Kudi Notada Kidi Sokisi Song Lyrics Kannada English

ಕುಡಿ ನೋಟದ ಕಿಡಿ ಸೋಕಿಸಿ ಲಿರಿಕ್ಸ್ | Kudinotada Kidi Sokisi Song Lyrics In Kannada English-srikrishna@gmail.com

‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡು SriKrishna@gmail.com ಚಿತ್ರದಲ್ಲಿದೆ.
SriKrishna@gmail.com ಮುಂಬರುವ ಪ್ರಣಯ ಭರಿತ ಚಿತ್ರವಾಗಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಮುಖ್ಯ ಪಾತ್ರಧಾರಿಗಳಾಗಿದ್ದರೆ.
ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ ಹಾಗೂ ಸಂದೇಶ್ ನಾಗರಾಜವರು ನಿರ್ಮಿಸಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಇದ್ದು ‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡನ್ನು ಕವಿರಾಜ್ ಬರೆದಿದ್ದಾರೆ.
ಸಂಜೀತ್ ಹೆಗಡೆ ಸೊಗಸಾಗಿ ಹಾಡಿದ್ದಾರೆ.

ಚಿತ್ರ: SriKrishna@gmail.com
ನಿರ್ದೇಶನ:ನಾಗಶೇಖರ್
ನಿರ್ಮಾಣ: ಸಂದೇಶ್ ನಾಗರಾಜ
ಸಂಗೀತ ನಿರ್ದೇಶನ: ಅರ್ಜುನ್ ಜನ್ಯ
ಗೀತ ರಚನೆ: ಕವಿರಾಜ್
ಧ್ವನಿ ಸುರುಳಿ ಹಕ್ಕು: ಆನಂದ್ ಆಡಿಯೋ

ಮಾಹಿತಿ:
1. ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ ಟೇಲ್’ ಚಿತ್ರದಿಂದ ಪ್ರಸಿದ್ಧರಾಗಿದ್ದಾರೆ
2. ನಿರ್ದೇಶಕ ನಾಗಶೇಖರ್ ‘ಸಂಜು ವೆಡ್ಸ್ ಗೀತಾ’ ಚಿತ್ರದಿಂದ ಪ್ರಸಿದ್ಧಿಗೆ ಬಂದಿದ್ದಾರೆ
3. ಪ್ರೀತಮ್ ಗುಬ್ಬಿಯವರು ಸಂಭಾಷಣೆ ಬರೆದಿದ್ದಾರೆ
4. ಭಾವನಾ ಮೆನನ್ ಈ ಮೊದಲು ಪುನೀತ್ ರಾಜಕುಮಾರ್ ಅವರ ‘ಜಾಕಿ’ ಚಿತ್ರದಲ್ಲಿ ನಾಯಕಿ ಆಗಿದ್ದರು

Kudinotada Kidi Sokisi Song Lyrics In Kannada

ಕುಡಿ ನೋಟದ ಕಿಡಿ ಸೋಕಿಸಿ
ಸುಡಬೇಡವೇ ನನ್ನಿಥರ
ತುಸು ಕರುಣೆ ತೋರಿಸು ಬಡಪಾಯಿಗೆ
ಅತಿಯಾಗಿದೆ ಆಕರ್ಷಣೆ
ಏನಾದರೂ ನೀನೇ ಹೊಣೆ
ಇರಲಾರೆ ಸುಮ್ಮನೆ
ತುಸು ಕರುಣೆ ತೋರಿಸು ಬಡಪಾಯಿಗೆ

ನನ್ನ ಅಂಗೈಲಿ ನೀಡು ನಿನ್ನ ಅಂಗೈನ
ಭೂಮಿ ನೇ ಏಳು ಸುತ್ತು ಸುತ್ತೋಣ
ನಿನ್ನ ಮುಂದೆ ಮಂಡಿ ಊರಿ ನಿನ್ನನ್ನೇ ನೋಡುತಾ
ಕಳೆವಾಸೆ ಸಂಪೂರ್ಣ ಈ ಜೀವಿತ
ಎದುರಲ್ಲಿ ನೀನಿಂತು
ನಗುವಾಗ ನಾನಂತು ಅಸಹಾಯಕ
ತುಸು ಕರುಣೆ ತೋರಿಸು ಬಡಪಾಯಿಗೆ

ಸಿದ್ಧ ನಾನಿನ್ನು ನೂರು ಸಾರಿ ಸಾಯೋಕೆ
ನಿನ್ನನ್ನು ಒಮ್ಮೆ ಭೇಟಿ ಮಾಡೋಕೆ
ಈ ಜೀವ ಮಣ್ಣಿನಲ್ಲಿ ಮಣ್ಣಾಗಿ ಹೋದರೂ
ಬಾ ಎಂದು ನೀ ಕೂಗು ನಾ ಹಾಜರು
ನೀ ಮುಂದೆ ಬಂದಾಗ ಮಾತಿಲ್ಲ ನಾ
ಮೂಗ ಅಸಹಾಯಕ
ತುಸು ಕರುಣೆ ತೋರಿಸು ಬಡಪಾಯಿಗೆ

Kudinotada Kidi Sokisi Song Lyrics In English

Kudi notada kidi sokisi
Suda bedave nannee thara
Tusu Karune torisu badapayige
Atiyaagide aakarshane
Yenadaroo neene hone
Iralaare summane
Tusu Karune torisu Badapayige

Nanna angaili needu ninna angaina
Bhumine ne yelu suttu suttona
Ninnna munde mandi oori ninnanne noduta
Kalevaase sampurna Ee jeevitha
Yeduralli neeninthu
Naguvaaga naantu asahaayaka
Tusu Karune torisu Badapayige

Siddha naninnu nooru sari saayoke
Ninnannu omme bheti maadoke
Ee jeeva manninalli mannagi hodaru
Ba yendu nee koogu na haajaru
Nee munde bandaga matilla naa
Mooga asahaayaka
Tusu Karune torisu Badapayige

Download Kudinotada Kidi Sokisi Song Lyrics In Kannada & Engilsh

Leave a Comment

Your email address will not be published. Required fields are marked *