ರಚನೆ : ಶ್ರೀ ಗೋಪಾಲದಾಸರು
Table of Contents
About ‘Eke Mamathe Kottu Danisuvi Ranga’
‘ಏಕೆ ಮಮತೆ ಕೊಟ್ಟು ದಣಿಸುವಿ ರಂಗ’ ಕೀರ್ತನೆಯನ್ನು ಶ್ರೀ ಗೋಪಾಲದಾಸರು ರಚಿಸಿದ್ದಾರೆ. ಅವರಿಗೆ ‘ಗೋಪಾಲವಿಠಲ’ ಅಂಕಿತವನ್ನು ಶ್ರೀ ವಿಜಯದಾಸರು ನೀಡಿದ್ದಾರೆ.
Eke Mamathe Kottu Danisuvi Ranga Song Lyrics In Kannada
ಏಕೆ ಮಮತೆ ಕೊಟ್ಟು ದಣಿಸುವಿ ರಂಗ ?
ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ || ಪ ||
ನಿನ್ನನು ಭಜಿಸಲು ಅನ್ಯ ವಿಷಯಂಗಳಿ–
ಗೆನ್ನನೊಪ್ಪಿಸುವುದು ನೀತಿಯೇ ?
ಮನ್ನಿಸಿ ದಯದಿ ನೀ ಎನ್ನ ಪಾಲಿಸದಿರೇ
ನಿನ್ನ ನೇಮಕೆ ಪ್ರತಿಕೂಲನೆ ರಂಗಾ ? || 1 ||
ತನುವು ತನ್ನದು ಅಲ್ಲ ತನು ಸ೦ಬ೦ಧಿಗಳಾರೋ
ತನುವಾರೋ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿ೦ದಣ ಜನುಮದ೦ತಲ್ಲವೆ ರಂಗಾ ? || 2 ||
ಇ೦ದ್ರಿಯ೦ಗಳ ವಿಷಯದಿ೦ದ ಭೇದಿಸೇ
ಗೋವಿ೦ದ ನಿನ್ನ ಮನಕೆ ಬಾರದೇ ?
ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
ಬ೦ಧಕ ಶಕುತಿಗೆ ನಮೋ ನಮೋ ರಂಗಾ || 3 ||
ಅರಿತು ಅರಿತು ಎನಗೆ ಅರೆಲವವಾದರು
ವಿರಕುತಿ ವಿಷಯದಿ ಬಾರದು
ಕರುಣಾಸಾಗರ ನಿನ್ನ ಸ್ಮರಣೆ ಒಂದಲ್ಲದೇ
ಮರುಳು ನೀಗುವ ಬಗೆಗಾಣೆನೊ ರಂಗಾ || 4 ||
ಎ೦ದಿಗೆ ಇನ್ನು ನಿನ್ನ ಚಿತ್ತಕ್ಕೆ ಬರುವುದೊ
ಅ೦ದಿಗೆ ಉದ್ಧರಿಸೋ ಕರುಣಿಯೇ
ಸು೦ದರ ವಿಗ್ರಹ ಗೋಪಾಲವಿಠಲ ಸುಖ
ಸಾ೦ದ್ರ ಭವಮೋಚಕ ನಮೋ ನಮೋ ರಂಗಾ || 5 ||
Eke Mamathe Kottu Danisuvi Ranga Song Lyrics In English
Ēke mamate koṭṭu daṇisuvi raṅga?
Nī karuṇadi enna pālisō kr̥ṣṇa || pa ||
ninnanu bhajisalu an’ya viṣayaṅgaḷi–
gennanoppisuvudu nītiyē?
Mannisi dayadi nī enna pālisadirē
ninna nēmake pratikūlane raṅgā? || 1 ||
Tanuvu tannadu alla tanu sanbandhigaḷārō
tanuvārō tān’yāro avarige
dhana modalāda viṣayagaḷa anubhava
hindaṇa janumadantallave raṅgā? || 2 ||
Indriyangaḷa viṣayadi0da bhēdisē
gōvinda ninna manake bāradē?
Indire arasa brahmādivandita ninna
bandhaka śakutige namō namō raṅgā || 3 ||
aritu aritu enage arelavavādaru
virakuti viṣayadi bāradu
karuṇāsāgara ninna smaraṇe ondalladē
maruḷu nīguva bagegāṇeno raṅgā || 4 ||
endige innu ninna cittakke baruvudo
andige ud’dharisō karuṇiyē
sundara vigraha gōpālaviṭhala sukha
sāndra bhavamōcaka namō namō raṅgā || 5 ||
Eke Mamathe Kottu Danisuvi Ranga Songs
Frequently Asked Questions About Eke Mamathe Kottu Song
Who Composed Eke Mamathe Kottu Danisuvi Song?
Shri Gopaladasa composed Eke Mamathe Kottu Danisuvi song in Kannada
Who is Gopaladasa
Shri Gopaladasa’s original name is Bhaganna. He got ‘Gopalavithala’ ankita from Shri Vijayadasa