ಬಾನಂಚಿಗೆ ಓಡುವ ಬಾರಾ ಲಿರಿಕ್ಸ್ | Bananchige Oduva Bara Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.
ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ.

ಹೀರೋ ಚಿತ್ರದಲ್ಲಿನ ‘ಬಾನಂಚಿಗೆ ಓಡುವ ಬಾರಾ’ ಗೀತೆಯನ್ನು ವಿಕಟ ಕವಿ ಯೋಗರಾಜ್ ಭಟ್ ರಚಿಸಿದ್ದಾರೆ. ವಾಸುಕಿ ವೈಭವ್ ಹಾಡಿದ್ದಾರೆ.

ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ ,

ನಿರ್ದೇಶನ: ಎಂ . ಭರತ್ ರಾಜ್.

ಸಂಗೀತ: ಬಿ. ಅಜನೀಶ ಲೋಕನಾಥ.

ಛಾಯಾಗ್ರಹಣ: ಅರವಿಂದ ಕಶ್ಯಪ್.

ಸಂಪಾದಿಸಿದವರು: ಪ್ರತೀಕ್ ಶೆಟ್ಟಿ.

ಪ್ರೊಡಕ್ಷನ್ ಕಂಪನಿ: ರಿಷಭ ಶೆಟ್ಟಿ ಫಿಲ್ಮ್ಸ್.

‘ಬಾನಂಚಿಗೆ ಓಡುವ ಬಾರಾ’ ಗೀತ ರಚನೆಕಾರರರು :ಯೋಗರಾಜ್ ಭಟ್

ಧ್ವನಿ ಸುರುಳಿ ಹಕ್ಕು: ರಿಷಭ ಶೆಟ್ಟಿ ಫಿಲ್ಮ್ಸ್.

ಮಾಹಿತಿ:
1. ಹೀರೋ ಚಿತ್ರ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಂಪೂರ್ಣವಾಗಿ ಪರಿಕಲ್ಪನೆ ಮತ್ತು ಚಿತ್ರೀಕರಣ ಮಾಡಲಾಗಿದ್ದು, ಗರಿಷ್ಟ 24 ಜನರ ಸಿಬ್ಬಂದಿಯೊಂದಿಗೆ ಚಿತ್ರೀಕರಿಸಲಾಗಿದೆ.
2. ಹೀರೋ ಎಂ.ಭಾರತ್ ರಾಜ್ ಅವರ ಚೊಚ್ಚಲ ನಿರ್ದೇಶನ.
3. IMDB ಸ್ಕೋರ್ : 7.1/10

‘ಎದೆಯಿಂದ ದೂರವಾಗಿ’ ಲಿರಿಕ್ಸ್ ಇಲ್ಲಿ ಓದಿ

Bananchige Oduva Bara lyrics In Kannada

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆ ಕಡೆ ಊರ

ನಾಕೆಜ್ಜೆ ನಾಕೆ ಹೆಜ್ಜೆ
ಆಮೇಲೆ ಬಾಳೋಣ ಹೆಂಗೋ
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ

ಊರಾಚೆ ಸ್ವರ್ಗಾನೆ ಕಾಯುತೈತೆ
ಅಲ್ನೋಡು ಸಂತೋಷ ಕಾಣುತೈತೆ

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆ ಕಡೆ ಊರ

ತೂಗುಗತ್ತಿ ನೆತ್ತಿ ಮ್ಯಾಲೆ
ಬೆನ್ನ ಹಿಂದೆ ಬೆಂಕಿ ಬಲೆ
ಹೂ ಚೆಲ್ಲಿದ ದಾರಿ ಮುಂದಿದೆ
ಈ ಜೀವವು ನನ್ನ ಕೈ ಇರಲಿ
ಇದು ಒಂದೇ ಆಸೆ ನಂಗಿದೆ

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆ ಕಡೆ ಊರ

ನಾಕೆಜ್ಜೆ ನಾಕೆ ಹೆಜ್ಜೆ
ಆಮೇಲೆ ಬಾಳೋಣ ಹೆಂಗೋ
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ

ಊರಾಚೆ ಸ್ವರ್ಗಾನೆ ಕಾಯುತೈತೆ
ಅಲ್ನೋಡು ಸಂತೋಷ ಕಾಣುತೈತೆ

Bananchige Oduva Bara lyrics In English

Baananchige Oduva Baara
Kai Chaachu Tusuve Doora
Dhattadaviya Daariye Ghora
Baa Seruva Aa Kade Oora

Naakejje Naake Hejje
Amele Baalona Hengo
Kittoda Nina Gejje
Kaiyyaare Kathini Hengo

Ooraache Swargaane Kaayutaithe
Alnodu Santhosha Kaanutaithe

Baananchige Oduva Baara
Kai Chaachu Tusuve Doora
Dhattadaviya Daariye Ghora
Baa Seruva Aa Kade Oora

Toogugatti Nethimyale
Benna Hinde Benki Bale
Hoo Chellida Daari Mundide
Ee Jeevavu Irali Bidali
Ninna Kaiyali Nanna Kai Irali
Idu Onde Aase Nangide

Baananchige Oduva Baara
Kai Chaachu Tusuve Doora
Dhattadaviya Daariye Ghora
Baa Seruva Aa Kade Oora

Naakejje Naake Hejje
Amele Baalona Hengo
Kittoda Nina Gejje
Kaiyyaare Kathini Hengo

Ooraache Swargaane Kaayutaithe
Alnodu Santhosha Kaanutaithe

Leave a Comment