ಕೇಶವನಾಮ | Keshava Nama | Isha Ninna Charana | Lyrics | Kanakadasa

“ಈಶ ನಿನ್ನ ಚರಣ ಭಜನೆ ” ಕೀರ್ತನೆಗೆ “ಕೇಶವನಾಮ” ಎಂದು ಹೆಸರು. ಈ ಕೀರ್ತನೆ ಎನ್ನು ಶ್ರೀ ಕನಕದಾಸರು ರಚಿಸಿದ್ದಾರೆ.
ಕೇಶವನಾಮದ ವೈಶಿಷ್ಠತೆ ಅಂದರೆ ಇದರಲ್ಲಿ ಭಗವಂತನ ೨೪ ರೂಪಗಳನ್ನು ದಾಸರು ಹಾಡಿ ಹೊಗಳಿದ್ದಾರೆ.
ಒಂದೊಂದು ರೂಪದಲ್ಲಿ ಒಂದೊಂದು ಪಾಪ , ತಪ್ಪು, ದೋಷಗಳನ್ನು ದೂರಮಾಡು ಎಂದು ಬೇಡಿಕೊಳ್ಳುತ್ತಾರೆ.

ರಚನೆ :ಶ್ರೀ ಕನಕದಾಸರು

Shri Kanakadasa

Isha Ninna Charana (Keshava Nama) Song Lyrics In Kannada

ಈಶ ನಿನ್ನ ಚರಣ ಭಜನೆ
ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ ||

ಶರಣು ಹೊಕ್ಕೆನಯ್ಯ ಎನ್ನ
ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 1 ||

ಶೋಧಿಸೆನ್ನ ಭವದ ಕಲುಶ
ಭೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || 2 ||

ಹಿಂದನೇಕ ಯೋನಿಗಳಲಿ
ಬಂದು ಬಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || 3 ||

ಭ್ರಷ್ಟನೆನಿಸಬೇಡ ಕೃಷ್ಣ
ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ || 4 ||

ಮದನನಯ್ಯ ನಿನ್ನ ಮಹಿಮೆ
ವದನದಲ್ಲಿ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 5 ||

ಕವಿದುಕೊಂಡು ಇರುವ ಪಾಪ
ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ  ಶ್ರೀತ್ರಿವಿಕ್ರಮ || 6 ||

ಕಾಮಜನಕ ನಿನ್ನ ನಾಮ
ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || 7 ||

ಮೊದಲು ನಿನ್ನ ಪಾದಪೂಜೆ
ಒದಗುವಂತೆ ಮಾಡೋ ಎನ್ನ
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 8 ||

ಹುಸಿಯನಾಡಿ ಹೊಟ್ಟೆ ಹೊರೆವ
ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || 9 ||

ಕಾಮಕ್ರೋಧ ಬಿಡಿಸಿ ನಿನ್ನ
ನಾಮ ಜಿಹ್ವೆಯೊಳಗೆ ನುಡಿಸು
ಶ್ರೀಮಹಾನುಭಾವನಾದ ದಾಮೋದರ || 10 ||

ಬಿದ್ದು ಭವದನೇಕ ಜನುಮ
ಬದ್ದನಾಗಿ ಕಲುಷದಿಂದ
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 11 ||

ಪಂಕಜಾಕ್ಷ ನೀನೆ ಎನ್ನ
ಮಂಕುಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 12 ||

ಏಸು ಜನ್ಮ ಬಂದರೇನು
ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು ವಾಸುದೇವನೇ || 13 ||

ಬುದ್ಧಿ ಶೂನ್ಯನಾಗಿ ಎನ್ನ
ಬದ್ಧಕಾಯ ಕುಹಕ ಮನವ
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 14 ||

ಜನನಿ ಜನಕ ನೀನೆಯೆಂದು
ನೆನೆವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || 15 ||

ಹರುಶದಿಂದ ನಿನ್ನ ನಾಮ
ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 16 ||

ಸಾಧುಸಂಗ ಕೊಟ್ಟು ನಿನ್ನ
ಪಾದಭಜನೆ ಇತ್ತು ಎನ್ನ
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || 17 ||

ಚಾರುಚರಣ ತೋರಿ ಎನಗೆ
ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೇ || 18 ||

ಸಂಚಿತಾದಿ ಪಾಪಗಳು
ಕಿಂಚಿತಾದ ಪೀಡೆಗಳನು
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || 19 ||

ಜ್ಞಾನ ಭಕುತಿ ಕೊಟ್ಟು ನಿನ್ನ
ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || 20 ||

ಜಪತಪಾನುಷ್ಠಾನವಿಲ್ಲ
ಕುಪಿತಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || 21 ||

ಮೊರೆಯ ಇಡುವೆನಯ್ಯ ನಿನಗೆ
ಶರಧಿಶಯನ ಶುಭಮತಿಯ
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 22 ||

ಪುಟ್ಟಿಸಲೇಬೇಡ ಇನ್ನು
ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || 23 ||

ಸತ್ಯವಾದ ನಾಮಗಳನು
ನಿತ್ಯದಲ್ಲಿ ಪಠಿಸುವರಿಗೆ
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 24 ||

ಮರೆಯದಲೆ ಹರಿಯ ನಾಮ
ಬರೆದು ಓದಿ ಪೇಳ್ದವರಿಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 25 ||

Isha Ninna Charana (Keshava Nama) Song Lyrics In English

Composed By : Shri Kanakadsa

Eesha Ninna Charana Bhajane
Aaseyinda Maaduvenu
Dosha Rashi Naasha Maadu Shreesha Keshava ||Pa ||

Sharanu Hokkenayya Yenna
Marana Samayadalli Ninna
Charana Smarane Karunisayya Narayana || 1||

Shodhisenna Bhavada Kalusha
Bhodisayya Gnyanavenage
Baadhisuva Yamana Baadhe Bidisu Maadhava || 2 ||

Hindaneka yonigalalli
Bandu Bandu Nondenayya
Indu Bhavada Bandha Bidisu Thande Govinda || 3 ||

Bhrashtanenisa Beda Krishna
Ishtu Maatra Bedikombe
Shishtarodane Ittu Kashta Bidisu Vishnuve || 4 ||

Madananayya Ninna Mahime
Vadanadalli Nudiyuvanthe
Hrudayadalli Hudugisayya Madhusoodhana || 5 ||

Kavidukondu Iruva Paapa
Savidu Poguvanthe Maado
Javana Badheyannu Bidisu Thrivikrama || 6 ||

Kaamajanaka ninna naama
Premadinda paaduvantha
Nemavenage paalisayya swami Vaamana || 7 ||

Modalu Ninna Paada Pooje
Odhaguvanthe Maado Yenna
Hrudayadolage Sadana Maado Mudhadhi Shridara || 8 ||

Husiyanaadi Hotte Horeva
Vishayadalli Rasikanendu
Husige Haakadiro Hrushikeshane || 9 ||

Kaama krodha bidisi ninna
Naama jiwheolage nudisu
Shri mahanubhaavanada Daamodara || 10 ||

Biddu Bhavadaneka Januma
Baddhanaagi Kalushadinda
Geddupopa Buddhi Thoro Padmanaabhane || 11 ||

Pankajaaksha Neenu Yenna
Manku Buddhiyannu Bidisi
Kinkaranna Maadikollo Sankarshana || 12 ||

Yesu Januma Bandarenu
Daasanallavenu Naanu
Ghaasi Maadadiru Innu Vasudevane || 13 ||

Buddhi Shoonyanaagi Yenna
Baddha Kaaya Kuhaka Manava
Thiddi Hrudaya Shuddhi Maado Pradyumnane || 14 ||

Janani Janaka Neene Yendu
Nenevenayya Deena Bandhu
Yenage Mukthi Paalisinnu Aniruddhane || 15 ||

Harushadinda Ninna Naama
Smarisuvanthe Maadu Nema
Irisu Charanadalli Prema Purushottama || 16 ||

Saadhu Sanga Kottu Ninna
Paada Bhajane Itthu Enna
Bheda Maadi Nodadiro Sri Adhokshaja || 17 ||

Charu Charana Thori Yenage
Paarugaanisayya Konege
Bhara Haakiruve Ninage Narasimhane || 18 ||

Sanchithaadi Papagalanu
Kinchithaada Peedegalanu
Munchithavaagi Kaledu Poreyo Swami Achyutha || 19 ||

Gnyana Bhakti Kottu Ninna
Dhyanadalli Ittu Sada
Heena Buddhi Bidisu Munna Shree Janardhana || 20 ||

Japa Thapa Anushtaanavillade
Kupithagaamiyaada Enna
Krupeya Maadi Kshamisabeku Upendrane || 21 ||

Moreya Iduvenayya Ninage
Sharadhi Shayana Shubhamathiya
Irisu Bhaktarolage Parama Purusha Sri Hari || 22 ||

Puttisale Beda Innu
Puttisidake Paalisinnu
Ishtu Maatra Bedikombe Shri Krishnane || 23 ||

Sathyavaada Naamagalanu
Nithyadalli Patisuvavara
Arthiyinda Salahuthiruva Kartru Keshava || 24 ||

Mareyadale Hariya Naama
Baredu Odhi Kelidavage
Karedu Mukti Koduva Neleyaadikeshava || 25 ||

Eesha Ninna Charana Bhajane (Keshava Nama) Songs- Video

Isha Ninna Charan Bhajane Song by Subrabha
Isha Ninna Charana Bhajane Song by Shri Vidyabhooshana

Frequently Asked Questions About Keshava Nama

  1. What is Keshava Nama ?

    Keshavanama is also called as ‘Isha Ninna Charana Bhajanae’ song

  2. What is the speciality of Isha Ninna Charana Bhajane Song ?

    In Keshavanama or Isha Ninna Charanara Bhajane song, Shri Kanakadasa explains of greatness of 24 roopas of lord Vishnu. He pleads lord to remove all his sins and mistakes done many births

  3. Who composed Keshava Nama ?

    Shri Kanakadasa composed Keshavanama

  4. Who is Kanakadasa ?

    Shri Kanakadasa is a Haridasa from Karnataka. He is from Kaginele, a place in Karnataka. He composed lot of devotional songs in Kannada

  5. Which 24 roopas of lord Shri Hari is mentioned in Isha Ninna song?

    24 roopas of lord Vishnu is Keshavanama are highlighted in bold above.
    Following 24 roopas of lord Vishnu :
    1. Keshava
    2. Narayana
    3. Madhava
    4. Govind
    5.Vishnu
    6. Madhusudhana
    7. Trivikrama
    8. Vamana
    9. Shridhara
    10. Hrishikesha
    11. Damodara
    12. Padmanabha
    13. Sankarshana
    14. Vasudeva
    15. Pradyumna
    16. Aniruddha
    17. Purushottama
    18. Adhokshaja
    19. Narasimha
    20. Achyuta
    21. Janardhana
    22. Upendra
    23. Shri Hari
    24. Krishna

Keshavanama Song

Leave a Comment