Table of Contents
ಬಿಟ್ಕಾಯಿನ್ ಅಂದರೆ ಏನು?
ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ ) ಚಲಾವಣೆಯ ನಾಣ್ಯ (ಕರೆನ್ಸಿ).
ಬಿಟ್ಕಾಯಿನ್ ಅನ್ನು 2008 ರಲ್ಲಿ Mr. ಸಾತೋಷಿ ನಾಕಮೋಟೋ ಅವರು ಸ್ಥಾಪಿಸಿದ್ದರು. ಬಿಟ್ಕಾಯಿನ್ 2009 ರಲ್ಲಿ ಚಲಾವಣೆಗೆ ಬಂದಿತು.
ನಿಜವಾಗಿ ಹೇಳಬೇಕೆಂದರೆ ಈ Mr. ಸಾತೋಷಿ ನಾಕಮೋಟೋ ಅವರು ಯಾರು ಅಂತಾನೇ ಯಾರಿಗೂ ಗೊತ್ತಿಲ್ಲ. ಅವರು ನಿಜವಾದ ಮನುಷ್ಯರ ಅಥವಾ ಕಾಲ್ಪನಿಕ ಹೆಸರಾ ಗೊತ್ತಿಲ್ಲ !!
ಬಿಟ್ಕಾಯಿನ್ ಒಂದು ಡಿಜಿಟಲ್ ಕರೆನ್ಸಿ ಆಗಿದ್ದು, ಅದಕ್ಕೆ ಭೌತಿಕವಾದ ರೂಪ ಇಲ್ಲಾ.
ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ )ಆಧಾರದ ಮೇಲೆ ಕೆಲಸ ಮಾಡುತ್ತದೆ.
ಗುಪ್ತಲಿಪಿ (ಕ್ರಿಪ್ಟೋಗ್ರಾಫಿ ) ಅಂದರೆ ಏನು?
ಮೊದಲಿಗೆ ಕ್ರಿಪ್ಟೋಗ್ರಾಫಿ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ಸಾಮಾನ್ಯ ಸರಳ ಪಠ್ಯವನ್ನು (ಟೆಕ್ಸ್ಟ್) ತಿಳಿಯಲಾರದ ಪಠ್ಯವಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಕ್ರಿಪ್ಟೋಗ್ರಾಫಿ ಅಂತ ಹೇಳ್ತಾರೆ.
ಅಂದರೆ, ಆ ಟೆಕ್ಸ್ಟ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ಎಲ್ಲ ಪಾಸ್ವರ್ಡ್ ಗಳನ್ನೂ ರಕ್ಷಿಸಲು ಕ್ರಿಪ್ಟೋಗ್ರಾಫಿ ಬಳಸುತ್ತಾರೆ.
ಆದ್ದರಿಂದ ಇದು ಸರಳ ಪಠ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಪಠ್ಯವಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ.
ಇದು ಒಂದು ನಿರ್ದಿಷ್ಟ ರೂಪದಲ್ಲಿ ಡೇಟಾವನ್ನು ಸಂಗ್ರಹಿಸುವ ಮತ್ತು ರವಾನಿಸುವ ಒಂದು ವಿಧಾನವಾಗಿದೆ, ಇದರಿಂದಾಗಿ ಅದನ್ನು ಉದ್ದೇಶಿಸಿರುವವರು ಮಾತ್ರ ಅದನ್ನು ಓದಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು.
ಹೀಗೆ ಕ್ರಿಪ್ಟೋಗ್ರಾಫಿ ಬಳಸಿಕೊಂಡು ಕಳಿಸಿರುವ ಸಂದೇಶವನ್ನು ಕೇವಲ ಕಳಿಸಿದವರು ಮತ್ತು ಅದನ್ನು ಪಡೆದವರು ಮಾತ್ರ ಓದಬಹುದು.
ಕ್ರಿಪ್ಟೋಗ್ರಾಫಿ ಬಳಸಿಕೊಂಡು ಕರೆನ್ಸಿ ಇರುವದರಿಂದ ಅದು ಕ್ರಿಪ್ಟೋ ಕರೆನ್ಸಿ ಎಂದು ಎನಿಸಿಕೊಳ್ಳುತ್ತದೆ.
ಕ್ರಿಪ್ಟೋ ಕರೆನ್ಸಿ ಎಂದರೆ ಏನು?
ಸರಳ ಪದಗಳಲ್ಲಿ ಕ್ರಿಪ್ಟೋಕರೆನ್ಸಿ ಡಿಜಿಟಲ್ ನಗದು ರೂಪವಲ್ಲದೆ ಮತ್ತೇನಲ್ಲ.
ಈಗ ಒಂದು ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳೋಣ.
ನಾವು ಆನಂದ್ ಎನ್ನುವ ಒಬ್ಬ ವ್ಯಕ್ತಿ ಭಾರತದಲ್ಲಿದ್ದಾನೆ ಎಂದು ಊಹಿಸೋಣ.
ಮತ್ತು ಅಮೇರಿಕಾದಲ್ಲಿ ಸಂತೋಷ್ ಎನ್ನುವ ವ್ಯಕ್ತಿ ಇದ್ದಾನೆ ಎಂದುಕೊಳ್ಳೋಣ.
ಭಾರತದಲ್ಲಿರುವ ಆನಂದ ಅಮೆರಿಕಾದಲ್ಲಿರುವ ಸಂತೋಷ್ ಗೆ ಡಾಲರ್‌ಗಳನ್ನು ಕಳುಹಿಸಲು ಬಯಸಿದರೆ
ಆ ವ್ಯಕ್ತಿಯು ನೇರವಾಗಿ ಡಾಲರ್ ಕಳುಹಿಸಬಹುದೇ?
ಇಲ್ಲ.
ಆನಂದ್ ಮೊದಲು ಬ್ಯಾಂಕಿಗೆ ಹೋಗಬೇಕಾಗುತ್ತದೆ.
ಆಗ ಬ್ಯಾಂಕ್ ಮೂರನೇ ವ್ಯಕ್ತಿಯಾಗಿದ್ದು, ಅವರು ರೂಪಾಯಿಗಳನ್ನು ಡಾಲರ್‌ಗಳಾಗಿ ಪರಿವರ್ತಿಸುತ್ತಾರೆ ಮತ್ತು ನಂತರ ಕಳುಹಿಸಿದವರು ಯಾರು ಪಡೆಯುತ್ತಿರುವವರು ಯಾರು ಎಂದು ಪರಿಶೀಲಿಸುತ್ತಾರೆ.
ಬ್ಯಾಂಕ್ ಇದಕ್ಕಾಗಿ ಸಲ್ಪ ಫೀ ಪಡೆದು ಈ ಸೇವೆಯನ್ನು ನೀಡುತ್ತದೆ.
ಆದ್ದರಿಂದ ಈ ವ್ಯವಹಾರವು ಇಲ್ಲಿ ಬ್ಯಾಂಕಿನ ಮಧ್ಯವರ್ತಿಯ ಸಹಾಯದಿಂದ ಮಾತ್ರ ಸಾಧ್ಯವಾಯಿತು.
ಈಗ ಡಿಜಿಟಲ್ ರೂಪದ ಕರೆನ್ಸಿಗೆ ಈ ತರಹದ ಯಾವುದೇ ಅಡೆ ತಡೆ ಇಲ್ಲದೆ ವಹಿವಾಟು ಮಾಡಬಹುದೇ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ಇಲ್ಲಿ ಆನಂದ್ ಬ್ಯಾಂಕ್ ನಂತಹ ಮೂರನೇ ವ್ಯಕ್ತಿಯ ಸಹಾಯ ಇಲ್ಲದೇ ಸಂತೋಷ್ ಗೆ ಹಣ ಟ್ರಾನ್ಸ್ಫರ್ ಮಾಡಿದರೆ ಅದು ಕ್ರಿಪ್ಟೋಕರೆನ್ಸಿ ಆಗುತ್ತದೆ.
ಕ್ರಿಪ್ಟೋಕರೆನ್ಸಿ ಅನುಕೂಲತೆಗಳೇನು?
1. ವ್ಯವಹಾರಕ್ಕೆ ಯಾವ ಮಧ್ಯವರ್ತಿಗಳು ಬೇಡ – ಅಂದರೆ ಬ್ಯಾಂಕ್ ಬೇಡ
2. ಯಾವುದೇ ಭೌಗೋಳಿಕ ಪರಿಧಿ ಇಲ್ಲ- ಎಲ್ಲ ದೇಶಗಳಲ್ಲೂ ಒಂದೇ ಕರೆನ್ಸಿ
3. ಮಧ್ಯವರ್ತಿ (ಬ್ಯಾಂಕ್) ಇಲ್ಲದೇ ಇರುವದರಿಂದ ಈ ವಹಿವಾಟಿನಲ್ಲಿ ಯಾವ ಹೆಚ್ಚಿನ ಖರ್ಚು (ಫೀಸ್) ಇಲ್ಲ
4. ವಹಿವಾಟು ತುಂಬಾ ತ್ವರಿತ ಗತಿಯಲ್ಲಿ ಪೂರ್ಣವಾಗುತ್ತದೆ. – 4 ಸೆಕೆಂಡ್ ಇಂದ 10 ನಿಮಿಷದ ಒಳಗೆ ವಹಿವಾಟು ಪೂರ್ಣವಾಗುತ್ತದೆ.
ಕ್ರಿಪ್ಟೋಕರೆನ್ಸಿ ಅನಾನುಕೂಲತೆಗಳೇನು ?
1. ತಪ್ಪಾದ ವರ್ಗಾವಣೆ ಮಾಡಿದರೆ, ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ.
ಕ್ರಿಪ್ಟೋಗ್ರಾಫಿ ಬಳಸಿಕೊಂಡು ಕಳಿಸಿರುವ ಸಂದೇಶವನ್ನು ಕೇವಲ ಕಳಿಸಿದವರು ಮತ್ತು ಅದನ್ನು ಪಡೆದವರು ಮಾತ್ರ ಓದಬಹುದು.ಆದ್ದರಿಂದ ತಪ್ಪಾದ ವರ್ಗಾವಣೆಯನ್ನು ಸರಿ ಪಡಿಸಲು ಸಾಧ್ಯವೇ ಇಲ್ಲ
2. ಕಾನೂನು ಬಾಹಿರ ವಹಿವಾಟುಗಳಿಗೆ ಉಪಯೋಗ.
ಕಳುಹಿಸುವವರು ಮತ್ತು ಸ್ವೀಕರಿಸುವವರ ಗುರುತನ್ನು ಅನಾವರಣಗೊಳಿಸದ ಕಾರಣ ದುರದೃಷ್ಟವಶಾತ್ ಇದನ್ನು ಅಂತರ್ಜಾಲದ ಮೂಲಕ ಬಹಳಷ್ಟು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತದೆ, ಇದನ್ನು ಅನೇಕ ಬಾರಿ ಅಂತರ್ಜಾಲದ ಒಂದು ಭಾಗಕರೆಯವಾದ ‘ಡಾರ್ಕ್ ವೆಬ್’ ಎಂದು ಕರೆಯಲಾಗುತ್ತದೆ.
ಬಿಟ್ ಕಾಯಿನ್ ಯಾವ ಟೆಕ್ನಾಲಜಿ ಉಪಯೋಗಿಸುತ್ತದೆ?
ಬಿಟ್ ಕಾಯಿನ್ (ಅಥವಾ ಯಾವುದೇ ಕ್ರಿಪ್ಟೋಕರೆನ್ಸಿ) ಬ್ಲಾಕ್‌ಚೇನ್(Blockchain) ತಂತ್ರಜ್ನ್ಯಾನದ ಮೇಲೆ ಕೆಲಸ ಮಾಡುತ್ತದೆ.
ಬ್ಲಾಕ್‌ಚೇನ್ ಎಂದರೆ ಏನು?
ಸರಳ ಪದಗಳಲ್ಲಿ ಬ್ಲಾಕ್‌ಚೇನ್ ಎರಡು ಪದಗಳನ್ನು ಒಳಗೊಂಡಿರುತ್ತದೆ ಮತ್ತು ಒಂದು ಬ್ಲಾಕ್ ಮತ್ತು ಇನ್ನೊಂದು ಚೈನ್.
ಈಗ ಬ್ಲಾಕ್ ಅಂದರೆ ಏನು?
ಬ್ಲಾಕ್ ಎನ್ನುವುದು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಡೇಟಾಬೇಸ್ ಹೊರತುಪಡಿಸಿ ಏನೂ ಅಲ್ಲ.
ಈ ಬ್ಲಾಕ್ ಯಾವ ರೀತಿಯ ಮಾಹಿತಿಯನ್ನು ಹೊಂದಿರುತ್ತದೆ?
ಮೂಲ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಲ್ಲಿ ಆನಂದ್ ಭಾರತದಿಂದ ಸಂತೋಷ್ ಅವರಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದಾರೆ.
ಇದರಲ್ಲಿ ಯಾರು ಹಣವನ್ನು ವರ್ಗಾಯಿಸುತ್ತಿರುವವರು ಯಾರು, ಪಡೆಯುತ್ತಿರುವವವರು ಯಾರು , ಯಾವ ಸಮಯದಲ್ಲಿ ಕಳುಹಿಸುತ್ತಿದ್ದಾರೆ ಇವೇ ಮೊದಲಾದ ಮಾಹಿತಿಯನ್ನು ಬ್ಲಾಕ್ನಲ್ಲಿ ಇರಿಸುರುತ್ತಾರೆ.
ಆನಂದ್, ಸಂತೋಷ್ ಮಧ್ಯ ನಡೆಯುತ್ತಿರುವ ವಹಿವಾಟು ಇನ್ನು ಎಷ್ಟೋ ಜನರ ಮಧ್ಯ ನಡಿತಾ ಇರುತ್ತದೆ. ಇವೆಲ್ಲ ವಹಿವಾಟಿನ ಡೇಟಾ ಸೇರಿಸಿ ಸೇರಿಸಿ ಬ್ಲಾಕ್ ತುಂಬಿ ಹೋಗುತ್ತದೆ. ಆಗ ಎರಡನೆಯ ಬ್ಲಾಕ್ ಗೆ ಮಾಹಿತಿ ಶೇಖರಣೆ ಆಗುತ್ತದೆ.. ಆಮೇಲೆ ಮೂರನೇದು..ನಾಲ್ಕನೆಯದು .
ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ 2 ನೆಯ ಬ್ಲಾಕ್ ಮೊದಲನೆಯ ಬ್ಲಾಕ್ ನ ಕೊನೆಯ ಮಾಹಿತಿಗೆ ಲಿಂಕ್ ಆಗಿರುತ್ತದೆ.
ಮೂರನೆಯ ಬ್ಲಾಕ್ ನ ಮೊದಲ ಮಾಹಿತಿ ಎರಡನೆಯ ಬ್ಲಾಕ್ ನ ಕೊನೆಯ ಮಾಹಿತಿಗೆ ಲಿಂಕ್ ಆಗಿರುತ್ತದೆ.
ಆದ್ದರಿಂದ ಈ ಎಲ್ಲ ಬ್ಲಾಕ್ ಗಳು ತಮ್ಮ ಮಧ್ಯ ಒಂದು ಚೈನ್ ಇಂದ ಜೋಡಣೆ ಆಗಿರುತ್ತದೆ.
ಹಾಗಾದ್ರೆ ಅಲ್ಲಿರುವ ಡೇಟಾವನ್ನು ಯಾವುದೇ ಬ್ಲಾಕ್ ನಲ್ಲಿರುವ ಡೇಟಾವನ್ನು ಡಿಲೀಟ್ ಮಾಡಬಹುದಾ ?
ಇಲ್ಲ ಡಿಲೀಟ್ ಮಾಡಲು ಬರುವುದಿಲ್ಲ. ಯಾಕೆಂದರೆ ಆ ಬ್ಲಾಕ್ ಗಳು ಒಂದರಿಂದ ಇನ್ನೊಂದಕ್ಕೆ ಚೈನ್ ಇಂದ ಜೋಡಿಸಲ್ಪಟ್ಟಿರುತ್ತವೆ.
ಇದರಿಂದ ಬ್ಲಾಕ್ ಚೈನ್ ನಿರ್ವಿಕಾರ ಗೊಳ್ಳುವುದಿಲ್ಲ
ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಅಥವಾ ಕಾನೂನುಬಾಹಿರವೇ?
ಎರಡು ವಿಭಿನ್ನ ಸಮಸ್ಯೆಗಳಿವೆ -ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಮತ್ತು ಕ್ರಿಪ್ಟೋಕರೆನ್ಸಿಯನ್ನು ನಗದು ರೂಪವಾಗಿ ಚಲಾಯಿಸಬಹುದಾ?
ಈ ಎರಡೂ ಸಮಸ್ಯೆಗಳನ್ನು ನಿಭಾಯಿಸೋಣ:
ಇದು ಕಾನೂನುಬದ್ಧವಾಗಿದೆಯೇ? ಉತ್ತರ ಹೌದು
ಏಕೆ? ಏಕೆಂದರೆ ೬-ಏಪ್ರಿಲ್-೨೦೧೮ ರಂದು RBI ಕ್ರಿಪ್ಟೋ ಕಂಪನಿಗಳೊಂದಿಗೆ ಸಂಬಂಧ ಹೊಂದಲು ಭಾರತೀಯ ಬ್ಯಾಂಕುಗಳಿಗೆ ಬ್ಯಾಂಕಿಂಗ್ ನಿಷೇಧ ಹೇರಿತು.
ಆದರೆ ಅದೇ ಬ್ಯಾಂಕಿಂಗ್ ನಿಷೇಧವನ್ನು ಸುಪ್ರೀಂ ಕೋರ್ಟ್ ತೀರ್ಪಿನಿಂದ 2018 ರಲ್ಲಿ ತೆಗೆದುಹಾಕಲಾಯಿತು ಮತ್ತು ಈ ಕಾರಣದಿಂದಾಗಿ ಭಾರತೀಯ ಬ್ಯಾಂಕುಗಳಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಲು ಅವಕಾಶ ನೀಡಲಾಯಿತು.
ತೀರ್ಮಾನ ಏನು?
ಇಂದಿನ ದಿನಾಂಕದಂತೆ ಕ್ರಿಪ್ಟೋಕರೆನ್ಸಿಗಳಲ್ಲಿ ವ್ಯಾಪಾರ ಮಾಡುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ.
ಮತ್ತೆ ಸಮಸ್ಯೆ ಏನು ಹಾಗಾದರೆ? ಸಮಸ್ಯೆಯೆಂದರೆ ಕ್ರಿಪ್ಟೋಕರೆನ್ಸಿ ಇನ್ನೂ ಹಣದ ರೂಪದಲ್ಲಿ ಚಲಾವಣೆ ಮಾಡಲು ಬರುವದಿಲ್ಲ.
ಇದರರ್ಥ ಏನು? – ನಾನು ಅಂಗಡಿಗೆ ಹೋಗಿ ಫೋನ್ ಖರೀದಿಸಲು ಬಯಸಿದರೆ,ನಾನು ಅಂಗಡಿಗೆ ಹೋಗುತ್ತೇನೆ.
ಹೋಗಿ ಅಂಗಡಿಯವರಿಗೆ “ನೀವು ನನಗೆ ಈ ಫೋನ್ ನೀಡಿ ಮತ್ತು ನಾನು ನಿಮಗೆ ಸ್ವಲ್ಪ xyz ಪ್ರಮಾಣದ ಬಿಟ್‌ಕಾಯಿನ್‌ಗಳನ್ನು ಪ್ರತಿಯಾಗಿ ಕೊಡುತ್ತೇನೆ” ಎಂದು ಹೇಳುತ್ತೇನೆ.
ಇದನ್ನು ಅಂಗಡಿಯವರು ಒಪ್ಪುತ್ತಾರೆಯೇ? ಇಲ್ಲ ..ಸಾಧ್ಯವಿಲ್ಲ . ಯಾಕೆಂದರೆ ಬಿಟ್ಕೊಯಿನ್ ಅಥವಾ ಯಾವುದೇ ಕ್ರಿಪ್ಟೋಕರೆನ್ಸಿ ಇನ್ನೂ ಹಣದ ರೂಪದಲ್ಲಿ ಚಲಾವಣೆ ಮಾಡಲು ಬರುವದಿಲ್ಲ.
ನಾನು ಹಣವನ್ನು ರೂಪಾಯಿಗಳಲ್ಲೇ ಕೊಡಬೇಕು.
ಕೊನೆಗೆ
ಬಿಟ್ಕೊಯಿನ್ ಒಂದು ಡಿಜಿಟಲ್ ಹಣವಾಗಿದ್ದು ಭೌತಿಕ ರೂಪ ಇಲ್ಲ. ಬಿಟ್ಕೊಯಿನ್ ಅಥವಾ ಯಾವುದೇ ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನು ಭದ್ಧವಾಗಿದ್ದರೂ ಇನ್ನೂ ಹಣದ ರೂಪದಲ್ಲಿ ಚಲಾವಣೆ ಮಾಡಲು ಬರುವದಿಲ್ಲ.
Pingback: Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ ಇನ್ವೆಸ್ಟ್ ಹೇಗೆ ಮಾಡಬಹುದು - Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ
Pingback: Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ? - Kannada Lyrics Technology Recipe And Much More Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ?