ||15||
ತ್ರಿದಿವತರು ಮಣಿ ಧೇನುಗಳಿಗೆ ಆಸ್ಪದನೆನಿಪ ತ್ರಿದಶಾಲಯಾಬ್ಧಿಗೆ
ಬದರನಂದದಲಿ ಒಪ್ಪುತಿಪ್ಪ ಉಪೇಂದ್ರ ಚಂದ್ರಮನ
ಮೃಧು ಮಧುರ ಸುಸ್ತವನದಿಂದಲಿ ಮಧು ಸಮಯ ಪಿಕನಂತೆ ಪಾಡುವ
ಮುದಿರ ವಾಹನನಂಘ್ರಿ ಯುಗ್ಮಂಗಳಿಗೆ ನಮಿಸುವೆನು||16||
ಕೃತಿ ರಮಣ ಪ್ರದ್ಯುಮ್ನ ದೇವನ ಅತುಳ ಬಲ ಲಾವಣ್ಯ ಗುಣ ಸಂತತ ಉಪಾಸನ
ಕೇತು ಮಾಲಾ ಖಂಡದೊಳು ರಚಿಪ
ರತಿ ಮನೋಹರನಂಘ್ರಿ ಕಮಲಕೆ ನತಿಸುವೆನು ಭಕುತಿಯಲಿ
ಮಮ ದುರ್ಮತಿ ಕಳೆದು ಸನ್ಮತಿಯನು ಈಯಲಿ ನಿರುತ ಎಮಗೊಲಿದು||17||
ಚಾರುತರ ನವವಿಧ ಭಕುತಿ ಗಂಭೀರ ವಾರಾಶಿಯೊಳು
ಪರಮೋದಾರ ಮಹಿಮನ ಹೃದಯ ಫಣಿಪತಿ ಪೀಠದಲಿ ಭಜಿಪ
ಭೂರಿ ಕರ್ಮಾಕರನು ಎನಿಸುವ ಶರೀರಮಾನಿ ಪ್ರಾಣಪತಿ ಪದ ವಾರಿರುಹಕೆ ಅನಮಿಪೆ
ಮದ್ಗುರುರಾಯನು ಅಹುದೆಂದು||18||
ವಿತತ ಮಹಿಮನ ವಿಶ್ವತೋ ಮುಖನ ಅತುಳ ಭುಜ ಬಲ ಕಲ್ಪತರುವು
ಆಶ್ರಿತರೆನಿಸಿ ಸಕಲ ಇಷ್ಟ ಪಡೆದು ಅನುದಿನದಿ ಮೋದಿಸುವ
ರತಿ ಸ್ವಯಂಭುವ ದಕ್ಷ ವಾಚಸ್ಪತಿ ಬಿಡೌಜನ ಮಡದಿ ಶಚಿ
ಮನ್ಮಥ ಕುಮಾರ ಅನಿರುದ್ಧರು ಎಮಗೀಯಲಿ ಸುಮಂಗಲವ||19||
ಭವ ವನದಿ ನವ ಪೋತ ಪುಣ್ಯ ಶ್ರವಣ ಕೀರ್ತನ ಪಾದವನರುಹ
ಭವನ ನಾವಿಕನಾಗಿ ಭಕುತರ ತಾರಿಸುವ ಬಿಡದೆ
ಪ್ರವಹ ಮಾರುತದೇವ ಪರಮೋತ್ಸವ ವಿಶೇಷ ನಿರಂತರ
ಮಹಾ ಪ್ರವಹದಂದದಿ ಕೊಡಲಿ ಭಗವದ್ಭಕ್ತ ಸಂತತಿಗೆ||20||
ಜನರನು ಉದ್ಧರಿಸುವೆನೆನುತ ನಿಜ ಜನಕನ ಅನುಮತದಲಿ
ಸ್ವಯಂಭುವ ಮನುವಿನಿಂದಲಿ ಪಡೆದೆ ಸುಕುಮಾರಕರನು ಒಲುಮೆಯಲಿ
ಜನನಿ ಶತ ರೂಪಾ ನಿತಂಬಿನಿ ಮನವಚನಕಾಯದಲಿ ತಿಳಿದು
ಅನುದಿನದಿ ನಮಿಸುವೆ ಕೊಡು ಎಮಗೆ ಸನ್ಮಂಗಳವನೊಲಿದು||21||
ನರನ ನಾರಾಯಣನ ಹರಿಕೃಷ್ಣರ ಪಡೆದೆ ಪುರುಷಾರ್ಥ ತೆರದಲಿ
ತರಣಿ ಶಶಿ ಶತರೂಪರಿಗೆ ಸಮನೆನಿಸಿ
ಪಾಪಿಗಳ ನಿರಯದೊಳು ನೆಲೆಗೊಳಿಸಿ ಸಜ್ಜನ ನೆರವಿಯನು ಪಾಲಿಸುವ
ಔದುಂಬರ ಸಲಹು ಸಲಹೆಮ್ಮ ಬಿಡದಲೆ ಪರಮ ಕರುಣದಲಿ||22||
ಮಧು ವಿರೋಧಿ ಮನುಜ ಕ್ಷೀರೋದಧಿ ಮಥನ ಸಮಯದಲಿ ಉದಯಿಸಿ
ನೆರೆ ಕುಧರಜಾ ವಲ್ಲಭನ ಮಸ್ತಕ ಮಂದಿರದಿ ಮೆರೆವ ವಿಧು
ತವಾಂಘ್ರಿ ಸರೋಜಾ ಯುಗಳಕೆ ಮಧುಪನಂದದಲಿ ಎರಗಲು ಎನ್ಮನದ ಅಧಿಪ
ವಂದಿಪೆನು ಅನುದಿನ ಅಂತಸ್ತಾಪ ಪರಿಹರಿಸು||23||
ಶ್ರೀ ವನರುಹಾಂಬಕನ ನೇತ್ರಗಳೇ ಮನೆಯೆನಿಸಿ
ಸಜ್ಜನರಿಗೆ ಕರಾವಲಂಬನವೀವ ತೆರದಿ ಮಯೂಖ ವಿಸ್ತರಿಪ
ಆ ವಿವಸ್ವಾನ್ ನೆನಿಸಿ ಕೊಂಬ ವಿಭಾವಸು
ಅಹರ್ನಿಶಿಗಳಲಿ ಕೊಡಲೀ ವಸುಂಧರೆಯೊಳು ವಿಪಶ್ಚಿತರೊಡನೆ ಸುಜ್ಞಾನ||24||
ಲೋಕ ಮಾತೆಯ ಪಡೆದು ನೀ ಜಗದೇಕಪಾತ್ರನಿಗಿತ್ತ ಕಾರಣ
ಶ್ರೀ ಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ
ಆ ಕಮಲಭವ ಮುಖರು ಬಿಡದೆ ಪರಾಕೆನುತ ನಿಂದಿಹರೋ
ಗುಣ ರತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನ್ಮನವ||25||
ಪಣೆಯೊಳೊಪ್ಪುವ ತಿಲಕ ತುಳಸೀ ಮಣಿಗಣಾನ್ವಿತ ಕಂಠ
ಕರದಲಿ ಕ್ವಣಿತ ವೀಣಾ ಸುಸ್ವರದಿ ಬಹು ತಾಳ ಗತಿಗಳಲಿ
ಪ್ರಣವ ಪ್ರತಿಪಾದ್ಯನ ಗುಣಂಗಳ ಕುಣಿದು ಪಾಡುತ
ಪರಮ ಸುಖ ಸಂದಣಿಯೊಳು ಆಡುವ ದೇವರ್ಷಿ ನಾರದರಿಗೆ ಅಭಿನಮಿಪೆ||26||
ಆ ಸರಸ್ವತಿ ತೀರದಲಿ ಬಿನ್ನೈಸಲು ಆ ಮುನಿಗಳ ನುಡಿಗೆ
ಜಡಜಾಸನ ಮಹೇಶ ಅಚ್ಯುತರ ಲೋಕಂಗಳಿಗೆ ಪೋಗಿ
ತಾ ಸಕಲ ಗುಣಗಳ ವಿಚಾರಿಸಿ ಕೇಶವನೆ ಪರದೈವವು ಎಂದು ಉಪದೇಶಿಸುವ
ಭೃಗು ಮುನಿಪ ಕೊಡಲಿ ಎಮಗೆ ಅಖಿಳ ಪುರುಷಾರ್ಥ||27||
ಬಿಸರುಹಾಂಬಕನ ಆಜ್ಞೆಯಲಿ ಸುಮನಸ ಮುಖನು ತಾನೆನಿಸಿ
ನಾನಾ ರಸಗಳುಳ್ಳ ಹರಿಸ್ಸುಗಳನು ಅವರವರಿಗೊಯ್ದು ಈವ
ವಸುಕುಲಾಧಿಪ ಯಜ್ಞಪುರುಷನ ಅಸಮ ಬಲ ರೂಪಂಗಳಿಗೆ ವಂದಿಸುವೆ
ಜ್ಞಾನ ಯಶಸ್ಸು ವಿದ್ಯ ಸುಬುದ್ಧಿ ಕೊಡಲೆಮಗೆ||28||
ತಾತನ ಅಪ್ಪಣೆಯಿಂದ ನೀ ಪ್ರಖ್ಯಾತಿಯುಳ್ಳ ಅರವತ್ತು ಮಕ್ಕಳ
ಪ್ರೀತಿಯಿಂದಲಿ ಪಡೆದು ಅವರವರಿಗಿತ್ತು ಮನ್ನಿಸಿದೆ
ವೀತಿ ಹೋತ್ರನ ಸಮಳೆನಿಸುವ ಪ್ರಸೂತಿ ಜನನಿ
ತ್ವದಂಘ್ರಿ ಕಮಲಕೆ ನಾ ತುತಿಸಿ ತಲೆಬಾಗುವೆ ಎಮ್ಮ ಕುಟುಂಬ ಸಲಹುವುದು||29||
ಶತ ಧೃತಿಯ ಸುತರೀರ್ವರ ಉಳಿದ ಅಪ್ರತಿಮ ಸುತಪೋ ನಿಧಿಗಳ
ಪರಾಜಿತನ ಸುಸಮಾಧಿಯೊಳು ಇರಿಸಿ ಮೂರ್ಲೋಕದೊಳು ಮೆರೆವ
ವ್ರತಿವರ ಮರೀಚಿ ಅತ್ರಿ ಪುಲಹಾ ಕ್ರತು ವಸಿಷ್ಠ ಪುಲಸ್ತ್ಯ
ವೈವಸ್ವತನು ವಿಶ್ವಾಮಿತ್ರ ಅಂಗಿರರ ಅಂಘ್ರಿಗೆರಗುವೆನು||30||
ದ್ವಾದಶ ಆದಿತ್ಯರೊಳು ಮೊದಲಿಗನಾದ ಮಿತ್ರ
ಪ್ರವಹ ಮಾನಿನಿಯಾದ ಪ್ರಾವಹಿ ನಿರ್ಋತಿ ನಿರ್ಜರ ಗುರು ಮಹಿಳೆ ತಾರಾ
ಈ ದಿವೌಕಸರು ಅನುದಿನ ಆಧಿವ್ಯಾಧಿ ಉಪಟಳವ ಅಳಿದು
ವಿಬುಧರಿಗೆ ಆದರದಿ ಕೊಡಲಿ ಅಖಿಳ ಮಂಗಳವ ಆವ ಕಾಲದಲಿ||31||
ಮಾನನಿಧಿಗಳು ಎನಿಸುವ ವಿಷ್ವಕ್ಸೇನ ಧನಪ ಗಜಾನನರಿಗೆ
ಸಮಾನರು ಎಂಭತ್ತೈದು ಶೇಷ ಶತಸ್ಥ ದೇವಗಣಕೆ ಆ ನಮಿಸುವೆನು
ಬಿಡದೆ ಮಿಥ್ಯಾ ಜ್ಞಾನ ಕಳೆದು ಸುಬುದ್ಧಿನಿತ್ತು
ಸದಾನುರಾಗದಲಿ ಎಮ್ಮ ಪರಿಪಾಲಿಸಲೆಂದೆನುತ||32||
ಭೂತ ಮರುತನು ಅವಾಂತರ ಅಭಿಮಾನಿ ತಪಸ್ವಿ ಮರೀಚಿ ಮುನಿ
ಪುರುಹೂತ ನಂದನ ಪಾದಮಾನಿ ಜಯಂತರು ಎಮಗೊಲಿದು
ಕಾತರವ ಪುಟ್ಟಿಸದೆ ವಿಷಯದಿ ವೀತಭಯನ ಪದಾಬ್ಜದಲಿ
ವಿಪರೀತ ಬುದ್ಧಿಯನು ಈಯದೆ ಸದಾ ಪಾಲಿಸಲೆಮ್ಮ||33||
ಓದಿಸುವ ಗುರುಗಳನು ಜರಿದು ಸಹ ಓದುಗರಿಗೆ ಉಪದೇಶಿಸಿದ
ಮಹದಾದಿ ಕಾರಣ ಸರ್ವಗುಣ ಸಂಪೂರ್ಣ ಹರಿಯೆಂದು ವಾದಿಸುವ
ತತ್ಪತಿಯ ತೋರೆಂದು ಆ ದನುಜ ಬೆಸಗೊಳಲು
ಸ್ತಂಭದಿ ಶ್ರೀದನ ಆಕ್ಷಣ ತೋರಿಸಿದ ಪ್ರಹ್ಲಾದ ಸಲಹೆಮ್ಮ||34||
ಬಲಿ ಮೊದಲು ಸಪ್ತ ಇಂದ್ರರು ಇವರಿಗೆ ಕಲಿತ ಕರ್ಮಜ ದಿವಿಜರು ಎಂಬರು
ಉಳಿದ ಏಕಾದಶ ಮನುಗಳು ಉಚಿಥ್ಥ್ಯ ಚವನ ಮುಖ
ಕುಲರ್ಷಿಗಳು ಎಂಭತ್ತು ಹೈಹಯ ಇಳಿಯ ಕಂಪನಗೈದ ಪೃಥು
ಮಂಗಳ ಪರೀಕ್ಷಿತ ನಹುಷ ನಾಭಿ ಯಯಾತಿ ಶಶಿಬಿಂದು||35||
ಶತಕ ಸಂಕೇತ ಉಳ್ಳ ಪ್ರಿಯವ್ರತ ಭರತ ಮಾಂಧಾತ ಪುಣ್ಯಾಶ್ರಿತರು
ಜಯವಿಜಯಾದಿಗಳು ಗಂಧರ್ವರೆಂಟು ಜನ
ಹುತವಹಜ ಪಾವಕ ಸನಾತನ ಪಿತೃಗಳು ಎಳ್ವರು ಚಿತ್ರಗುಪ್ತರು
ಪ್ರತಿದಿನದಿ ಪಾಲಿಸಲಿ ತಮ್ಮವನೆಂದು ಎಮಗೊಲಿದು||36||
ವಾಸವಾಲಯ ಶಿಲ್ಪ ವಿಮಲ ಜಲಾಶಯಗಳೊಳು ರಮಿಪ ಊರ್ವಶಿ
ಭೇಶ ರವಿಗಳ ರಿಪುಗಳೆನಿಸುವ ರಾಹುಕೇತುಗಳು
ಶ್ರೀಶ ಪದ ಪಂಥಾನ ಧೂಮಾರ್ಚೀರ ದಿವಿಜರು
ಕರ್ಮಜರಿಗೆ ಸದಾ ಸಮಾನ ದಿವೌಕಸರು ಕೊಡಲಿ ಎಮಗೆ ಮಂಗಳವ||37||
ದ್ಯುನದಿ ಶ್ಯಾಮಲ ಸಂಜ್ಞ ರೋಹಿಣಿ ಘನಪ ಪರ್ಜನ್ಯ ಅನಿರುದ್ಧನ ವನಿತೆ
ಬ್ರಹ್ಮಾಂಡಾಭಿಮಾನಿ ವಿರಾಟ ದೇವಿಯರ ನೆನೆವೆನು
ಆ ನಲವಿಂದೆ ದೇವಾನನ ಮಹಿಳೆ ಸ್ವಾಹಾಖ್ಯರು
ಆಲೋಚನೆ ಕೊಡಲಿ ನಿರ್ವಿಘ್ನದಿಂ ಭಗವದ್ಗುಣoಗಳಲಿ||38||
ವಿಧಿಪಿತನ ಪಾದಾಂಬುಜಗಳಿಗೆ ಮಧುಪನಾಂತೆ ವಿರಾಜಿಪಾಮಲ
ಉದಕಗಳಿಗೆ ಸದಾಭಿಮಾನಿಯು ಎಂದೆನಿಸಿಕೊಂಬ ಬುಧಗೆ ನಾ ವಂದಿಸುವೆ ಸಮ್ಮೋದದಿ
ನಿರಂತರವು ಒಲಿದೆಮಗೆ
ಅಭ್ಯುದಯ ಪಾಲಿಸಲೆಂದು ಪರಮೋತ್ಸವದೊಳು ಅನುದಿನದಿ||39||
ಶ್ರೀ ವಿರಿಂಚಾದ್ಯರ ಮನಕೆ ನಿಲುಕಾವ ಕಾಲಕೆ
ಜನನ ರಹಿತನ ತಾವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ಪ
ದೇವಕಿಗೆ ವಂದಿಪೆ ಯಶೋದಾ ದೇವಿಗೆ ಆನಮಿಸುವೆನು
ಪರಮ ಕೃಪಾವಲೋಕನದಿಂದ ಸಲಹುವುದು ಎಮ್ಮ ಸಂತತಿಯ||40||
ಪಾಮರರನ ಪವಿತ್ರಗೈಸುವ ಶ್ರೀ ಮುಕುಂದನ ವಿಮಲ ಮಂಗಳ
ನಾಮಗಳಿಗೆ ಅಭಿಮಾನಿಯಾದ ಉಷಾಖ್ಯ ದೇವಿಯರು
ಭೂಮಿಯೊಳಗುಳ್ಳ ಅಖಿಳ ಸಜ್ಜನರ ಆಮಯಾದಿಗಳ ಅಳಿದು ಸಲಹಲಿ
ಆ ಮರುತ್ವಾನ್ ಮನೆಯ ವೈದ್ಯರ ರಮಣಿ ಪ್ರತಿದಿನದಿ||41||
ಪುರುಟ ಲೋಚನ ನಿನ್ನ ಕದ್ದೊಯ್ದಿರಲು ಪ್ರಾರ್ಥಿಸೆ
ದೇವತೆಗಳ ಉತ್ತರವ ಲಾಲಿಸಿ ತಂದ ವರಾಹ ರೂಪ ತಾನಾಗಿ
ಧರಣಿ ಜನನಿ ನಿನ್ನ ಪಾದಕ್ಕೆರಗಿ ಬಿನ್ನೈಸುವನು
ಪಾದಸ್ಪರ್ಶ ಮೊದಲಾದ ಅಖಿಳ ದೋಷಗಳು ಎಣಿಸದಿರೆಂದು||42||
ವನಧಿವಸನೆ ವರಾದ್ರಿ ನಿಚಯ ಸ್ತನವಿರಾಜಿತೆ
ಚೇತನಾಚೇತನ ವಿಧಾರಕೆ ಗಂಧ ರಸ ರೂಪಾದಿ ಗುಣ ವಪುಷೆ
ಮುನಿಕುಲೋತ್ತಮ ಕಶ್ಯಪನ ನಿಜತನುಜೆ ನಿನಗೆ ಅನಮಿಪೆ
ಎನ್ನವಗುಣಗಳು ಎಣಿಸದೆ ಪಾಲಿಪುದು ಪರಮಾತ್ಮನರ್ಧಾಂಗಿ||43||
ಹರಿ ಗುರುಗಳ ಅರ್ಚಿಸದ ಪಾಪಾತ್ಮರನ ಶಿಕ್ಷಿಸಲೋಸುಗ
ಶನೈಶ್ಚರನೆನಿಸಿ ದುಷ್ಫಲಗಳೀವೆ ನಿರಂತರದಿ ಬಿಡದೆ
ತರಣಿ ನಂದನ ನಿನ್ನ ಪಾದಾಂಬುರುಹಗಳಿಗೆ ಆ ನಮಿಪೆ
ಬಹು ದುಸ್ತರ ಭವಾರ್ಣದಿ ಮಗ್ನನಾದೆನ್ನ ಉದ್ಧರಿಸಬೇಕು||44||
ನಿರತಿಶಯ ಸುಜ್ಞಾನ ಪೂರ್ವಕ ವಿರಚಿಸುವ ನಿಷ್ಕಾಮ ಕರ್ಮಗಳರಿತು
ತತ್ತತ್ಕಾಲದಲಿ ತಜ್ಜನ್ಯ ಫಲರಸವ ಹರಿಯ ನೇಮದಲಿ ಉಣಿಸಿ
ಬಹುಜೀವರಿಗೆ ಕರ್ಮಪನೆನಿಪ
ಗುರುಪುಷ್ಕರನು ಸತ್ಕ್ರಿಯಂಗಳಲಿ ನಿರ್ವಿಘ್ನತೆಯ ಕೊಡಲಿ||45||
ಶ್ರೀನಿವಾಸನ ಪರಮ ಕಾರುಣ್ಯಾನಿ ವಾಸಸ್ಥಾನರು ಎನಿಪ ಕೃಶಾನುಜರು
ಸಹಸ್ರ ಷೋಡಶ ಶತರು ಶ್ರೀ ಕೃಷ್ಣ ಮಾನಿನಿಯರು ಎಪ್ಪತ್ತು
ಯಕ್ಷರು ದಾನವರು ಮೂವತ್ತು
ಚಾರಣ ಅಜಾನಜ ಅಮರರು ಅಪ್ಸರರು ಗಂಧರ್ವರಿಗೆ ನಮಿಪೆ||46||
ಕಿನ್ನರರು ಗುಹ್ಯಕರು ರಾಕ್ಷಸ ಪನ್ನಗರು ಪಿತೃಗಳು ಸಿದ್ಧರು
ಸನ್ನುತ ಅಜಾನಜರು ಸಮರು ಇವರು ಅಮರ ಯೋನಿಜರು
ಇನ್ನಿವರ ಗಣವೆಂತು ಬಣ್ಣಿಸಲು ಎನ್ನೊಳವೆ
ಕರುಣದಲಿ ಪರಮಾಪನ್ನ ಜನರಿಗೆ ಕೊಡಲಿ ಸನ್ಮುದ ಪರಮ ಸ್ನೇಹದಲಿ||47||
ಆ ಯಮುನೆಯೊಳು ಸಾದರದಿ ಕಾತ್ಯಾಯನೀ ವ್ರತಧರಿಸಿ
ಕೆಲರು ದಯಾಯುಧನೆ ಪತಿಯೆಂದು ಕೆಲವರು ಜಾರತನದಲ್ಲಿ
ವಾಯುಪಿತನೊಲಿಸಿದರು ಈರ್ವಗೆ ತೋಯ ಸರಸರ
ಪಾದಕಮಲಕೆ ನಾ ಎರಗುವೆ ಮನೋರಥಂಗಳ ಸಲಿಸಲಿ ಅನುದಿನದಿ||48||
ನೂರುಮುನಿಗಳ ಉಳಿದು ಮೇಲಣ ನೂರು ಕೋಟಿ ತಪೋಧರನ
ಪಾದಾರವಿಂದಕೆ ಮುಗಿವೆ ಕರಗಳನು ಉದ್ಧರಿಸಲೆಂದು
ಮೂರು ಸಪ್ತ ಶತಾಹ್ವಯರ ತೊರೆದು ಈ ಋಷಿಗಳ ಅನಂತರಲಿಹ
ಭೂರಿ ಪಿತೃಗಳು ಕೊಡಲಿ ಎಮಗೆ ಸಂತತ ಸುಮಂಗಳವ||49||
ಪಾವನಕೆ ಪಾವನನು ಎನಿಸುವ ರಮಾ ವಿನೋದಿಯ ಗುಣಗಣoಗಳ
ಸಾವಧಾನದಲಿ ಏಕ ಮಾನಸರಾಗಿ ಸುಸ್ವರದಿ
ಆ ವಿಬುಧಪತಿ ಸಭೆಯೊಳಗೆ ನಾನಾ ವಿಲಾಸದಿ ಪಾಡಿ ಸುಖಿಸುವ
ದೇವ ಗಂಧರ್ವರು ಕೊಡಲಿ ಎಮಗೆ ಅಖಿಳ ಪುರುಷಾರ್ಥ||50||
ಭುವನ ಪಾವನ ಮಾಳ್ಪ ಲಕ್ಷ್ಮೀ ಧವನ
ಮಂಗಳ ದಿವ್ಯ ನಾಮ ಸ್ತವನಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ
ಪ್ರವರ ಭೂಭುಜರ ಉಳಿದು ಮಧ್ಯಮ ಕುವಲಯಪರು ಎಂದು ಎನಿಸಿಕೊಂಬರ
ದಿವಸ ದಿವಸಂಗಳಲಿ ನೆನೆವನು ಕರಣ ಶುದ್ಧಿಯಲಿ||51||
ಶ್ರೀ ಮುಕುಂದನ ಮೂರ್ತಿಸಲೆ ಸೌದಾಮಿನಿಯೋಳ್ ಹೃದಯ ವಾರಿಜ
ವ್ಯೋಮ ಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ
ಆ ಮನುಷ್ಯೋತ್ತಮರ ಪದಯುಗ ತಾಮರಸಗಳಿಗೆ ಎರಗುವೆ
ಸದಾ ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನತತಿಯ||52||
ಈ ಮಹೀ ಮಂಡಲದೊಳಿಹ ಗುರು ಶ್ರೀಮದಾಚಾರ್ಯರ ಮತಾನುಗರು
ಆ ಮಹಾವೈಷ್ಣವರ ವಿಷ್ಣು ಪದಾಬ್ಜ ಮಧುಕರರ ಸ್ತೋಮಕೆ ಅನಮಿಸುವೆನು
ಅವರವರ ನಾಮಗಳನು ಏಂ ಪೇಳ್ವೆ ಬಹುವಿಧ
ಯಾಮ ಯಾಮಂಗಳಲಿ ಬೋಧಿಸಲಿ ಎಮಗೆ ಸನ್ಮತಿಯ||53||
ಮಾರನಯ್ಯನ ಕರುಣ ಪಾರಾವಾರ ಮುಖ್ಯ ಸುಪಾತ್ರರು ಎನಿಪ
ಸರೋರುಹಾಸನ ವಾಣಿ ರುದ್ರ ಇಂದ್ರಾದಿ ಸುರನಿಕರ
ತಾರತಮ್ಯಾತ್ಮಕ ಸುಪದ್ಯಗಳ ಆರು ಪಠಿಸುವರು ಆ ಜನರಿಗೆ
ರಮಾರಮಣ ಪೂರೈಸಲಿ ಈಪ್ಸಿತ ಸರ್ವಕಾಲದಲಿ||54||
ಮೂರು ಕಾಲಗಳಲ್ಲಿ ತುತಿಸೆ ಶರೀರ ವಾನ್ಗ್ಮನಃ ಶುದ್ಧಿ ಮಾಳ್ಪುದು
ದೂರಗೈಸುವದು ಅಖಿಳ ಪಾಪ ಸಮೂಹ ಪ್ರತಿದಿನದಿ
ಚೋರಭಯ ರಾಜಭಯ ನಕ್ರ ಚಮೂರ ಶಸ್ತ್ರ ಜಲಾಗ್ನಿ ಭೂತ
ಮಹೋರಗ ಜ್ವರ ನರಕ ಭಯ ಸಂಭವಿಸದು ಎಂದೆಂದು||55||
ಜಯಜಯತು ತ್ರಿಜಗದ್ವಿಲಕ್ಷಣ ಜಯಜಯತು ಜಗದೇಕ ಕಾರಣ
ಜಯಜಯತು ಜಾನಕೀ ರಮಣ ನಿರ್ಗತ ಜರಾಮರಣ
ಜಯಜಯತು ಜಾಹ್ನವೀ ಜನಕ ಜಯಜಯತು ದೈತ್ಯ ಕುಲಾಂತಕ
ಭವಾಮಯ ಹರ ಜಗನ್ನಾಥ ವಿಠಲ ಪಾಹಿಮಾಂ ಸತತ||56||
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
Kaksha Taratamya Sandhi Harikatamrutasara Lyrics In English
Composed By : Shri Jagannathadasa
harikathAmRutasAra gurugaLa karuNadindApanitu pELuve
parama BagavadBaktaru idanAdaradi kELuvudu||
SrIramaNa sarvESa sarvaga sAraBOkta svatantra
dOSha vidUra j~jAnAnaMda balaiSvarya suKa pUrNa
mUruguNa varjita saguNa sAkAra viSva sthiti layOdaya kAraNa
kRupAsAndra narahare salaho sajjanara||1||
nitya muktaLe nirvikAraLe nitya suKa saMpUrNe
nityAnitya jagadAdhAre muktAmukta gaNa vinute
cittaisu binnapava SrI puruShOttamana vakShO nivAsini
BRutya vargava kAye trijaganmAte viKyAte||2||
rOma kUpagaLalli pRuth pRuthaku A mahA puruShana
svamUrti tAmarasajAnDagaLa tadgata viSva rUpagaLa
SrI mahiLe rUpagaLa guNagaLa sImegANade yOcisuta
mama svAmi mahimeyadu entO endu aDigaDige beragAde||3||
ondu ajAMDadoLu ondu rUpadoLu ondu avayavadoLu ondu naKadoLage
ondu guNagaLa pArugANade kRuta puTAnjaliyiM
mandajAsana puLaka puLakAnanda bAShpa todalu nuDigaLiMda
indirAvallaBana mahime gaMBIra teraveMda||4||
Enu dhanyarO brahma guru pavamAna rAyaru
I pariyali ramA nivAsana vimala lAvaNya atiSayagaLanu
sAnurAgadi nODi suKipa mahAnuBAvara BAgyaventO
BavAnidhavanige asAdhyavenisalu narara pADEnu||5||
A pitAmaha nUru kalpa ramApatiya guNa japisi olisi
mahA parAkrama hanuma BIma Ananda muniyenisi
A parabrahmana sunABI kUpasaMBava nAmadali mereva
A payOjAsana samIrarige aBinamipe satata||6||
vAsudEvana mUrti hRudaya AkASa manDala madhyadali
tArESanandadi kANuta ati santOShadali tutipa
A sarasvati BAratIyarige nA satata vandisuve
paramOllAsadali suj~jAna Bakutiya salisali emagendu||7||
jagadudarana surOttamana nijapegaLontAtu karAbjadoLu padayuga dharisi
naKa panktiyoLu ramaNIya taravAda nagadharana pratibiMba kANuta
mige haruShadiM pogaLi higguva Kaga kulAdhipa
koDali mangaLa sarva sujanarige||8||
yOgigaLa hRudayake niluka nigamAgamaika vinutana
paramAnurAgadali dvisahasra jihvegaLinda varNisuva
BUgagana pAtALa vyAptana yOga nidrAspadanu enipa
guru nAgarAjana padake namisuve manadoLu anavarata||9||
dakSha yaj~ja viBaMjanane virupAkSha vairAgyAdhipati
saMrakShisemmanu sarvakAladi sanmudavanittu
yakShapati saKa yajaparige suravRukSha vRukShadAnujAri
lOkAdhyakSha Suka dUrvAsa jaigIShavya saMtaisu||10||
nandivAhana naLinidhara mauLi indu SEKara Siva triyaMbaka
andhakAsura mathana gaja SArdUla carmadhara
mandajAsana tanaya trijagadvandya Suddha sPaTika sanniBa
vandisuvenu anavarata karuNisi kAyO mahadEva||11||
hattu kalpadi lava jaladhiyoLu uttama SlOkana olisi
kRutakrutyanAgi jagatpatiya nEmadi kuSAstragaLa bittarisi mOhisi
durAtmara nitya niraya nivAsarenisida
kRutti vAsane namipe pAliso pArvatI ramaNa||12||
PaNi PaNAocita makuTa ranjita kvaNita Damaru triSUla
SiKi dina maNi niSAkara nEtra parama pavitra sucaritra
praNata kAmada pramatha suramuni gaNa supUjita caraNayuga
rAvaNa mada viBanjana SESha pada arhanu ahudendu||13||
kaMbupANiya parama prEma nitaMbiniyaru endenipa
lakShaNe jAMbavati kALindi nIlA Badra saKa vindAreMba
ShaNmahiShiyara divya padAMbujagaLige namipe
mama hRudayAMbaradi nelesali biDade tammarasana oDagUDi||14||
A parantapana olumeyinda sadA aparOkShigaLenisi
BagavadrUpa guNagaLa mahime svapatigaLa Ananadi tiLiva
sauparNi vAruNi nagAtmajara Apanitu baNNisuve
enna mahAparAdhagaLa eNisade Iyali parama mangaLava||15||
tridivataru maNi dhEnugaLige Aspadanenipa tridaSAlayAbdhige
badaranandadali opputippa upEndra candramana
mRudhu madhura sustavanadindali madhu samaya pikanante pADuva
mudira vAhanananGri yugmangaLige namisuvenu||16||
kRuti ramaNa pradyumna dEvana atuLa bala lAvaNya guNa santata upAsana
kEtu mAlA KaMDadoLu racipa
rati manOharananGri kamalake natisuvenu Bakutiyali
mama durmati kaLedu sanmatiyanu Iyali niruta emagolidu||17||
cArutara navavidha Bakuti gaMBIra vArASiyoLu
paramOdAra mahimana hRudaya PaNipati pIThadali Bajipa
BUri karmAkaranu enisuva SarIramAni prANapati pada vAriruhake anamipe
madgururAyanu ahudendu||18||
vitata mahimana viSvatO muKana atuLa Buja bala kalpataruvu
ASritarenisi sakala iShTa paDedu anudinadi mOdisuva
rati svayaMBuva dakSha vAcaspati biDaujana maDadi Saci
manmatha kumAra aniruddharu emagIyali sumangalava||19||
Bava vanadi nava pOta puNya SravaNa kIrtana pAdavanaruha
Bavana nAvikanAgi Bakutara tArisuva biDade
pravaha mArutadEva paramOtsava viSESha nirantara
mahA pravahadandadi koDali BagavadBakta santatige||20||
janaranu uddharisuvenenuta nija janakana anumatadali
svayaMBuva manuvinindali paDede sukumArakaranu olumeyali
janani Sata rUpA nitaMbini manavacanakAyadali tiLidu
anudinadi namisuve koDu emage sanmangaLavanolidu||21||
narana nArAyaNana harikRuShNara paDede puruShArtha teradali
taraNi SaSi SatarUparige samanenisi
pApigaLa nirayadoLu nelegoLisi sajjana neraviyanu pAlisuva
auduMbara salahu salahemma biDadale parama karuNadali||22||
madhu virOdhi manuja kShIrOdadhi mathana samayadali udayisi
nere kudharajA vallaBana mastaka mandiradi mereva vidhu
tavAnGri sarOjA yugaLake madhupanandadali eragalu enmanada adhipa
vandipenu anudina aMtastApa pariharisu||23||
SrI vanaruhAMbakana nEtragaLE maneyenisi
sajjanarige karAvalaMbanavIva teradi mayUKa vistaripa
A vivasvAn nenisi koMba viBAvasu
aharniSigaLali koDalI vasundhareyoLu vipaScitaroDane suj~jAna||24||
lOka mAteya paDedu nI jagadEkapAtranigitta kAraNa
SrI kumAri samEta nelasida ninna mandiradi
A kamalaBava muKaru biDade parAkenuta niMdiharO
guNa ratnAkarane baNNisalaLave koDu emage sanmanava||25||
paNeyoLoppuva tilaka tuLasI maNigaNAnvita kanTha
karadali kvaNita vINA susvaradi bahu tALa gatigaLali
praNava pratipAdyana guNangaLa kuNidu pADuta
parama suKa sandaNiyoLu ADuva dEvarShi nAradarige aBinamipe||26||
A sarasvati tIradali binnaisalu A munigaLa nuDige
jaDajAsana mahESa acyutara lOkaMgaLige pOgi
tA sakala guNagaLa vicArisi kESavane paradaivavu endu upadESisuva
BRugu munipa koDali emage aKiLa puruShArtha||27||
bisaruhAMbakana Aj~jeyali sumanasa muKanu tAnenisi
nAnA rasagaLuLLa harissugaLanu avaravarigoydu Iva
vasukulAdhipa yaj~japuruShana asama bala rUpangaLige vandisuve
j~jAna yaSassu vidya subuddhi koDalemage||28||
tAtana appaNeyinda nI praKyAtiyuLLa aravattu makkaLa
prItiyindali paDedu avaravarigittu manniside
vIti hOtrana samaLenisuva prasUti janani
tvadanGri kamalake nA tutisi talebAguve emma kuTuMba salahuvudu||29||
Sata dhRutiya sutarIrvara uLida apratima sutapO nidhigaLa
parAjitana susamAdhiyoLu irisi mUrlOkadoLu mereva
vrativara marIci atri pulahA kratu vasiShTha pulastya
vaivasvatanu viSvAmitra angirara anGrigeraguvenu||30||
dvAdaSa AdityaroLu modaliganAda mitra
pravaha mAniniyAda prAvahi nir^^Ruti nirjara guru mahiLe tArA
I divaukasaru anudina AdhivyAdhi upaTaLava aLidu
vibudharige Adaradi koDali aKiLa mangaLava Ava kAladali||31||
mAnanidhigaLu enisuva viShvaksEna dhanapa gajAnanarige
samAnaru eMBattaidu SESha Satastha dEvagaNake A namisuvenu
biDade mithyA j~jAna kaLedu subuddhinittu
sadAnurAgadali emma paripAlisalendenuta||32||
BUta marutanu avAntara aBimAni tapasvi marIci muni
puruhUta nandana pAdamAni jayantaru emagolidu
kAtarava puTTisade viShayadi vItaBayana padAbjadali
viparIta buddhiyanu Iyade sadA pAlisalemma||33||
Odisuva gurugaLanu jaridu saha Odugarige upadESisida
mahadAdi kAraNa sarvaguNa saMpUrNa hariyeMdu vAdisuva
tatpatiya tOrendu A danuja besagoLalu
staMBadi SrIdana AkShaNa tOrisida prahlAda salahemma||34||
bali modalu sapta indraru ivarige kalita karmaja divijaru eMbaru
uLida EkAdaSa manugaLu uciththya cavana muKa
kularShigaLu eMBattu haihaya iLiya kaMpanagaida pRuthu
mangaLa parIkShita nahuSha nABi yayAti SaSibindu||35||
Sataka sankEta uLLa priyavrata Barata mAMdhAta puNyASritaru
jayavijayAdigaLu gandharvarenTu jana
hutavahaja pAvaka sanAtana pitRugaLu eLvaru citraguptaru
pratidinadi pAlisali tammavanendu emagolidu||36||
vAsavAlaya Silpa vimala jalASayagaLoLu ramipa UrvaSi
BESa ravigaLa ripugaLenisuva rAhukEtugaLu
SrISa pada panthAna dhUmArcIra divijaru
karmajarige sadA samAna divaukasaru koDali emage mangaLava||37||
dyunadi SyAmala saMj~ja rOhiNi Ganapa parjanya aniruddhana vanite
brahmAnDABimAni virATa dEviyara nenevenu
A nalavinde dEvAnana mahiLe svAhAKyaru
AlOcane koDali nirviGnadiM BagavadguNaogaLali||38||
vidhipitana pAdAMbujagaLige madhupanAnte virAjipAmala
udakagaLige sadABimAniyu eMdenisikoMba budhage nA vandisuve sammOdadi
niraMtaravu olidemage
aByudaya pAlisalendu paramOtsavadoLu anudinadi||39||
SrI viriMcAdyara manake nilukAva kAlake
janana rahitana tAvolisi maganendu muddisi lIlegaLa nOLpa
dEvakige vandipe yaSOdA dEvige Anamisuvenu
parama kRupAvalOkanadinda salahuvudu emma santatiya||40||
pAmararana pavitragaisuva SrI mukundana vimala manMgaLa
nAmagaLige aBimAniyAda uShAKya dEviyaru
BUmiyoLaguLLa aKiLa sajjanara AmayAdigaLa aLidu salahali
A marutvAn maneya vaidyara ramaNi pratidinadi||41||
puruTa lOcana ninna kaddoydiralu prArthise
dEvategaLa uttarava lAlisi taMda varAha rUpa tAnAgi
dharaNi janani ninna pAdakkeragi binnaisuvanu
pAdasparSa modalAda aKiLa dOShagaLu eNisadireMdu||42||
vanadhivasane varAdri nicaya stanavirAjite
cEtanAcEtana vidhArake gandha rasa rUpAdi guNa vapuShe
munikulOttama kaSyapana nijatanuje ninage anamipe
ennavaguNagaLu eNisade pAlipudu paramAtmanardhAngi||43||
hari gurugaLa arcisada pApAtmarana SikShisalOsuga
SanaiScaranenisi duShPalagaLIve nirantaradi biDade
taraNi nandana ninna pAdAMburuhagaLige A namipe
bahu dustara BavArNadi magnanAdenna uddharisabEku||44||
niratiSaya suj~jAna pUrvaka viracisuva niShkAma karmagaLaritu
tattatkAladali tajjanya Palarasava hariya nEmadali uNisi
bahujIvarige karmapanenipa
gurupuShkaranu satkriyangaLali nirviGnateya koDali||45||
SrInivAsana parama kAruNyAni vAsasthAnaru enipa kRuSAnujaru
sahasra ShODaSa Sataru SrI kRuShNa mAniniyaru eppattu
yakSharu dAnavaru mUvattu
cAraNa ajAnaja amararu apsararu gandharvarige namipe||46||
kinnararu guhyakaru rAkShasa pannagaru pitRugaLu siddharu
sannuta ajAnajaru samaru ivaru amara yOnijaru
innivara gaNaventu baNNisalu ennoLave
karuNadali paramApanna janarige koDali sanmuda parama snEhadali||47||
A yamuneyoLu sAdaradi kAtyAyanI vratadharisi
kelaru dayAyudhane patiyendu kelavaru jAratanadalli
vAyupitanolisidaru Irvage tOya sarasara
pAdakamalake nA eraguve manOrathaMgaLa salisali anudinadi||48||
nUrumunigaLa uLidu mElaNa nUru kOTi tapOdharana
pAdAravindake mugive karagaLanu uddharisalendu
mUru sapta SatAhvayara toredu I RuShigaLa anantaraliha
BUri pitRugaLu koDali emage saMtata sumangaLava||49||
pAvanake pAvananu enisuva ramA vinOdiya guNagaNaogaLa
sAvadhAnadali Eka mAnasarAgi susvaradi
A vibudhapati saBeyoLage nAnA vilAsadi pADi suKisuva
dEva gaMdharvaru koDali emage aKiLa puruShArtha||50||
Buvana pAvana mALpa lakShmI dhavana
mangaLa divya nAma stavanagaiva manuShya gandharvarige vandisuve
pravara BUBujara uLidu madhyama kuvalayaparu endu enisikoMbara
divasa divasangaLali nenevanu karaNa Suddhiyali||51||
SrI mukundana mUrtisale saudAminiyOL hRudaya vArija
vyOma manDala madhyadali kANutali mOdisuva
A manuShyOttamara padayuga tAmarasagaLige eraguve
sadA kAmitArthagaLittu salahali praNata janatatiya||52||
I mahI maMDaladoLiha guru SrImadAcAryara matAnugaru
A mahAvaiShNavara viShNu padAbja madhukarara stOmake anamisuvenu
avaravara nAmagaLanu EM pELve bahuvidha
yAma yAmaMgaLali bOdhisali emage sanmatiya||53||
mAranayyana karuNa pArAvAra muKya supAtraru enipa
sarOruhAsana vANi rudra iMdrAdi suranikara
tAratamyAtmaka supadyagaLa Aru paThisuvaru A janarige
ramAramaNa pUraisali Ipsita sarvakAladali||54||
mUru kAlagaLalli tutise SarIra vAngmanaH Suddhi mALpudu
dUragaisuvadu aKiLa pApa samUha pratidinadi
cOraBaya rAjaBaya nakra camUra Sastra jalAgni BUta
mahOraga jvara naraka Baya saMBavisadu endendu||55||
jayajayatu trijagadvilakShaNa jayajayatu jagadEka kAraNa
jayajayatu jAnakI ramaNa nirgata jarAmaraNa
jayajayatu jAhnavI janaka jayajayatu daitya kulAntaka
BavAmaya hara jagannAtha viThala pAhimAM satata||56||
harikathAmRutasAra gurugaLa karuNadindApanitu pELuve
parama BagavadBaktaru idanAdaradi kELuvudu||