Yennalli Avaguna Shatasaaviravire Lyrics In Kannada
ಎನ್ನಲ್ಲಿ ಅವಗುಣ ಶತಸಾವಿರವಿರೆ
ಅನ್ಯರ ಕರೆದಾನು ನಡತೆ ಇದೇನೆಂಬೆ ।।ಪ।।
ವೇದವನೋದಿದೆ ಪರರಿಗಾದರಿಸಿ ಮುಕುತಿಗೆ
ಹಾದರಹಳು ನಾರಿ ಮಾದಿಗನ ಪೋದಂತೆ ।।೧।।
ಧನದಾಸೆಯಿಂದ ಸಾಧನವಾಗದೆಂದು
ಜನರಿಗೆ ಉಪದೇಶವನು ಮಾಡುವೆ
ತೃಣ ಹತ್ತದಿದ್ದವ ಧನರಾಶಿ ಕದ್ದಂತೆ ।।೨।।
ರಸನೇಂದ್ರಿಯಗಳ ಬಂಧಿಸಬೇಕೆಂದು ನಾನು
ಉಸುರುವೆ ಅಲ್ಲಲ್ಲಿ ಕುಶಲನಾಗಿ
ಅಮೃತ ರಸವಲ್ಲೆನೆಂದಾವ
ಮುಸುರಿಯ ಮೆದ್ದಂತೆ ।।೩।।
ಒಡಿವೆ ವಸ್ತುಗಳು ಸಂಗಡ ಬಾರವು
ಮಮತೆ ಬಿಡು ಸಂಸಾರವಿದು ಕಡಿಗೆ ಭವದ
ಮಡವು ಸಿದ್ಧವೆಂದು ನುಡಿವೆನೊ ಪರರಿಗೆ
ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ ।।೪।।
ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ
ಯುಕುತಿ ಬಾಯಲಿ ನಾರಕಕೆ ಸಾಧನಾ
ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ
ಅರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ ।।೫।।
ಎನ್ನಲ್ಲಿ ಅವಗುಣ ಶತಸಾವಿರವಿರೆ
ಅನ್ಯರ ಕರೆದಾನು ನಡತೆ ಇದೇನೆಂಬೆ ।।ಪ।।
–ಶ್ರೀ ವಿಜಯದಾಸರು
“ಎನ್ನಲ್ಲಿ ಅವಗುಣ ಶತಸಾವಿರವಿರೆ” ಕೀರ್ತನೆಯಲ್ಲಿ ಶ್ರೀ ವಿಜಯದಾಸರು ಬೂಟಾಟಿಕೆ ಭಕ್ತಿ ಮತ್ತು ವಿರಕ್ತಿ ಇಲ್ಲದಿರುವಿಕೆಯ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.
ಹೇಳುವದು ಒಂದು ಮಾಡುವದು ಇನ್ನೊಂದು ಅನ್ನುವಹಾಗೆ ಅಂತರಂಗದಲ್ಲಿ ಭಕ್ತಿ ಇಲ್ಲದೇ ಬರೀ ಬೇರೆಯವರಿಗೆ ಭಕ್ತಿಯ ತತ್ವ ಉಪದೇಶಿಸಿದರೆ ನರಕವೇ ಗತಿ ಎಂದು ತಿಳಿಸುತ್ತಾರೆ.
ಕೊನೆಗೆ ನನ್ನಲ್ಲಿ ಸಾವಿರಾರು ಅವಗುಣಗಳಿವೆ ಸ್ವಾಮೀ ಲಕ್ಷ್ಮೀವಲ್ಲಭನೇ ನಿನ್ನ ಭಕ್ತಿ ಇಂದ ಅರ್ಚನೆ ಮಾಡುತ್ತ ಬದುಕ ಬೇಕು. ಹಾಗೆ ಅನುಗ್ರಹ ಮಾಡು ಎಂದು ಅವರ ಉಪಾಸ್ಯ ಮೂರ್ತಿಯಾದ ವಿಜಯವಿಠಲ ದೇವರಲ್ಲಿ ಬೇಡಿಕೊಳ್ಳುತ್ತಾರೆ.
Yennalli Avaguna Shatasaaviravire Lyrics In English
Yennalli avaguna shatasavirvire
anyara karedaanu idenembe ||Pa||
vedavanodide pararigaadarisi mukutige
haadarahalu nari maadigana podante ||1||
dhanadaaseinda saadhanavaagadendu
janarige upadeshavanu maaduve
truna hattadiddava dhanaraashi kaddante ||2||
rasanendriayangala bhandisabekendu naanu
usuruve allalli kushalanaagi
amruta rasavallenendaava
musuri meddante ||3||
vadive vastugala sangada baaravu
mamate bidu sansaravidu kdige bhavada
madavu siddhavendu nudiveno pararige
yadahiyo yendava gidaneri biddante ||4||
bhakuti kudida virakuti leshavilla
yukuti bayali narakake saadhana
lkumivllabha namma vijayavitthala ninna
arshakanaagi badukatakkaddu margava toro ||5||