5 Mini Electric Cars India Kannada

Top 5 Mini Electric Cars In India | ಭಾರತದಲ್ಲಿಯ 5 ಮಿನಿ ಎಲೆಕ್ಟ್ರಿಕ್ ಕಾರುಗಳು

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ (ವಿದ್ಯುತ್ ಚಾಲಿತ ವಾಹನಗಳು) ಹೆಚ್ಚು ಹೆಚ್ಚಾಗಿ ನೋಡಲು ಸಿಗುತ್ತವೆ.
ಎಲ್ಲ ಕಾರ್ ಉತ್ಪಾದಿಸುವ ಕಂಪನಿಗಳು ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಿವೆ.
ಈ ಎಲೆಕ್ಟ್ರಿಕ್ ಕಾರ್ ಉಪಯೋಗಿಸುವದರಿಂದ ಪೆಟ್ರೋಲ್ / ಡಿಸೇಲ್ ಉಳಿತಾಯವಾಗುತ್ತವೆ. ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಶಬ್ದ ಮಾಲಿನ್ಯ ಕೂಡ ಕಡಿಮೆ ಆಗುತ್ತದೆ.
ಭಾರತೀಯ ರಸ್ತೆಗಳಲ್ಲಿ ಮಿನಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಸೂಕ್ತ.


ಭಾರತದಲ್ಲಿಯ 5 ಉತ್ತಮ ಚಿಕ್ಕ ಎಲೆಕ್ಟ್ರಿಕ್ ಕಾರಗಳು ಯಾವವು, ಅವುಗಳ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.

ಭಾರತದ ಟಾಪ್ 5 ಮಿನಿ ಎಲೆಕ್ಟ್ರಿಕ್ ಕಾರುಗಳು (India’s Top 5 Mini Electric Cars) :
1. ಮಹಿಂದ್ರಾ E2O ಪ್ಲಸ್ ಎಲೆಕ್ಟ್ರಿಕ್ ಹಾಟ್ಚ್ ಬ್ಯಾಕ್ (Mahindra E2O plus Electric Hatchback )
2. ಮಹಿಂದ್ರಾ e-ವೆರೀಟೋ ಎಲೆಕ್ಟ್ರಿಕ್ ಸೆಡಾನ್ (Mahindra eVerito Electric Sedan)
3. ಸ್ಟಾರ್ಮ್ R3 ಎಲೆಕ್ಟ್ರಿಕ್ ಕಾರು (Strom R3 Electric Car)
4. ಟಾಟಾ ನೆಕ್ಸೋನ್ ಎಲೆಕ್ಟ್ರಿಕ್ SUV (Tata Nexon Electric SUV)
5. ಟಾಟಾ ಟಿಗೊರ್ ಎಲೆಕ್ಟ್ರಿಕ್ ಸೆಡಾನ್ (Tata Tigor Electric Sedan)

Table of Contents

ಎಲೆಕ್ಟ್ರಿಕ್ ವಾಹನಗಳ ಸಮಸ್ಯೆ – ಪರಿಹಾರ

ಎಲೆಕ್ಟ್ರಿಕ್ ಕಾರುಗಳ ಕಲ್ಪನೆ ಮೊದಲಿಂದನೇ ಇತ್ತು. ಆದರೆ ಗ್ರಾಹಕರು ಇರಲಿಲ್ಲ. ಕಾರಣ ಅಂದರೆ ಚಾರ್ಜಿಂಗ್ ಸ್ಟೇಷನ್ ಗಳು ಇರಲಿಲ್ಲ. ಎಲೆಕ್ಟ್ರಿಕ್ ಕಾರು ಹೊಂದಿದವರು ಮನೆಯಲ್ಲಿಯೇ ಚಾರ್ಜ್ ಮಾಡಬೇಕಾಗಿತ್ತು. ಇದರಿಂದ ಹೆಚ್ಚಿನ ದೂರ ಓಡಿಸಲು ಆಗಿರಲಿಲ್ಲ. ಊರಿನ ಒಳಗಡೆ ಮಾತ್ರ ಕಾರುಗಳು ಓಡಾಡ್ತಾ ಇದ್ದವು.

ಇದನ್ನು ಮನಗಂಡು ನವೆಂಬರ್ 2020 ರಲ್ಲಿ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ದೇಶಾದ್ಯಂತ 69,000 ಪೆಟ್ರೋಲ್ ಪಂಪ್‌ಗಳಲ್ಲಿ ಪ್ರತಿಯೊಂದಕ್ಕೂ ಕನಿಷ್ಠ ಒಂದು EV ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.

ಚಾರ್ಜಿಂಗ್ ಸ್ಟೇಷನ್ಗಳು ಹೆಚ್ಚು ಹೆಚ್ಚು ಆದಂತೆ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳು ರಸ್ತೆಗೆ ಬರತೊಡಗಿದವು.

ಈಗ, ದೈತ್ಯ ಕಂಪನಿ ಟೆಸ್ಲಾ ,ನಮ್ಮ ಭಾರತದಲ್ಲಿಯೇ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿರುವ ಸುದ್ದಿಯಿಂದ ಎಲೆಕ್ಟ್ರಿಕ್ ವೆಹಿಕಲ್ ಗಳು, ಅದರಲ್ಲೂ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರೀಯವಾಗುತ್ತಿವೆ. ಟೆಸ್ಲಾ ಮಾಡೆಲ್ 3 (Tesla Model 3) ಯು.ಎಸ್ ಮತ್ತು ಚೀನಾ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಗಣನೀಯವಾದ ಸೆಳೆತ ಕಂಡಿದೆ.


ಅದರಂತೆ MG 5 EV ಕೂಡ ಬಹಳ ಆಕರ್ಷಣೀಯವಾಗಿದೆ.

ಎಲೆಕ್ಟ್ರಿಕ್ ವೆಹಿಕಲ್ ಗಳ ಅನುಕೂಲತೆಗಳು ಹಾಗೂ ಅನಾನುಕೂಲತೆಗಳು | Pros And Cons of Electirc Vehicles

Pros – ಅನುಕೂಲತೆಗಳು
  • ಪೆಟ್ರೋಲ್/ಡೀಸೆಲ್ ಅವಶ್ಯಕತೆ ಇಲ್ಲ
  • ಹೆಚ್ಚು ಅನುಕೂಲಕರ
  • ಉಳಿತಾಯ
  • ಪರಿಸರ ಮಾಲಿನ್ಯ ಇಲ್ಲ
  • ಜನಪ್ರೀಯತೆ
  • ಡ್ರೈವ್‌ಗೆ ಸುರಕ್ಷಿತ
  • ಕಡಿಮೆ ನಿರ್ವಹಣೆ
  • ಕಡಿಮೆಯಾದ ಶಬ್ದ ಮಾಲಿನ್ಯ
  • ಹೆಚ್ಚು ಬ್ಯಾಟರಿ ಬಾಳಿಕೆ ಮತ್ತು ಕಡಿಮೆ ವೆಚ್ಚ
Cons – ಅನಾನುಕೂಲತೆಗಳು
  • ಕಡಿಮೆ ರೀಚಾರ್ಜ್ ಪಾಯಿಂಟ್‌ಗಳು
  • ಆರಂಭಿಕ ಹೂಡಿಕೆಯು ಹೆಚ್ಚು
  • ವಿದ್ಯುತ್ ಉಚಿತವಲ್ಲ
  • ಕಡಿಮೆ ಡ್ರೈವಿಂಗ್ ರೇಂಜ್ ಮತ್ತು ಸ್ಪೀಡ್
  • ದೀರ್ಘ ರೀಚಾರ್ಜ್ ಸಮಯ
  • ಶಬ್ದ ರಹಿತ ಕಾರುಗಳು ಕೆಲೋವೊಮ್ಮೆ ಅಪಾಯ ತರುತ್ತವೆ
  • ಅವಧಿ ಮುಗಿದ ಮೇಲೆ ಬ್ಯಾಟರಿ ಬದಲಿ ಮಾಡಬೇಕು
  • ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ನಗರಗಳಿಗೆ ಸೂಕ್ತವಲ್ಲ

ಈಗ ನಾವು ಭಾರತದ ಟಾಪ್ 5 ಮಿನಿ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

ಭಾರತದ ಟಾಪ್ 5 ಮಿನಿ ಎಲೆಕ್ಟ್ರಿಕ್ ಕಾರುಗಳ | Top 5 Mini Electric Cars In Inda

ಮಹಿಂದ್ರಾ E2O Plus ಎಲೆಕ್ಟ್ರಿಕ್ ಹಾಟ್ಚ್ ಬ್ಯಾಕ್ (Mahindra E2O plus Electric Hatchback )

ಮಹಿಂದ್ರಾ & ಮಹಿಂದ್ರಾ ಕಂಪನಿಯು ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಉತ್ಪಾದಿಸಿತ್ತು.
E2O Plus ಮಹಿಂದ್ರಾ & ಮಹಿಂದ್ರಾ ಕಂಪನಿಯು ಉತ್ಪಾದಿಸಿದ ಎಲೆಕ್ಟ್ರಿಕ್ ಕಾರು.ಇದು 4 ಮಾದರಿಗಳಲ್ಲಿ ದೊರೆಯುತ್ತದೆ-P2,P4,P6
E2O Plus ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಬರುತ್ತದೆ. ಇದು 210 AH ಲಿಥಿಯಂ-ಐಯಾನ್ (Lithum – Ion) ಬ್ಯಾಟರಿಯಿಂದ ಚಾಲಿತವಾಗಿದೆ, ಇದು 3500 rpm ನಲ್ಲಿ 25 bhp ಯ ಗರಿಷ್ಠ ಶಕ್ತಿಯನ್ನು ಮತ್ತು 1000 rpm ನಲ್ಲಿ 70 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Mahindra E2O Plus EV

ಮಹಿಂದ್ರಾ E2O Plus ಎಲೆಕ್ಟ್ರಿಕ್ ವೈಶಿಷ್ಟ್ಯಗಳು:


ರೈಡಿಂಗ್ ರೇಂಜ್: 110 ಕಿಲೋಮೀಟರ್
ಗರಿಷ್ಠ ವೇಗ: 80 kmph
ಆಸನ ಸಾಮರ್ಥ್ಯ: 4-ವ್ಯಕ್ತಿಗಳ
ಬ್ಯಾಟರಿ ಸಾಮರ್ಥ್ಯ: 10.08kWh
ಗರಿಷ್ಠ ಶಕ್ತಿ: 25 HP
ಗರಿಷ್ಠ ತಿರುಗುಬಲ (Torque): 70 Nm
ವೇಗದ ಚಾರ್ಜಿಂಗ್ ಸಮಯ: 90 ನಿಮಿಷಗಳು (0-80%)
ಇತರ ವೈಶಿಷ್ಟ್ಯಗಳು : ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಪವರ್ ವಿಂಡೋಗಳು, ರಿವರ್ಸ್ ಕ್ಯಾಮೆರಾ, ಎಲೆಕ್ಟ್ರಾನಿಕ್-ಹೊಂದಾಣಿಕೆ ಬಾಹ್ಯ ಕನ್ನಡಿಗಳು, ಕೀಲೆಸ್ ಗೋ, ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಸಂಪರ್ಕ
ಬಣ್ಣಗಳು : ಕೋರಲ್ ಬ್ಲೂ,ವೈನ್ ಕೆಂಪು,ಆರ್ಕ್ಟಿಕ್ ಬೆಳ್ಳಿ,ಸಾಲಿಡ್ ಬಿಳಿ
ಬೆಲೆ ಶ್ರೇಣಿ: INR 8.82 – 9.57 ಲಕ್ಷ.

ಮಹಿಂದ್ರಾ e-ವೆರೀಟೋ ಎಲೆಕ್ಟ್ರಿಕ್ ಸೆಡಾನ್ (Mahindra eVerito Electric Sedan)

ಮಹೀಂದ್ರ e -ವೆರಿಟೊ ಈಗ ಸ್ಥಗಿತಗೊಂಡಿರುವ ವೆರಿಟೊ ಸೆಡಾನ್‌ನ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಎರಡು ರೂಪಾಂತರಗಳಲ್ಲಿ ಲಭ್ಯವಿದೆ – D2 ಮತ್ತು D6 – eVerito 18.55kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಅದು ARAI-ರೇಟೆಡ್ 140km ವ್ಯಾಪ್ತಿಯನ್ನು ಹೊಂದಿದೆ.

Mahindra eVerito Electric Sedan

ಮಹಿಂದ್ರಾ e-ವೆರೀಟೋ ಎಲೆಕ್ಟ್ರಿಕ್ ಸೆಡಾನ್ಕ್ ವೈಶಿಷ್ಟ್ಯಗಳು:

ರೈಡಿಂಗ್ ರೇಂಜ್: 140 ಕಿಲೋಮೀಟರ್
ಗರಿಷ್ಠ ವೇಗ: 86 kmph
ಆಸನ ಸಾಮರ್ಥ್ಯ: 5-ವ್ಯಕ್ತಿಗಳು
ಬ್ಯಾಟರಿ ಸಾಮರ್ಥ್ಯ: 18.55kWh
ಗರಿಷ್ಠ ಶಕ್ತಿ: 42 HP
ಗರಿಷ್ಠ ತಿರುಗುಬಲ: 91 Nm
ವೇಗದ ಚಾರ್ಜಿಂಗ್ ಸಮಯ: 90 ನಿಮಿಷಗಳು (0-80%)
ಬಣ್ಣಗಳು : ಡೈಮಂಡ್ ವೈಟ್,DSat ಬೆಳ್ಳಿ
ಬೆಲೆ ಶ್ರೇಣಿ: INR 9.12 – 9.46 ಲಕ್ಷ.

ಸ್ಟಾರ್ಮ್ R3 ಎಲೆಕ್ಟ್ರಿಕ್ ಕಾರು (Strom R3 Electric Car)

Storm R3 ಸ್ಟಾರ್ಮ್ ಮೋಟರ್ಸ್ ಕಂಪನಿಯ ಕಾರು. ಪ್ರಿ-ಆರ್ಡರ್ ಗಾಗಿ ಸ್ಟಾರ್ಮ್ R3 ಲಭ್ಯವಿದೆ.


ಕಂಪನಿಯು ಸೀಮಿತ ಸಂಖ್ಯೆಯ ಈ ಎರಡು ಆಸನಗಳ (2 seater) ಮೂರು ಚಕ್ರಗಳ (3 wheeled )ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿದೆ. ‘ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ಇಂಡಿಯಾ’ ಈ ಎಲೆಕ್ಟ್ರಿಕ್ ಕಾರನ್ನು ಮೂರು ವಿಭಾಗಗಳಿಗೆ ಸೇರಿದ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ – ಕೆಲಸ ಮಾಡುವ ವೃತ್ತಿಪರರು, ಫ್ಲೀಟ್ ಮಾಲೀಕರು ಮತ್ತು 10-ಕಿಮೀ ವ್ಯಾಪ್ತಿಯಲ್ಲಿರುವ ನಗರಗಳಲ್ಲಿ ಓಡಾಡುವ ಕುಟುಂಬಗಳು.


ಸ್ಟಾರ್ಮ್ R3 ವೆಹಿಕಲ್ ಕಂಟ್ರೋಲ್ ಯೂನಿಟ್ ನ ಪೇಟೆಂಟ್ ಹೊಂದಿದೆ.

Storm R3 Electric Car

ಸ್ಟಾರ್ಮ್ R3 ವೈಶಿಷ್ಟ್ಯಗಳು:

ರೈಡಿಂಗ್ ರೇಂಜ್: 90-120 ಕಿಲೋಮೀಟರ್
ಗರಿಷ್ಠ ವೇಗ: 80 kmph
ಆಸನ ಸಾಮರ್ಥ್ಯ: 2-3 ವ್ಯಕ್ತಿಗಳು
ಬ್ಯಾಟರಿ ಸಾಮರ್ಥ್ಯ: 13.0kWh
ಗರಿಷ್ಠ ಶಕ್ತಿ: 17.4 HP
ಗರಿಷ್ಠ ತಿರುಗುಬಲ: 48 Nm
ವೇಗದ ಚಾರ್ಜಿಂಗ್ ಸಮಯ: 90-120 ನಿಮಿಷಗಳು (0-80%)
ಬಣ್ಣಗಳು : ಕಪ್ಪು ಛಾವಣಿಯೊಂದಿಗೆ ಬಿಳಿ,ಕಪ್ಪು ಛಾವಣಿಯೊಂದಿಗೆ ಕೆಂಪು,ಹಳದಿ ಛಾವಣಿಯೊಂದಿಗೆ ಬೆಳ್ಳಿ,ಬಿಳಿ ಛಾವಣಿಯೊಂದಿಗೆ ನೀಲಿ
ಬೆಲೆ ಶ್ರೇಣಿ: INR 4.50 ಲಕ್ಷ.

ಟಾಟಾ ನೆಕ್ಸೋನ್ ಎಲೆಕ್ಟ್ರಿಕ್ SUV (Tata Nexon Electric SUV)

ಟಾಟಾ ಮೋಟರ್ಸ್ ಭಾರತೀಯ ಆಟೋಮೊಬೈಲ್ ಕಂಪನಿ ಆಗಿದ್ದು, ನೆಕ್ಸೋನ್ SUV ಮೂಲಕ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ತೊಡಗಿದೆ.
ನೆಕ್ಸೋನ್ SUV ಐದು ಮಾದರಿಗಳಲ್ಲಿ ದೊರೆಯುತ್ತದೆ- XM , XZ +,XZ + Lux ,Dark XZ +, Dark XZ + Lux

TATA Nexon SUV EV

ಟಾಟಾ ನೆಕ್ಸೋನ್ ಎಲೆಕ್ಟ್ರಿಕ್ SUV ವೈಶಿಷ್ಟ್ಯಗಳು:

ರೈಡಿಂಗ್ ರೇಂಜ್: 312 ಕಿಲೋಮೀಟರ್
ಗರಿಷ್ಠ ವೇಗ: 120 kmph
ಆಸನ ಸಾಮರ್ಥ್ಯ: 5 ವ್ಯಕ್ತಿಗಳು
ಬ್ಯಾಟರಿ ಸಾಮರ್ಥ್ಯ: 30.2kWh
ಗರಿಷ್ಠ ಶಕ್ತಿ: 129 HP
ಗರಿಷ್ಠ ತಿರುಗುಬಲ: 245 Nm
ವೇಗದ ಚಾರ್ಜಿಂಗ್ ಸಮಯ: 60 ನಿಮಿಷಗಳು (0-80%)
ವಾರಂಟಿ : 8 ವರ್ಷಗಳು /1,60,000 ಕೀಮೀ (ಬ್ಯಾಟರಿ ಮತ್ತು ಮೋಟಾರ್)
ಬಣ್ಣಗಳು : ಸಿಗ್ನೇಚರ್ ಟೀಲ್ ಬ್ಲೂ,ಗ್ಲೇಸಿಯರ್ ವೈಟ್ ,ಮೂನ್ಲೈಟ್ ಸಿಲ್ವರ್,ಡಾರ್ಕ್ ಶೇಡ್ಸ್
ಇತರ ವೈಶಿಷ್ಟ್ಯಗಳು : ಉಚಿತ ಮನೆ ಚಾರ್ಜಿಂಗ್ ಇನ್ಸ್ಟಾಲೇಷನ್ , ಮನೆ ಬಾಗಿಲಿಗೆ ಸರ್ವಿಸ್, 35 ಕನೆಕ್ಟೆಡ್ ಗುಣಗಳು
ಬೆಲೆ ಶ್ರೇಣಿ: INR 13.99 – 16.40 ಲಕ್ಷ.

ಟಾಟಾ ಟಿಗೊರ್ ಎಲೆಕ್ಟ್ರಿಕ್ ಸೆಡಾನ್ (Tata Tigor Electric Sedan)

ಟಾಟಾ ಟಿಗೊರ್ EV ಸಹ ಟಾಟಾ ಮೋಟರ್ಸ್ ಅವರ ಉತ್ಪಾದನೆ.
ಟಾಟಾ ಟಿಗೊರ್ EV ಕಾರು 5 ಮಾದರಿಗಳಲ್ಲಿ ದೊರೆಯುತ್ತದೆ- XE ,XM ,XZ +, XZ +DT

TATA Tigor EV

ಟಾಟಾ ಟಿಗೊರ್ ಎಲೆಕ್ಟ್ರಿಕ್ ಸೆಡಾನ್ ವೈಶಿಷ್ಟ್ಯಗಳು:

ರೈಡಿಂಗ್ ರೇಂಜ್: 120 ಕಿಲೋಮೀಟರ್
ಗರಿಷ್ಠ ವೇಗ: 80 kmph
ಆಸನ ಸಾಮರ್ಥ್ಯ: 5 ವ್ಯಕ್ತಿಗಳು
ಬ್ಯಾಟರಿ ಸಾಮರ್ಥ್ಯ: 21.5kWh
ಗರಿಷ್ಠ ಶಕ್ತಿ: 41 HP
ಗರಿಷ್ಠ ತಿರುಗುಬಲ: 105 Nm
ವೇಗದ ಚಾರ್ಜಿಂಗ್ ಸಮಯ: 120 ನಿಮಿಷಗಳು (0-80%)
ಬಣ್ಣಗಳು : ಈಜಿಪ್ಟಿನ ನೀಲಿ,ಪರ್ಲೆಸೆಂಟ್ ವೈಟ್, ರೋಮನ್ ಬೆಳ್ಳಿ
ಇತರ ವೈಶಿಷ್ಟ್ಯಗಳು : ಉಚಿತ ಮನೆ ಚಾರ್ಜಿಂಗ್ ಇನ್ಸ್ಟಾಲೇಷನ್ , ಮನೆ ಬಾಗಿಲಿಗೆ ಸರ್ವಿಸ್, 35 ಕನೆಕ್ಟೆಡ್ ಗುಣಗಳು
ಬೆಲೆ ಶ್ರೇಣಿ: INR 9.58 – 13.90 ಲಕ್ಷ.

ಸೂಚನೆ: ಇಲ್ಲಿ ಕೊಟ್ಟಿರುವ ಬೆಲೆ ಹಾಗು ಇತರೆ ಮಾಹಿತಿಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗೆ ಕಾರ್ ಡೀಲರ್ ಅವರನ್ನು ಸಂಪರ್ಕಿಸಿರಿ

Leave a Comment

Your email address will not be published. Required fields are marked *