ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಫೋನು. ಯಾವಾಗಲೂ !
ಹಳೆಯ ಫೀಚರ್ ಫೋನ್ ಇದ್ದಾಗ ಅದು ಕಿಸೆಯಲ್ಲಿ ಇರ್ತಿತ್ತು. ಅವಾಗ ಈವಾಗ ಹೊರಗಡೆ ಬರ್ತಾ ಇತ್ತು.
ಕಾಲ್ ಮಾಡ್ಲಿಕ್ಕೆ ಅಥವಾ ರಿಸೀವ್ ಮಾಡ್ಲಿಕ್ಕೆ. ಇಲ್ಲಾಂದ್ರೆ SMS ಮಾಡಲಿಕ್ಕೆ ಇದ್ದಾಗ ಮಾತ್ರ ಹೊರಗಡೆ ಬರ್ತಾ ಇತ್ತು.
ಈ ಸ್ಮಾರ್ಟ್ ಫೋನ್ ಬಂದಾಗಿನಿಂದ ಅದು ಯಾವಾಗಲು ಕೈಯಲ್ಲೇ.
ಆ ಆಪ್ ಈ app ಅಂತ ನೂರೆಂಟು ಕಾರಣಗಳು.
ಸ್ಕ್ರೀನ್ ಟೈಮ್ ಅಂದರೆ ಏನು? (What is Screen Time In Kannada ?)
ನೀವು ಎಷ್ಟು ಸಮಯ ಫೋನ್ ನ ಉಪಯೋಗ ಮಾಡ್ತಾ ಇದ್ದಿರೋ ಅಷ್ಟು ಸಮಯಕ್ಕೆ ಸ್ಕ್ರೀನ್ ಟೈಮ್ ಅನ್ನುತ್ತಾರೆ.
ಅಂದರೆ ಇದು ನೀವು ಎಷ್ಟು ಹೊತ್ತು ಫೋನಿನ ಸ್ಕ್ರೀನ್ (ಪರದೆ) ನುಡುತ್ತಾ ಇದ್ದೀರಿ ಅಂತ ಅರ್ಥ.
ಹೆಚ್ಚಿನ ಸ್ಕ್ರೀನ್ ಟೈಮ್ ಅಂದರೆ ಹೆಚ್ಚಿನ ಫೋನಿನ ಉಪಯೋಗ. ಇದರಿಂದ ಆರೋಗ್ಯದ ಮೇಲೆ, ಅದರಲ್ಲೂ ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
How to check screen time on Android In Kannada | ಆಂಡ್ರಾಯ್ಡ್ ಫೋನ್ ನಲ್ಲಿ ಸ್ಕ್ರೀನ್ ಟೈಮ್ ನೋಡುವದು ಹೇಗೆ?
1. ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ‘ಸೆಟ್ಟಿಂಗ್ಸ್ ‘ (Settings) ಅಪ್ಲಿಕೇಶನ್ ತೆರೆಯಿರಿ
2. ಕೆಳಗಡೆ ಸ್ಕ್ರಾಲ್ ಮಾಡಿ ‘ಡಿಜಿಟಲ್ ವೆಲ್ ಬೀಯಿಂಗ್ ಅಂಡ್ ಪೇರೆಂಟಲ್ ಕಂಟ್ರೋಲ್ ‘ (Digital Wellbeing And Parental Controls) ಅನ್ನು ಸೆಲೆಕ್ಟ್ ಮಾಡಿ
3. ಅಲ್ಲಿ ಪೈ ಚಾರ್ಟ್ ಇಂದಿನ ನಿಮ್ಮ ಸ್ಕ್ರೀನ್ ಟೈಮ್ (ಪರದೆಯ ಸಮಯ) ಅನ್ನು ತೋರಿಸುತ್ತದೆ.
4. ಈ ಪೈ ಚಾರ್ಟನ ಮೇಲೆ ಒತ್ತಿರಿ
5. ಸ್ಕ್ರೀನ್ ಟೈಮ್ ಡ್ಯಾಶ್ ಬೋರ್ಡ್ ತೆರೆದು ಕೊಳ್ಳುತ್ತದೆ
6. ಇದು ನಿಮ್ಮ ವಾರದ ಸ್ಕ್ರೀನ್ ಟೈಮ್ ಅನ್ನು ತೋರಿಸುತ್ತದೆ. ಹಾಗೆ ಯಾವ ಯಾವ ಅಪ್ಲಿಕೇಶನ್ ಗಳನ್ನು ಎಷ್ಟು ಸಮಯ ನೋಡಿದ್ದೀರಿ ಎಂದು ತೋರಿಸುತ್ತದೆ