Table of Contents
Composed By | Rachane
Shri Vijayadasaru
There is an Ebook on Shri Jayateertharu. You can have a look at it.
Teekacharyara Pada Sokida Song Lyrics In Kannada
ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳಿ
ತಾಕಿದ ಮನುಜರಿಗೆ ॥ ಪ ॥
ಕಾಕುಗೊಳಿಸುವ ಅನೇಕ ಪಾಪಂಗಳ |
ಬೀಕಿ ಬಿಸಾಟೋದು ಸಾಕುವ ಮನುಜಗೆ ॥ ಅ ಪ ॥
ಮಧ್ವಮತವೆಂಬೋ ದುಗ್ಧಾಬ್ಧಿಯೊಳು |
ಉದ್ಭವಿಸಿದ ಚಂದ್ರನೋ ||
ಅದ್ವೈತಮತವಿಪಿನ ಭೇದನ ಕುಠಾರ |
ವಿದ್ಯಾರಣ್ಯರ ಗರ್ವಕೆ ಪರಿಹಾರ ॥ 1 ॥
ತತ್ವವ ನುಡಿಸಲು ತತ್ವಸುಧಾಭಾಷ್ಯ |
ವಿಸ್ತರಿಸಿದ ಚಂದ್ರನೋ ||
ಚಿತ್ತವಿಟ್ಟು ಮಾಡಿ ಟೀಕಾವನ್ನು ।
ಸುತ್ತೇಳು ಜಗಕೆಲ್ಲಾ ಪ್ರಕಟಿಸಿ ಮೆರೆದಂಥ ॥ 2 ॥
ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |
ಬಿಂದು ಮಾತ್ರದಿ ನೆನೆಯೆ ||
ಮಂದಮತಿಗಾದರೂ ಅಜ್ಞಾನ ನಾಶನ |
ಸುಂದೇಹವಿಲ್ಲವಯ್ಯ ಸ್ಮರಣೆ ಮಾಡಿದ ಮೇಲೆ ॥ 3 ॥
ಜ ಎಂದು ನುಡಿಯಲು ಜಯಶೀಲನಾಗುವ |
ಯ ಎಂದು ನುಡಿಯಲು ಯುಮನಂಜುವ ||
ತೀ ಎಂದು ನುಡಿಯಲು ತಿಮಿರ ಪಾತಕ ಹಾನಿ |
ರ್ಥ ಎಂದು ಪೊಗಳಲು ತಾಪತ್ರಯ ಪರಿಹಾರ ॥ 4 ॥
ಯೋಗಿ ಅಕ್ಷೋಭ್ಯರ ಕರಕಮಲ ಸಂಜಾತ |
ಭಾಗವತರ ಪ್ರಿಯನೆ ||
ಯೋಗಿಗಳರಸನೆ ಮಳಖೇಡ ನಿವಾಸ |
ಕಾಗಿನಿತಟವಾಸ ವಿಜಯವಿಠ್ಠಲ ದಾಸ ॥ 5 ॥




