‘ಸಖತ್‘ ಒಂದು ಪ್ರಣಯ ಭರಿತ ಕನ್ನಡ ಚಿತ್ರ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸುರಭಿ ಪುರಾಣಿಕ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರ ನವೆಂಬರ್ 26, 2021 ಕ್ಕೆ ತೆರೆಗೆ ಬರಲಿದೆ.
‘ಮಾತಿನ ಈಟಿಯ ಬೀಸಿ’ ಅಥವಾ ‘ಶುರುವಾಗಿದೆ ಸಿಹಿ ಕಂಪನ’ ಹಾಡು ಸಿದ ಶ್ರೀರಾಮ್ ಅವರ ಕಂಠದಲ್ಲಿ ತುಂಬಾ ಇಂಪಾಗಿ ಬಂದಿದೆ. ಅರ್ಜುನ್ ಲೂಯಿಸ್ ಅವರು ಹೊಸ ಹೊಸ ಕನ್ನಡ ಶಬ್ದಗಳಿಂದ ಹಾಡನ್ನು ಶ್ರೀಮಂತಗೊಳಿಸಿದ್ದಾರೆ.
Table of Contents
Shuruvagide Sihi Kampana Romantic Song Lyrics Credits:
ಚಿತ್ರ : ಸಖತ್
ನಿರ್ದೇಶನ : ಸುನಿ
ನಿರ್ಮಾಣ : ನಿಶಾ ವೆಂಕಟ ಕೋನಂಕಿ, ಸುಪ್ರೀತ್
ತಾರಾಬಳಗ : ಗಣೇಶ್ , ಸುರಭಿ ಪುರಾಣಿಕ ,ನಿಶ್ವಿಕಾ ನಾಯ್ಡು
ಸಂಗೀತ : ಜೂಧ ಸಂಧಿ
ಗಾಯನ : ಸಿದ ಶ್ರೀರಾಮ್
ಸಾಹಿತ್ಯ : ಅರ್ಜುನ್ ಲೂಯಿಸ್
ಆಡಿಯೋ ಹಕ್ಕು : ಆನಂದ ಆಡಿಯೋ
Shuruvagide Sihi Kampana Romantic Song Lyrics In Kannada:
ಮಾತಿನ ಈಟಿಯ ಬೀಸಿ
ಲಾಟೀನು ಕಣ್ಣಲ್ಲೇ ಉರಿಸಿ
ಬೇಟೆಗೆ ಬಂದಳು ರೂಪಸಿ
ಈಕೆಯ ಕೈಯಿಂದ ಉಳಿಸಿ
ಕುಂಚವೇ ಸೋಲುವ ಚೆಂದ
ಕುಂಚವು ಮೀರದ ಅಂದ
ಸಂಪಿಗೆ ತೀಡಿದ ಗಂಧ
ಮೇನಕೆ ಹೆತ್ತಿರೋ ಕಂದ
ಒಲವಿನ ಅಲೆಗಳು ಎದೆಯ ಮೀಟಿ
ಹುಡುಗನ ಮನಸೇ ಲೂಟಿ
ಶುರುವಾಗಿದೆ ಸಿಹಿ ಕಂಪನ
ನರನಾಡಿಲು ನಿನ್ನ ರಿಂಗಣ
ಮಾತಲ್ಲಿ ಸಕ್ಕರೆ ಪಾಕ
ಕೇಳುತ ಜೀವವೇ ಮೂಕ
ನಗುವಲಿ ಮೋಹಕ ಶಾಖ
ದಾಟಿಸಿ ಸೆಳೆದಳು ಲೋಕ
ಒಳಬೇಗುದಿ ನಿನದೇ ಸಖಿ
ತುಸು ಕೂತು ಕೇಳು ನೀ ಗೋಳು
ಮನದಾಹಕೆ ಹೊಸ ಶಾಯರಿ
ಪಿಸು ಮಾತು ಮಾತಲೇ ಹೇಳು
ನಡೆದಳು ಅಪ್ಸರೆ ಒಲವ ಗೀಚಿ
ಹುಡುಗನ ಮನಸು ದೋಚಿ
ಶಿಲಾಬಾಲಿಕೆ ಉಸಿರಾಡಿದೆ
ಎದೆಯ ಮಾಳಿಗೆ ಅಲುಗಾಡಿದೆ
ಎದೆಗೂಡಲಿ ನಿನದೇ ದನಿ
ಗುನುಗುತ್ತಾ ಪ್ರೀತಿಯ ಹಾಡು
ನಡೆದಾಡುವ ಚೆಲುವ ಗಣಿ
ದಯಮಾಡಿ ಈಕಡೆ ನೋಡು
ಕಚಗುಳಿ ಇಡುತಿದೆ ಗೆಜ್ಜೆ ಘಲ್ಲು
ಹರಡಿದೆ ಒಲವಾ ಗುಲ್ಲು
ಶುರುವಾಗಿದೆ ಸಿಹಿ ಕಂಪನ
ನರನಾಡಿಲು ನಿನ್ನ ರಿಂಗಣ
Shuruvagide Sihi Kampana Romantic Song Lyrics In English:
Mātina īṭiya bīsi
lāṭīnu kaṇṇallē urisi
bēṭege bandaḷu rūpasi
īkeya kaiyinda uḷisi
kun̄cavē sōluva cenda
kun̄cavu mīrada anda
sampige tīḍida gandha
mēnake hettirō kanda
olavina alegaḷu edeya mīṭi
huḍugana manasē lūṭi
śuruvāgide sihi kampana
naranāḍilu ninna riṅgaṇa
mātalli sakkare pāka
kēḷuta jīvavē mūka
naguvali mōhaka śākha
dāṭisi seḷedaḷu lōka
oḷabēgudi ninadē sakhi
tusu kūtu kēḷu nī gōḷu
manadāhake hosa śāyari
pisu mātu mātalē hēḷu
naḍedaḷu apsare olava gīci
huḍugana manasu dōci
śilābālike usirāḍide
edeya māḷige alugāḍide
edegūḍali ninadē dani
gunuguttā prītiya hāḍu
naḍedāḍuva celuva gaṇi
dayamāḍi īkaḍe nōḍu
kacaguḷi iḍutide gejje ghallu
haraḍide olavā gullu
śuruvāgide sihi kampana
naranāḍilu ninna riṅgaṇa