ಹಾವಿಗೆ ಮುಂಗುಸಿ ಉಂಟು ಲಿರಿಕ್ಸ್ | Haavige Mungusi Untu Song Lyrics In Kannada English-Mayor Muttanna

ಹಾವಿಗೆ ಮುಂಗುಸಿ ಉಂಟು ‘ ಹಾಡು 1969 ರಲ್ಲಿ ಬಿಡುಗಡೆಗೊಂಡ ಯಶಸ್ವಿ ‘ಮೇಯರ್ ಮುತ್ತಣ್ಣ‘ ಚಿತ್ರದ್ದು.
ಮೇಯರ್ ಮುತ್ತಣ್ಣ ಚಿತ್ರವನ್ನು ಸಿದ್ದಲಿಂಗಯ್ಯ ನಿರ್ದೇಶಿಸಿದ್ದು , ದ್ವಾರಕೀಶ ನಿರ್ಮಿಸಿದ್ದಾರೆ.
ಮುಖ್ಯ ಪಾತ್ರಗಳಲ್ಲಿ ಡಾ।। ರಾಜಕುಮಾರ್,ಭಾರತಿ,M.P ಶಂಕರ,ದ್ವಾರಕೀಶ,ಕಾಂಚನ,ಬಾಲಕೃಷ್ಣ,ತೂಗುದೀಪ ಶ್ರೀನಿವಾಸ ಮುಂತಾದವರು ಇದ್ದಾರೆ.

‘ಹಾವಿಗೆ ಮುಂಗುಸಿ ಉಂಟು ‘ ಹಾಡನ್ನು P.B ಶ್ರೀನಿವಾಸ , L.R ಈಶ್ವರಿ ಮತ್ತು ದ್ವಾರಕೀಶ ಹಾಡಿದ್ದಾರೆ.
ಚಿ. ಉದಯಶಂಕರ್ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನ ಇದೆ.

ಚಿತ್ರ: ಮೇಯರ್ ಮುತ್ತಣ್ಣ
ಸಂಗೀತ ನಿರ್ದೇಶನ: ರಾಜನ್-ನಾಗೇಂದ್ರ
ಗೀತ ರಚನೆ: ಚಿ. ಉದಯಶಂಕರ
ಗಾಯನ: P.B ಶ್ರೀನಿವಾಸ , L.R ಈಶ್ವರಿ , ದ್ವಾರಕೀಶ
ಧ್ವನಿ ಸುರುಳಿ ಹಕ್ಕು: ಸರೆಗಮ

ಮಾಹಿತಿ:

  1. ಮೇಯರ್ ಮುತ್ತಣ್ಣ ಸಿದ್ದಲಿಂಗಯ್ಯ ಅವರ ನಿರ್ದೇಶನದ ಮೊದಲನೇಯ ಚಿತ್ರ
  2. ಇದು ದ್ವಾರಕೀಶ ಅವರ ಮೊದಲನೇಯ ನಿರ್ಮಾಣದ ಚಿತ್ರ
  3. ಮೇಯರ್ ಮುತ್ತಣ್ಣ ಚಿತ್ರ ಥಾಮಸ್ ಹಾರ್ಡಿ ಅವರ ಕಾದಂಬರಿ ‘ದಿ ಮೇಯರ್ ಆಫ್ ಕ್ಯಾಸ್ಟರ್ ಬ್ರಿಡ್ಜ್ ‘ ಆಧರಿಸಿದೆ
  4. ಮೇಯರ್ ಮುತ್ತಣ್ಣ ಚಿತ್ರದ IMDB ರೇಟಿಂಗ್ : 8.6/19

Haavige Mungusi Untu Song Lyrics In Kannada – Mayor Muttanna

ಹಾವಿಗೆ ಮುಂಗುಸಿ ಉಂಟು
ಆನೆಗೆ ಸಿಂಹ ಉಂಟು

ಹಾವಿಗೆ ಮುಂಗುಸಿ ಉಂಟು
ಆನೆಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೆಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು..

ಹೋ … ಹಾವಿಗೆ ಮುಂಗುಸಿ ಉಂಟು
ಆನೆಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೆಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು..

ಕೃಷ್ಣನು ಹುಟ್ಟಿದ ಕಂಸನ ಕೊಲ್ಲಲು
ನರಸಿಂಹ ಭೂಮಿಗೆ ಬಂದ ರಕ್ಕಸನ ಸಿಗಿಯಲು

ಗಾಂಧಿಯು ಜನಿಸಿದ ರಾಜ್ಯವ ಅಳಿಸಲು
ಸತ್ಯ ಅಹಿಂಸೆಯ ಸತ್ವವ ಸಾರಲು
ದ್ರೋಹವ ಮೋಸವ ತೊಲಗಿಸಲು ಒಬ್ಬ ಇಲ್ಲುಂಟು

ಹಾವಿಗೆ ಮುಂಗುಸಿ ಉಂಟು
ಆನೆಗೆ ಸಿಂಹ ಉಂಟು

ಈ ಮನೆಹಾಳರ ಮುಗಿಸಲೆಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು..

ಸತ್ಯವ ನುಡಿವಗೆ ತಲೆಯನು ಬಾಗುವೆನು
ಧರ್ಮದಿ ನಡೆವಗೆ ಪ್ರಾಣವ ನೀಡುವೆನು ಓ… ಓಹೋ… ಓ…

ಬಡವರ ನೋಯಿಸುವ ಪಾಪಿಗೆ ಎಮನಾಗು
ದೇಶ ದ್ರೋಹಿಯ ನಾಶಕೆ ಬಂದಿಹೆನು
ನೀಚರ ಗುಂಡರ ಅಡಗಿಸಲು ಒಬ್ಬ ಇಲ್ಲುಂಟು

ಹಾವಿಗೆ ಮುಂಗುಸಿ ಉಂಟು
ಆನೆಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೆಂದು
ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು.. ಹೋ ..
ಲಾ ಲಾ… ಲಲಲಾ

https://www.youtube.com/watch?v=rXhmq19mrJI

Haavige Mungusi Untu Song Lyrics In English – Mayor Muttanna

Haavige Mungusiyuntu
Aanege Simha Untu

Haavige Mungusiyuntu
Aanege Simha Untu
Ee Manehaalara Mugisalendu
Obba Untu Obba Untu Obba Illuntu..

Ho.. Haavige Mungusiyuntu
Aanege Simha Untu
Ee Manehaalara Mugisalendu
Obba Untu Obba Untu Obba Illuntu

Krishananu Huttida Kamsana Kollalu
Narasimha Boomige Banda Rakkasana Sigiyalu

Gandhiyu Janisida Rajyava Alisalu
Sathya Ahimseya Sathvava Saaralu
Drohava Mosava Tholagisalu Obba Illuntu

Haavige Mungusiyuntu
Aanege Simha Untu

Ee Manehaalara Mugisalendu
Obba Untu Obba Untu Obba Illuntu.. Ha..

Sathayava Nudivage Thaleyanu Baaguvenu
Dharmadi Nadevage Praanava Needuvenu O.. Oho..O..

Badavara Noysuva Paapige Yemanaagu
Desha Drohiya Naashake Bandihenu
Neechara Gundara Adagisalu Obba Illuntu

Haavige Mungusiyuntu
Aanege Simha Untu
Ee Manehaalara Mugisalendu
Obba Untu Obba Untu Obba Illuntu.. Ho..
Lalala.. Lalalala..

Download Haavige Mungusi Untu Song Lyrics In Kannada English

Leave a Comment