Narsha_Experience

Narsha Narasimha Temple Pooja By Shri Satyatmateertha Swamiji | ನರ್ಷ ಕ್ಷೇತ್ರದಲ್ಲಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ ಪೂಜೆ

Date of Narsha Pooja by Shri Shri Satyatmateertharu: 29-12-2021.

ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಯೋಗ ನರಸಿಂಹ ದೇವರು ನರ್ಷ (Narsha) ಗ್ರಾಮದಲ್ಲಿದೆ.
ಈ ದೇವಸ್ಥಾನವನ್ನು ಬಳ್ಳಕ್ಕುರಾಯ ಕುಟುಂಬದವರು ಮೂರು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿಗೆ ಅವರು ಶ್ರೀಹರಿ ಪ್ರೇರಣೆಯಂತೆ ನರ್ಷ ಕ್ಷೇತ್ರವನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ.

ಇದೇ ಮೊದಲ ಬಾರಿ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಉಡುಪಿಯ ದಿಗ್ವಿಜಯ ಮುಗಿಸಿ ನರ್ಷ ಗ್ರಾಮಕ್ಕೆ ಆಗಮಿಸಿದ್ದರು. ನರಸಿಂಹ ದೇವರ ಪೂಜೆ ಹಾಗು ಮೂಲರಾಮ ದೇವರ- ದಿಗ್ವಿಜಯರಾಮದೇವರ ಪೂಜೆಯನ್ನು ಅಲ್ಲಿ ನೆರವೇರಿಸಿದ್ದರು.

ಈ ಐತಿಹಾಸಿಕ ಕ್ಷಣಗಳಲ್ಲಿ ನಮ್ಮ ಬರಹಗಾರರು ಅಲ್ಲಿ ಉಪಸ್ಥಿತರಿದ್ದರು. ಅವರ ಅನುಭವವೇ ಈ ಲೇಖನ.

ದೃಶ್ಯ-1

ನಯನ ಮನೋಹರ ತಾಣ.ಹೆಸರು ನರ್ಷ. ಚಿಕ್ಕ, ಸುಂದರ ತಟಾಕ. ಪುರಾತನ ದೇವಾಲಯ. ಅಲ್ಲಿ ಪುಟ್ಟ ನರಸಿಂಹ. ಯೋಗದ ಭಂಗಿಯಲ್ಲಿ ವಿರಾಜಮಾನ. ನರಸಿಂಹನ ಪಕ್ಕದ ಪೋಳಿಯಲ್ಲಿ ದೊಡ್ಡ ಮಂಟಪ. ಮಂಟಪದಲ್ಲಿ ಮೂಲರಾಮ, ದಿಗ್ವಿಜಯರಾಮ. ಅರ್ಚಿಸುತ್ತಿರುವವರು ಶ್ರೀ ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರು. ಪಕ್ಕದಲ್ಲೇ ಇನ್ನೊಂದು ಮಂಟಪ. ಆ ಮಂಟಪದಲ್ಲಿ ಯೋಗನರಸಿಂಹ , ಕರಾಳ ನರಸಿಂಹ ದೇವರ ಉಪಸ್ಥಿತಿ. ಪೂಜಿಸುತ್ತಿರುವವರು ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥರು . ಈ ಎಲ್ಲ ದೇವರ ವೈಭವದ ಪೂಜೆ…ಏಕ ಕಾಲದಲ್ಲಿ ! ಗಂಟೆ, ಜಾಗಟೆ,ಶಂಖಗಳ ಧ್ವನಿ ಮುಗಿಲು ಮುಟ್ಟುತ್ತಿದೆ. ಕಣ್ಣು, ಕಿವಿ ಪವಿತ್ರ. ಮನಸ್ಸು, ಜೀವನ ಧನ್ಯ . ಸಜ್ಜನರ ಸಂಗ … ಹಿರಿಯರ ಪುಣ್ಯ

Narsha-Narasimhadevaru_vishwaroopa

ದೃಶ್ಯ-2

ಉಡುಪಿ. ಕಡಗೋಲು ಬಾಲ ಕೃಷ್ಣ. ಚಂದ್ರಶಾಲೆ. ಮುಖ್ಯಪ್ರಾಣದೇವರ ಸನ್ನಿಧಾನ. ಪಕ್ಕದಲ್ಲಿ ಸುಂದರ ಮಂಟಪ. ಮಂಟಪದಲ್ಲಿ ಮೂಲರಾಮ, ದಿಗ್ವಿಜಯರಾಮ ದೇವರು. ಅರ್ಚಿಸುತ್ತಿರುವವರು ಶ್ರೀ ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರು. ಶ್ರೀ ಕೃಷ್ಣನ ಎದುರಲ್ಲಿ ಇನ್ನೊಂದು ರೂಪದಿಂದ ಮೂಲರಾಮ-ಮೂಲ ಸೀತಾದೇವಿ. ಮತ್ತೊಂದು ರೂಪದಲ್ಲಿ ದಿಗ್ವಿಜಯರಾಮ. ಎಡಕ್ಕೆ ಕಣ್ಣು ಹೊರಳಿಸಿದರೆ ಶ್ರೀ ಪರ್ಯಾಯ ಮಠಾಧೀಶರಿಂದ ಶ್ರೀ ಕೃಷ್ಣನ ಪಂಚಾಮೃತ ಅಭಿಷೇಕ. ಬಲಕ್ಕೆ ಕಣ್ಣು ಹೊರಳಿಸಿದರೆ ನವರತ್ನಗಳಿಂದ ಅಲಂಕೃತಗೊಂಡ ಮೂಲ ರಾಮದೇವರು. ಪೂಜಿಸುತ್ತಿರುವವರು ಶ್ರೀ ಶ್ರೀ ಸತ್ಯಾತ್ಮತೀರ್ಥರ ಅಂತರ್ಗತರಾದ ಶ್ರೀಮದಾಚಾರ್ಯರು. ಅರಳಿಸಿದಷ್ಟು ಅರಳುತ್ತಿರುವ ಕಣ್ಣುಗಳು. ಅವು ಸಾಲವು ಈ ವೈಭವ ನೋಡಲು. ಸುತ್ತಲೂ ಬೆಳಗುತ್ತಿರುವ ದೀಪಗಳು. ನಡುವೆ ಮಂದಸ್ಮಿತನಾಗಿ ಹೊಳೆಯುತ್ತಿರುವ ಮೂಲರಾಮ. ಆಕಡೆ ಬಾಲ ಕೃಷ್ಣನ ವಿಶ್ವರೂಪ ದರ್ಶನ ! ಅಬ್ಬಾ ಮೈ ರೋಮಾಂಚನ !!

Shri Satyatamteertha’s Samsthana Puja at Udupi

ದೃಶ್ಯ-3

ಉಡುಪಿ- ಅನಂತೇಶ್ವರ ಸನ್ನಿಧಾನ. ಸ್ವರೂಪೋಧಾರಕ ಗುರುಗಳ ಆಗಮನ. ಅವರ ಹಿಂಬಾಲಿಸುವ ಭಾಗ್ಯ. ಪಾತ್ರರ ಸಂಗಡ ಯಾತ್ರೆ.
ಅನಂತೇಶ್ವರನಿಗೆ ಸ್ವಾಮಿಗಳಿಂದ ನಮಸ್ಕಾರ, ಪ್ರಾರ್ಥನೆ. ಲೋಕ ಕಲ್ಯಾಣಕ್ಕಾಗಿ. ‘ಉನ್ನತಾ ಪ್ರಾರ್ಥಿತ… ‘ ಶ್ಲೋಕದ ನೆನಪು. ಶ್ರೀಮದಾಚಾರ್ಯರು ಪಾಠ ಹೇಳ್ತಾ ಹೇಳ್ತಾ ಅದೃಶ್ಯರಾದ ಸ್ಥಳ. ಸ್ವಾಮಿಗಳಿಂದ ಮಧು ಅಭಿಷೇಕ. ಭಕ್ತರಿಂದ ಹರಿ ವಾಯುಸ್ತುತಿ ಪುನಶ್ಚರಣ. ಸರ್ವೋತ್ತಮನ ಸನ್ನಿಧಾನ. ಜೀವೋತ್ತಮರ ಅಭಿಷೇಕ. ಕುಲಗುರುಗುಳ, ಸ್ವರೂಪೋದ್ಧಾರಕ ಗುರುಗಳಾದ ಶ್ರೀ ಸತ್ಯಾತ್ಮತೀರ್ಥರ ಹಸ್ತ ಕಮಲಗಳಿಂದ. . ಹರಿ ವಾಯುಸ್ತುತಿ ಪುನಶ್ಚರಣ ಮಾಡುವ ನಮ್ಮ ಭಾಗ್ಯ ! 30 ನಿಮಿಷಗಳ ಈ ಸಮಯ.. ಅದು ಅತ್ಯಮೂಲ್ಯ, ದುರ್ಲಭ , ಅನೇಕ ಜನ್ಮಗಳ ಪುಣ್ಯ, ಗುರುಗಳ ಅನುಗ್ರಹ , ಸಜ್ಜನರ ಸಂಗ . ನೆನಸಿಕೊಂಡರೆ ಈಗಲೂ ರೋಮಾಂಚನ.

ದೃಶ್ಯ-4

ಉಡುಪಿ-ಮಧ್ವಸರೋವರ. ಅರುಣೋದಯ ಕಾಲ. ಚುಮು ಚುಮು ಚಳಿ. ಆವರಿಸಿದ ಕತ್ತಲೆ. ತಂಪಾದ ನೀರು. ಶ್ರೀ ಶ್ರೀ ಸತ್ಯಾತ್ಮತೀರ್ಥರ ಆಗಮನ. ಝಗಮಗಿಸಿದ ಸರೋವರ. ಸ್ವಾಮಿಗಳೊಂದಿಗೆ ಸ್ನಾನ. ಮಡಿ ಸ್ನಾನಕ್ಕೆಂದು ಬಂದಿದ್ದರೂ ಸಹ ಸ್ವಾಮಿಗಳ ಪರಮ ಅನುಗ್ರಹ – ಪ್ರೋಕ್ಷಣೆ ಮಾಡಿದರು .ಪರಮ ಆನಂದ. ಕೆಲವೇ ನಿಮಿಷಗಳಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥರ ಆಗಮನ. ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸುವ ಕೈಗಳಿಂದ ದಂಡಸ್ನಾನ ! ಕೆಲವು ನಿಮಿಷಗಳಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ದಂಡಸ್ನಾನ !! ನಂತರ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಅಮೃತ ಹಸ್ತಗಳಿಂದ ದಂಡಸ್ನಾನ !!! ಜನ್ಮಾಂತರದ ಪುಣ್ಯ, ಗುರುಗಳ ಅನುಗ್ರಹ ಅಲ್ಲವೇ ??!!

ದೃಶ್ಯ-5

ಉಡುಪಿ- ಚೌಕಿ. ಇಷ್ಟು ಸಾಕಲ್ಲವೇ..ಮುಂದೆ ಏನು ಹೇಳಬೇಕಾಗಿಲ್ಲ ಅಲ್ಲವೇ? ಇರಲಿ… ಭೂರಿ ಭೋಜನ, ಅನೇಕ ಭಕ್ಷ್ಯಗಳು, ರಾತ್ರಿ ಊಟಕ್ಕಿಂತ ಮಿಗಿಲಾದ ಫಲ ಆಹಾರ..

ದೃಶ್ಯ-6

ನರ್ಷ- ಶ್ರೀಮದಾಚಾರ್ಯರ ಪ್ರತಿಷ್ಠಾಪನೆ. ಆಚಾರ್ಯರು ಪ್ರದಕ್ಷಿಣೆ ಮಾಡುತ್ತಾ ಲಘಿಮಾ ಸಿದ್ಧಿಯನ್ನು ತೋರಿದ ಸ್ಥಳ.

ಶ್ರೀ ಸುಮಧ್ವವಿಜಯದಲ್ಲಿ ದಾಖಲಾಗಿರುವಂತೆ ಇಲ್ಲಿಯೇ ಶ್ರೀಮದಾಚಾರ್ಯರು ಲಘಿಮಾ ಸಿದ್ಧಿಯನ್ನು ಪ್ರದರ್ಶಿಸಿದ್ದರು. ಅವರು ಒಬ್ಬ ಪುಟ್ಟ ಬಾಲಕನ ಹೆಗಲ ಮೇಲೆ ಕುಳಿತುಕೊಂಡು ಈ ನರಸಿಂಹ ದೇವರಿಗೆ ಪ್ರದಕ್ಷಿಣೆ ಮಾಡಿದ್ದರಂತೆ.

ಶ್ಲೋಕ:
ನಿರ್ಯತ್ನಂ ವಟುಮಧಿರುಹ್ಯ ಮಂದಹಾಸೀ ಸ ಪ್ರಾಯಾದಿಹ ಪರಿತೋ ನೃಸಿಂಹಗೇಹಮ್ |
ಐಶ್ವರ್ಯೈರಿತಿ ಲಘಿಮಾದಿಕೈರುಪೇತೋ ಮಧ್ವೋऽಭೂತ್ ತ್ರಿಭುವನಚಿತ್ರರತ್ನರಾಜಃ II

ಶ್ರೀಮದ್ ಜಯತೀರ್ಥರು ಪೂಜಿಸಿದ ನರಸಿಂಹ ದೇವರು. ನಮ್ಮ ಸ್ವಾಮಿಗಳಿಂದ ಪ್ರಪ್ರಥಮ ಬಾರಿಗೆ ಈ ನರಸಿಂಹ ದೇವರಿಗೆ ಮಧು ಅಭಿಷೇಕ. ಪಂಚಾಮೃತ ಅಭಿಷೇಕ , ಅರ್ಚನೆ.. ಐತಿಹಾಸಿಕ ಕ್ಷಣಗಳು ! ಇತಿಹಾಸ ಬರೆದ ಪುಣ್ಯ !
ಶ್ರೀ ಶ್ರೀ ಸತ್ಯಾತ್ಮತೀರ್ಥರು,ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥರು, ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥರು. ಇವರ ಸಮಾಗಮ. ಆಶೀರ್ವಚನ. ಮಠ-ಮಠಗಳ ಭಾಂಧವ್ಯದ ವೈಭವ. ಭಕ್ತರ ಸೇವೆ.. ವರ್ಣಿಸಲು ಅಸಾಧ್ಯ.

Narsha_Ramadevarapuje

ದೃಶ್ಯ-7

ನರ್ಷ – ಸಭೆ : ಆಮೇಲೆ ನಡೆದದ್ದು ಐತಿಹಾಸಿಕ ಸಭೆ. ಇಲ್ಲಿ ಮೂರು ಸ್ವಾಮಿಗಳು, ಪಂಡಿತರು, ದಾನಿಗಳು, ಶಿಷ್ಯರು, ಭಕ್ತರ ಸಮಾಗಮ.. ಪ್ರಸ್ತುತ ಈ ಕ್ಷೇತ್ರವನ್ನು ಆಡಳಿತ ಮಂಡಳಿಯ ಬಳ್ಳಕ್ಕುರಾಯ ಕುಟುಂಬದವರು ಶ್ರೀಹರಿ ಪ್ರೇರಣೆಯಂತೆ ನಾರ್ಶ್ಯಕ್ಷೇತ್ರವನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುತ್ತರಾದಿಮಠಕ್ಕೆ ಸಮರ್ಪಿಸಿದ್ದಾರೆ. ಅದಕ್ಕಾಗಿ ಅವರ ಸತ್ಕಾರ, ಆಶೀರ್ವಾದಗಳು ಜರುಗಿದವು.

Narsha Sabha

ದೃಶ್ಯ-8

ನರ್ಷ- ಮಂಡಿಗೆ, ಪಂಚ ಭಕ್ಷ್ಯಗಳ ಭೋಜನ. ರಾಮದೇವರ ಪ್ರಸಾದ. ಅನೇಕ ಸೇವಾಕರ್ತೃಗಳ ಸೇವೆ. ಸ್ವಯಂ ಸೇವಕರ ಸೇವೆ. ಅವರಿಗೆ ಅಳಿಲು ಸೇವೆಗೆಂದು ಕೈ ಜೋಡಿಸುವ ಭಾಗ್ಯ…ಅಹೋ ಭಾಗ್ಯ !

ನಾರ್ಶ ನರಸಿಂಹ ದೇವಸ್ಥಾನ ಎಲ್ಲಿದೆ ? How To Reach Narsha

Please Click on the Here to see the Map.

Whom To Contact In Narsha Narasimha Temple

ಪಂ. ಶ್ರೀಸತ್ಯಾಭಿಜ್ಞಾಚಾರ್ಯ (Pt. Shri Satyabignachar) . Phone Number:-8217648583

Leave a Comment

Your email address will not be published. Required fields are marked *