ಹರಿಕಥಾಮೃತಸಾರ-ವಿಭೂತಿ ಸಂಧಿ ವಿವರಣೆ

ಹರಿಕಥಾಮೃತಸಾರ ಗುರುಗಳ ಕರುಣದಿಂದಾ ಪನಿತು ಪೇಳುವೆ ।
ಪರಮ ಭಗವದ್ಭಕ್ತರಿದನಾದರದಿ ಕೇಳುವದು ।।

ನುಡಿ-1

ಶ್ರೀ ತರುಣಿವಲ್ಲ ಭನ ಪರಮ ವಿಭೂತಿ ರೂಪವ ಕಂಡಕಂಡ ಲ್ಲೀ
ತೆರದಿ ಚಿಂತಿಸುತ ಮನದಲಿ ನೋಡು
ಸಂಭ್ರಮದಿ ನೀತ ಸಾಧಾರಣ ವಿಶೇಷ ಸ- ಜಾತಿ ನೈಜಾಹಿತವು ಸಹಜವಿ-
ಜಾತಿ-ಖಂಡಾಖಂಡ ಬಗೆಗಳನರಿತು ಬುಧರಿಂದ ।। 1 ।।

ಶಬ್ದಾರ್ಥ:

ಶ್ರೀ ತರುಣಿವಲ್ಲಭನ =ಸೌಭಾಗ್ಯ ಮತ್ತು ನಿತ್ಯ ತಾರುಣ್ಯವುಳ್ಳ ಲಕ್ಷ್ಮಿಯ ಪತಿಯಾದ ಪರಮಾತ್ಮನ,
ಪರಮ = ಸರ್ವೋತ್ತಮವಾದ,
ನೀತ = ಹೃದಯ, ಸೂರ್ಯ, ಚಂದ್ರ, ಅಗ್ನಿ, ಇವರೇ ಮೊದಲಾದ ಪ್ರತಿಮೆಯಲ್ಲಿ ಆಹ್ವಾನಮಾಡಿದ ರೂಪ,
ಸಾಧಾರಣ = ದೇಶಕಾಲಾದಿಗಳ ಅಪೇಕ್ಷೆ ಇಲ್ಲದೆ ಸಮಸ್ತ ಜಡ ಚೇತನಗಳಲ್ಲಿರುವ ರೂಪ,
ವಿಶೇಷ =ಲಕ್ಷ್ಮಣ, ಬಲರಾಮಾದಿಗಳಲ್ಲಿ ಕೆಲವು ಕಾಲ ವಿಶೇಷ ಆವೇಶಯುಕ್ತ ರೂಪ, ಒಂದು ವಸ್ತುವಿಗೆ ವಿಶೇಷತೆಯನ್ನು ತಂದು ಕೊಡುವ ರೂಪ.
ಸಜಾತಿ = ಮತ್ಸ, ಕೂರ್ಮಾದಿರೂಪ,
ನೈಜ = ಜ್ಞಾನ ಆನಂದಾದಿ ಗುಣಗಳು,
ಆಹಿತ = ಜ್ಞಾನಿಗಳಲ್ಲಿ ರುವ ರೂಪ,
ಸಹಜ = ಕಾರಣ ಹಾಗೂ ಕಾರ್ಯಗಳಲ್ಲಿ ರುವ ರೂಪ,
ವಿಜಾತಿ = ಭಿನ್ನ ರಾದ ಬ್ರಹ್ಮ ರುದ್ರಾದಿಗಳಲ್ಲಿ ರುವ ರೂಪ,
ಖಂಡ = ಒಂದೊಂದು ಅಗಳಿನಲ್ಲಿ ಯೂ ಅನಂತಾಂಶದಿಂದ ಇರುವ ರೂಪ,
ಅಖಂಡ = ಶಾಲಿಗ್ರಾಮಾದಿಗಳಲ್ಲಿ ನಿತ್ಯ ಸನ್ನಿಹಿತ ರೂಪ,
ಈ ತೆರದಿ = ಈ ರೀತಿಯಾಗಿ,
ಬಗೆಗಳನು = ಹತ್ತು ವಿಧವಾದ ವಿಭೂತಿ ರೂಪಗಳನ್ನು,
ಬುಧರಿಂದ =ಜ್ಞಾನಿಗಳಿಂದ,
ಅರಿತು = ತಿಳಿದು,
ವಿಭೂತಿರೂಪವ = ವಿವಿಧವಾದ ಮತ್ತು ವಿಶೇಷವಾದ ಐಶ್ವರ್ಯವುಳ್ಳ ಭಗದ್ರೂಪಗಳನ್ನು,
ಕಂಡಕಂಡಲ್ಲಿ = ಎಲ್ಲ ಅಧಿಷ್ಠಾನಗಳಲ್ಲಿ,
ಸಂಭ್ರಮದಿ = ಅತ್ಯಂತ ಉತ್ಸಾಹದಿಂದ,
ಮನದಲಿ = ಮನಸ್ಸಿನಲ್ಲಿ,
ಚಿಂತಿಸುತ = ಧ್ಯಾನಮಾಡುತ್ತ,
ನೋಡು = ಭಗವಂತನ ಅಪರೋಕ್ಷಜ್ಞಾನವನ್ನು ಮಾಡಿಕೊಳ್ಳು.

Leave a Comment