Karachi Halwa

How To Prepare Karachi Halva (In Kannada)

In this article, we will see how to prepare Karachi Halwa.

ಬಾಯಲ್ಲಿಟ್ಟರೆ ಕರಗುವ ಹಲ್ವಾ

———————————————

ಅದೇ ಅಡುಗೆ ತಿಂದು ತಿಂದು ಬೇಜಾರಾಗಿದೆನಾ?
ಹಾಗಾದ್ರೆ ಈ ಸ್ವೀಟ್ ಟ್ರೈ ಮಾಡಿ !!

ಬೇಕಾಗುವ ಸಾಮಗ್ರಿಗಳು


ಕಾರ್ನ್ ಫ್ಲ್ಲೂರ್:೧/೨ ಕಪ್
ನೀರು:೨ ಕಪ್
ಸಕ್ಕರೆ:೧ ೧/೪ ಕಪ್
ಡ್ರೈ ಫ್ರೂಟ್ಸ್ :ಬಾದಾಮ್, ಪಿಸ್ತಾ .
ತುಪ್ಪ:೩ ಸ್ಪೂನ್

ಮಾಡುವ ವಿಧಾನ:


೧. ಮೊದಲು ೧/೨ ಕಪ್ ಕಾರ್ನ್ ಫ್ಲೋರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ.
೨. ಅದಕ್ಕೆ ೨ ಕಪ್ ನೀರು ಸೇರಿಸಿ ಚನ್ನಾಗಿ ಗಂಟು ಇಲ್ಲದಂತೆ ಕಲಸಿರಿ.
೩.ಪಾಕ ಮಾಡಲು ಒಂದು ದಪ್ಪ ತಳ ಇರುವ ಪಾತ್ರೆಯನ್ನು (You can buy thick bottomed pan from here) ಸ್ಟೊವ್ ಮೇಲೆ ಇಡಿ. ಆ ಪಾತ್ರೆಗೆ ೧ ೧/೪ ಸಕ್ಕರೆಯನ್ನು ಹಾಕಿ,
೪.ಅದಕ್ಕೆ ೧ ಕಪ್ ನೀರು ಹಾಕಿ.
೫.ಸಕ್ಕರೆ ಕರಗಿದ ನಂತರ ೨ ರಿಂದ ೩ ಹನಿಯಷ್ಟು ನಿಂಬೆ ರಸವನ್ನು ಪಾಕಕ್ಕೆ ಹಿಂಡಿ.
೬.ಸ್ಟೊವ್ ಅನ್ನು ಸ್ಲೋ ಮಾಡಿ,ಕಾರ್ನ್ ಫ್ಲೋರ್ ಮಿಕ್ಸ್ ಮಾಡಿದ ಮಿಶ್ರಣ ವನ್ನು ಪಾಕಕ್ಕೆ ಬೆರಸಿ,ಕಂಟಿನ್ಯುಅಸ ಆಗಿ ತಿರಿಗಿಸುತ್ತಾ ಇರಬೇಕು .
೭ ಚೆನ್ನಾಗಿ ತಿರಿಗಿಸುತ್ತಾ ಇರಿ,ಸ್ವಲ್ಪ ಹೊತ್ತಿಗೆ ಗಟ್ಟಿಯಾಗಲು ಪ್ರಾರಂಭಿಸುತ್ತದೆ.
೮ ತಿರಿಗಿಸುತ್ತಾ ಇದ್ದಂತೆ ಗಟ್ಟಿಯಾಗುವದರ ಜೊತೆಗೆ ಶೈನಿಂಗ್ ಬರುತ್ತದೆ.
೯ ಗಟ್ಟಿಯಾದ ಮಿಶ್ರಣಕ್ಕೆ ಓರೆಂಜ ಫುಡ್ ಕಲರನ್ನು ಬೆರೆಸಿ .
೧೦ ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆ, ೩ ಸ್ಪೂನ್ ತುಪ್ಪವನ್ನು ಬೆರೆಸಿ,ಕಲಿಸುತ್ತಾ ಇರಿ.
೧೧ ಹಾಕಿದ ತುಪ್ಪ ಮಿಶ್ರಣದ ಜೊತೆಗೆ ಹದವಾಗಿ ಬೆರೆತ ನಂತರ ಬಾದಾಮ್ ಪಿಸ್ತಾ ತುಂಡುಗಳನ್ನು ಬೆರೆಸಿ ಮಿಶ್ರಣ ಕಲಕಿ.
೧೨ ಯಾವದಾದರೂ ತಟ್ಟೆಗೆ ತುಪ್ಪ ಒರೆಸಿ ಬಿಸಿಮಿಶ್ರಣವನ್ನು ಟ್ರಾನ್ಸ್ಫರ್ ಮಾಡಿ, ೨ ತಾಸು ಸೆಟ್ ಆಗಲು ಬಿಡಿ.
೧೩ ನಂತರ ಹಲ್ವಾ ವನ್ನು ಯಾವ ಆಕಾರಕ್ಕೂ ಕತ್ತರಿಸಿ ಸರ್ವ್ ಮಾಡಿ.

Leave a Comment

Your email address will not be published. Required fields are marked *