Dasarendare

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru

Dasarendare Purandara Dasarayya Lyrics In Kannada

ರಚನೆ : ಶ್ರೀ ವ್ಯಾಸರಾಜರು

ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ
ದಾಸರೆಂದರೆ ಪುರಂದರದಾಸರಯ್ಯ || ಪ ||

ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದು ತುಲಸಿ ಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬಳಲಿಸುತ
ಕಾಸುಗಳಿಸುವ ಪುರುಷ ಹರಿದಾಸನೇ || 1 ||

ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವ ಪಿತನ ಆಗಮಗಳರಿಯದೇ
ತಂಬೂರಿ ಮೀಟಲವ ಹರಿದಾಸನೇ || 2 ||

ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದ ಲೋಭಿ
ಮಾಯಾ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ || 3 ||

ನೀತಿಯೆಲ್ಲವನರಿತು ನಿಗಮವೇದ್ಯನ
ನಿತ್ಯ ವಾತಸುತನಲ್ಲಿಹನ ವರ್ಣಿಸುತಲಿ
ಗೀತ ನರ್ತನದಿಂದ ಕೃಷ್ಣನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರಯ್ಯ || 4 ||

‘ದಾಸರೆಂದರೆ ಪುರಂದರ ದಾಸರಯ್ಯ’ ಹಾಡಿನ ಮಹತ್ವ

‘ದಾಸರೆಂದರೆ ಪುರಂದರದಾಸರಯ್ಯ’ ಒಂದು ಅಪರೂಪದ ಕೃತಿ.
ಇದು ಪುರಂದರದಾಸರ ಮೇಲಿನ ಹಾಡು. ರಚಿಸಿದವರು ಶ್ರೀ ವ್ಯಾಸರಾಜರು. ಇದು ನಮಗೆಲ್ಲ ಗೊತ್ತು.

ಆದರೆ, ಈ ಕೀರ್ತನೆಯ ಮಹತ್ವ ಏನು? ಏಕೆ ಅಪರೂಪ?
ನಿಮಗೆ ಗೊತ್ತಾ? ಶ್ರೀ ವ್ಯಾಸರಾಜರು ಶ್ರೀ ಪುರಂದರದಾಸರ ಗುರುಗಳು. ಅಂದರೆ ಶ್ರೀ ಪುರಂದರದಾಸರು ಶಿಷ್ಯರು.
ಅಂದರೆ ಶಿಷ್ಯನ ವರ್ಣನೆ. ಗುರುಗಳಿಂದ. ಎಲ್ಲಾದರೂ ನೋಡಿದ್ದಾರಾ ?
ಇಲ್ಲಾ ಅಲ್ಲವಾ?

ಅದೇ ಮಹತ್ವ. ಗುರುಗಳು ಶಿಷ್ಯನ ಬಗ್ಗೆ ಬರೆದ ಹಾಡು.
ಅದು ಶಿಷ್ಯರಾದ ಶ್ರೀ ಪುರುಂದರದಾಸರ ಹಿರಿಮೆ ತೋರುತ್ತದೆ. ದಾಸತ್ವದ ಹಿರಿಮೆ.

ಶ್ರೀ ಪುರಂದರದಾಸರು ಬೂಟಾಟಿಕೆಯ ದಾಸರಲ್ಲ. ನಿಜವಾದ ದಾಸರು.
ಭಗವಂತನ ನಾಮ ಕೀರ್ತನೆ ಮಾಡುವರು. ನರ್ತನ ಮಾಡುವರು. ಅವರು ನಿಜವಾದ ದಾಸ್ಯ.
ಇದು ಈ ಹಾಡಿನ ಸಾರಾಂಶ.

Dasarendare Purandara Dasarayya Lyrics In English

Composed By : Shri Vyasarajaru

Vaasudeva Krishnanna soosi poojisuvantha
daasarendare purandaradaasarayya || pa ||

Graasakillade pogi parara manegala pokku
daasanendu tulasi maale dharisi
besarillade avara kaadi balalisuta
kaasugalisuva purusha haridaasane || 1 ||

Dambhakadi harismaranemaadi janaraa munde
sambhramadi taanumba oota bayasi
ambujodbhava pitana aagamagalariyade
tamboori meetalava haridaasane || 2 ||

Yaayivaarava maadi viprarige mrishtaanna
preeyadali taanondu kodada lobhi
maayaa sansaaradali mamate heccaagittu
gaayanava maadalava haridaasane || 3 ||

Neetiyellavanaritu nigamavedyana
nitya vaatasutanallihana varnisutali
geeta nartanadinda krishnana poojisuva
pootaatma Purandara daasarivarayya || 4 ||

Significance of ‘Dasarendare Purandara Dasarayya’ Song

‘Dasaranna Purandaradasaraiya’ is a rare kruti.
This is a song on Purandara Dasa. Composed by Sri Vyasaraja. We all know this.

But, what is the significance of this psalm? Why is it so rare?
Do you know Sri Vyasaraja was the Guru of Sri Purandara Dasa. That means Sri Purandardasa is the disciple.
That is the description of the disciple. From Guru. Have you seen anywhere?
No. Right?

That is the significance. A song written by a guru about a disciple.
That seems to be the greatness of the disciple Sri Purundardasa. The glory of Dasatwa.

Sri Purandara Dasa is not a dasa of hypocrisy. True Dasa he was.
He chants the Lord’s name. Dances. He is a true Dasa.
This is the summary of this song.

Dasarendare Purandara Dasarayya Song-By Nadini Rao & Manasi Prasad

Dasarendare Purandara Dasarayya Song-By Shri Putturu Narasimha Nayak

Dasarendare Purandara Dasarayya Song-By Shri Vidyabhooshan

Leave a Comment

Your email address will not be published. Required fields are marked *