ಒಲವೆ ಜೀವನ ಸಾಕ್ಷಾತ್ಕಾರ | Olave Jeevna Sakshatkara Kannada Lyrics

ಸಾಕ್ಷಾತ್ಕಾರ ಕನ್ನಡ ಚಿತ್ರ 1971 ರಲ್ಲಿ ತೆರೆಕಂಡಿತ್ತು. ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು Dr. ರಾಜಕುಮಾರ್, ಜಮುನಾ , ಪೃಥ್ವಿರಾಜಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ಪಾತ್ರವರ್ಗ: Dr. ರಾಜಕುಮಾರ್, ಜಮುನಾ , ಪೃಥ್ವಿರಾಜಕಪೂರ್, ವಜ್ರಮುನಿ, ಬಾಲಕೃಷ್ಣ, ನರಸಿಂಹ ರಾಜು

ನಿರ್ದೇಶನ: ಪುಟ್ಟಣ್ಣ ಕಣಗಾಲ್

ಸಂಗೀತ: ಎಂ.ರಂಗರಾವ್

ಹಾಡಿದವರು : Dr. ಪಿ.ಬಿ.ಶ್ರೀನಿವಾಸ್ , ಪಿ. ಸುಶೀಲ

‘ಒಲವೆ ಜೀವನ ಸಾಕ್ಷಾತ್ಕಾರ ’ ಗೀತ ರಚನೆಕಾರರರು ಕಣಗಾಲ್ ಪ್ರಭಾಕರ್ ಶಾಸ್ತ್ರೀ

ಧ್ವನಿ ಸುರುಳಿ ಹಕ್ಕು: ಸಾರೆಗಮ

ಮಾಹಿತಿ:
1. ಪೃಥ್ವಿರಾಜಕಪೂರ್ ಅವರು ಹಿಂದಿ ಚಿತ್ರರಂಗದ ಶೋಮ್ಯಾನ್ ರಾಜಕಪೂರ್ ಅವರ ತಂದೆ.
2. ‘ಸಾಕ್ಷಾತ್ಕಾರ’ ಚಿತ್ರದ IMDB ರೇಟಿಂಗ್ 8.3/10

Olave Jeevana Skshatkara Lyrics In Kannada

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದು೦ಭಿಯ ಹಾಡಿನ ಝೇ೦ಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತು೦ಬಿದೆ ಒಲವಿನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ವಸ೦ತ ಕೋಗಿಲೆ ಪ೦ಚ ಮನೋಹರ
ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ಒಲವಿನ ಪೂಜೆಗೆ ಒಲವೆ ಮ೦ದಾರ
ಒಲವೆ ಬದುಕಿನ ಬ೦ಗಾರ
ಒಲವಿನ ನೆನಪೆ ಹೃದಯಕೆ ಮಧುರ

ಒಲವೆ ದೈವದ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

Original song: By Dr.P.B.Shrinivas, P.Susheela

Sung By : Sangeeta Katti & Badari Prasad

Olave Jeevana Skshatkara Lyrics In English

Olave jeevana sakshatkara
Olave mareyada mamakara
Olave mareyada mamakara

Dhumikki hariyuva jaladhareyalu
Dhumbiya hadina jenkaradallu

Ghammane homiruva hosa hoovinallu
Thumbidhe oolavina sakshatkara

Olave jeevana sakshatkara
Olave mareyada mamakara
Olave mareyada mamakara

Vasanth kogile panchama nonchara
Gandhar bhasheya hakigala inchara
Ee malenadina bhurame shrungara
Cheluvina oolavina sakshatkara

Olave jeevana sakshatkara
Olave mareyada mamakara
Olave mareyada mamakara

Olavina pujege olave mandhara

Olave badhukina bangara
Olavina nenape hrudyake madhura
Olave daivada sakshatkara

Olave jeevana sakshatkara

Olave mareyada mamakara
Olave jeevana sakshatkara

Leave a Comment