Agile Methodology Kannada

ಅಜೈಲ್ ಮೆಥಡಾಲಜಿ ಎಂದರೇನು?|What Is Agile Methodology In Kannada

ನೀವು ವಾಟ್ಸಅಪ್ ಅನ್ನು ಉಪಯೋಗಿಸುತ್ತೀರಿ.
ಹಾಗೆ ಅಂದು ಕೊಂಡಿದ್ದೇನೆ. ಈಗ ಎಲ್ಲರೂ ಉಪಯೋಗಿಸುವ ಅಪ್ಲಿಕೇಶನ್ ಅದು.

ಹಲವು ವರ್ಷಗಳಿಂದ ಈ ವಾಟ್ಸಅಪ್ ಅನ್ನು ಉಪಯೋಗಿಸಿದವರಿಗೆ ಗೊತ್ತಿರಬಹುದು. ಅದು ಹೇಗೆ ಹಂತ ಹಂತವಾಗಿ ಉಪಯೋಗಕಾರಿ ಆಗಿದೆ ಅಂತ.

ಅದು ಮೊದಲ ಆವೃತಿ. ವಾಟ್ಸಅಪ್ ಇನ್ಸ್ಟಾಲ್ ಮಾಡಲು ಯಾರೋ ಗೆಳೆಯರು ಹೇಳಿದರು. ಸರಿ ಫೋನ್ ನಲ್ಲಿ ಮಾಡಿಕೊಂಡೆ.
ಆಗ ಅದು ಒಂದು ಸಂದೇಶ ಕಳಿಹಿಸುವ ಅಪ್ಲಿಕೇಶನ್ ಮಾತ್ರ ಆಗಿತ್ತು. SMS ನ ಮುಂದಿನ ಹಂತ ಅನ್ನಬಹುದು.

ನಂತರದ ಆವೃತ್ತಿಯಲ್ಲಿ ಗ್ರೂಪ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಯಿತು. ನಿಧಾನವಾಗಿ ಫೈಲುಗಳನ್ನು ಹಂಚಿಕೊಳ್ಳುವ ವೈಶಿಷ್ಟ್ಯವನ್ನು (ಫೀಚರ್ ) ಪರಿಚಯಿಸಲಾಯಿತು.
ಆಮೇಲೆ ಕೆಲವು ದಿನಗಳ ನಂತರ ಕರೆ ಮಾಡುವ ಅನುಕೂಲ ಕಲ್ಪಿಸಲಾಯಿತು (Whatsapp ಕಾಲ್).
ನಂತರ ವಾಟ್ಸಅಪ್ ಮೂಲಕವೇ ಹಣ ರವಾನಿಸಲು ಸಾಧ್ಯವಾಯಿತು.
ಹೀಗೆ ವಾಟ್ಸಅಪ್ ಅನ್ನುವ ಸಂದೇಶ ರವಾನಿಸುವ ಆಪ್ ಅಭಿವೃದ್ಧಿ ಆಯ್ತಾ ಹೋಯಿತು.

ವಾಟ್ಸಅಪ್ ಡೆವೆಲಪ್ ಮಾಡಲು ಆ ಕಂಪನಿಯವರು ಬಳಸಿದ್ದು ಅಜೈಲ್ ಮೆಥಡಾಲಜಿ.

ಅಜೈಲ್ ಮೆಥಡಾಲಜಿ ಎಂದರೇನು?

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯು ಕಂಪ್ಯೂಟರ್ ಪ್ರೋಗ್ರಾಂಗಳನ್ನು ನಿರ್ಮಿಸುವ ಒಂದು ಪದ್ಧತಿ.
ಅದು ಪ್ರಕ್ರಿಯೆಯನ್ನು (ಪ್ರೋಸೆಸ್) ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮಾಡುವತ್ತ ಗಮನಹರಿಸುತ್ತದೆ.

‘ಮಷೀನ್ ಲರ್ನಿಂಗ್’ ಎಂದರೇನು ಓದಿರಿ

ಸಾಮಾನ್ಯವಾಗಿ ಸಾಫ್ಟ್ವೇರ್ ಡೆವಲಪ್ಮೆಂಟ್ ಮಾಡಲು ಬೇರೆ ಬೇರೆ ತಂಡಗಳು ಇರುತ್ತವೆ.
ಅವು ಯಾವವು ಅಂದರೆ : ಆರ್ಕಿಟೆಕ್ಚರ್ ತಂಡ, ಡಿಸೈನಿಂಗ್ ತಂಡ, ಡೆವಲಪ್ಮೆಂಟ್ ತಂಡ, ಟೆಸ್ಟಿಂಗ್ ತಂಡ, ಡಿಪ್ಲೋಯ್ಮೆಂಟ್ ತಂಡ, ಇತ್ಯಾದಿ.

ಈ ತರಹದ ವಿಭಿನ್ನ ಕೌಶಲ್ಯಗಳನ್ನು (ಸ್ಕಿಲ್ಸ್ ) ಹೊಂದಿರುವ ಜನರ ತಂಡದೊಂದಿಗೆ ಕೆಲಸ ಮಾಡುವುದು ಸಹಜವಾಗಿ ಕಷ್ಟ.
ಆದರೆ, ಅಜೈಲ್ ಮೆಥಡಾಲಜಿ ಈ ತಂಡಗಳ ನಡುವೆ ಸಮನ್ವಯ ಸಾಧಿಸುತ್ತದೆ.
ಎಲ್ಲ ತಂಡಗಳು ಒಟ್ಟಾಗಿ ಕೆಲಸ ಮಾಡಿ ಅತ್ಯುತ್ತಮವಾದ ಸಾಫ್ಟ್‌ವೇರ್ ಅನ್ನು ನಿರ್ಮಿಸಲು ಪ್ರೇರೇಪಿಸುತ್ತದೆ.

ಅಜೈಲ್ ಮೆಥಡಾಲಜಿಯ ಪ್ರಮುಖ ಗುಣಗಳು

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯ ಒಂದು ಪ್ರಮುಖ ಗುಣ ಎಂದರೆ ಅದು ಹೊಂದಿಕೊಳ್ಳುವಿಕೆ (flexibility).
ಅಂದರೆ ತಂಡವು ತಮ್ಮ ಯೋಜನೆಗಳನ್ನು(ಪ್ಲಾನ್) ಬದಲಾಯಿಸಲು ಮತ್ತು ಅಗತ್ಯವಿರುವಂತೆ ಹೊಂದಾಣಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ.
ಇದು ಬಹಳ ಮುಖ್ಯ. ಏಕೆಂದರೆ ಕೆಲವೊಮ್ಮೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಗ್ರಾಹಕ ಅಗತ್ಯತೆಗಳು (requirements) ಬದಲಾಗಬಹುದು. ಅವಕ್ಕೆ ತಕ್ಕಂತೆ ಸಾಫ್ಟ್ವೇರ್ ನ ಅಭಿವೃದ್ಧಿ ಮಾಡಬೇಕಾಗುತ್ತದೆ.

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯ ಮತ್ತೊಂದು ಪ್ರಮುಖ ಭಾಗವೆಂದರೆ ಅದು ಸಾಫ್ಟ್‌ವೇರ್ ಅನ್ನು ಸಾಧ್ಯವಾದಷ್ಟು ಬೇಗ ಗ್ರಾಹಕರಿಗೆ ತಲುಪಿಸುವತ್ತ ಗಮನಹರಿಸುವದು.
ಅಂದರೆ, ಆದಷ್ಟು ಬೇಗ ಸಾಫ್ಟ್‌ವೇರ್ ಬಳಸಲು ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ತಂಡಗಳು ಕೆಲಸ ನಿರ್ವಹಿಸುತ್ತವೆ.
ಇದರಿಂದ ಜನರು ಅದನ್ನು ಬಹಳ ಬೇಗ ಬಳಸಲು ಪ್ರಾರಂಭಿಸಬಹುದು ಮತ್ತು ಅದರಿಂದ ಪ್ರಯೋಜನ ಪಡೆಯಬಹುದು.

Agile Methodology-Iterations

ಹೀಗೆ ಬಿಡುಗಡೆಗೊಂಡ ಅಪ್ಲಿಕೇಶನ ಉಪಯೋಗಿಸಿದ ಗ್ರಾಹಕರ ವಿಮರ್ಶೆ(ರಿವ್ಯೂ) ಕಂಪನಿಯವರು ಪಡೆಯುತ್ತಾರೆ.
ಬಳಕೆದಾರರು ಏನಾದರೂ ಸುಧಾರಣೆಗೆ ಶಿಫಾರಸು ಮಾಡಿದ್ದರೆ ಅದನ್ನು ಪರಿಗಣಿಸಿ ಮುಂದಿನ ಆವೃತ್ತಿಯಲ್ಲಿ (ಇಟರೇಷನ್ಸ್) ಬಿಡುಗಡೆ ಮಾಡುತ್ತಾರೆ.
ಹೀಗೆ ಬಳಕೆದಾರರ ಪ್ರತಿಕ್ರಿಯೆಗೆ (ಫೀಡ್ ಬ್ಯಾಕ್) ಅನುಗುಣವಾಗಿ ಮುಂದಿನ ರಿಲೀಸ್ ಯೋಜನೆ ಮಾಡಲಾಗುತ್ತದೆ.

ಈಗ ಮೇಲೆ ಹೇಳಿದ ವಾಟ್ಸಅಪ್ ನ ಉದಾಹರಣೆಗೆ ನಿಮಗೆ ಕಲ್ಪನೆಗೆ ಬಂದಿರಬಹುದು.
ಆ ಕಂಪನಿಯವರು ಎಲ್ಲ ಫೀಚರ್ಗಳನ್ನು ಅಭಿವೃದ್ಧಿಗೊಳಿಸದ ಮೇಲೆ ನಮಗೆ ಬಿಡುಗಡೆ ಮಾಡಿದ್ದರೆ ಮೊದಲ ಆವೃತ್ತಿಯೇ ನಮ್ಮನ್ನು ತಲುಪಲು ಹಲವು ವರ್ಷಗಳೇ ಬೇಕಾಗಿದ್ದವು.
ಹೀಗೆ ಹಂತ ಹಂತವಾಗಿ ಡೆವೆಲಪ್ ಮಾಡಿ ಬಿಡುಗಡೆ ಮಾಡಿದ್ದರಿಂದ ನಮಗೆ ವಾಟ್ಸಅಪ್ ಬೇಗ ಉಪಯೋಗಿಸಲು ಆಯಿತು.

ಸಾರಾಂಶ

ಒಟ್ಟಾರೆಯಾಗಿ, ಚುರುಕಾದ ಸಾಫ್ಟ್‌ವೇರ್ ಅಭಿವೃದ್ಧಿಯು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸಾಫ್ಟ್‌ವೇರ್ ಅನ್ನು ನಿರ್ಮಿಸಲು ತಂಡವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಅಜೈಲ್ ಮೆಥಡಾಲಜಿಯ ಗುರಿ.

1 thought on “ಅಜೈಲ್ ಮೆಥಡಾಲಜಿ ಎಂದರೇನು?|What Is Agile Methodology In Kannada”

  1. Pingback: ಮಷೀನ್ ಲರ್ನಿಂಗ್ ಅಂದರೆ ಏನು ? | What IS Machine Learning In Kannada ? - Holagi ಮಷೀನ್ ಲರ್ನಿಂಗ್ ಅಂದರೆ ಏನು ? | What IS Machine Learning In Kannada ?

Leave a Comment

Your email address will not be published. Required fields are marked *