ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru

ರಚನೆ: ಶ್ರೀ ವಿಜಯದಾಸರು

‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ.

ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.
ಅವರು ಗುರುಗಳ ಮನೆಯಲ್ಲಿ ನೀರು ತರುವದು, ಗುರುಗಳು ಉಂಡ ಎಂಜಲು ಎಲೆ ತೆಗೆಯುವದು, ಗುರುಗಳು ಉಂಡ ನಂತರ ತಾವು ಊಟ ಮಾಡುವದು, ಗುರುಗಳ ಮನೆ ಮುಂದೆ ರಾತ್ರಿಯೆಲ್ಲಾ ಜಾಗರ ಮಾಡುವದು ಇತ್ಯಾದಿ ಸೇವೆಗಳನ್ನು ಅತ್ಯಂತ ಭಕ್ತಿ ಇಂದ ಮಾಡಿದ್ದಾರೆ.

ಈ ಸೇವೆ ಮಾಡುವಾಗ ಅನೇಕ ಲೋಪದೋಷಗಳು ಆಗಿರುತ್ತವೆ.
ಅವನ್ನೆಲ್ಲ ದೋಷ ರಹಿತನಾದ ಸರ್ವೋತ್ತಮನಾದ ತಮ್ಮ ಉಪಾಸ್ಯ ದೇವರಾದ ವಿಜಯವಿಠ್ಠಲ ದೇವರೇ ಕಡೆಗೆಣಸಿ ಪುಣ್ಣ್ಯ ದ ಸಮುದ್ರವೇ ಆಗಿರುವ ಪುರಂದರದಾಸರ ಮೇಲೆ ದಯೆ ಇಟ್ಟು ತಮ್ಮನ್ನು ಸಲಹು ಎಂದು ಕೇಳುತ್ತಾರೆ.

ಸಂಸಾರ ಬಂಧನಿಂದ ತಮ್ಮನು ಬಿಡಿಸು ಎಂದು ಶ್ರೀ ಹರಿಯಲ್ಲಿ ಪ್ರಾರ್ಥಿಸುತ್ತಾರೆ .

Dasara Maneyali Vasavagiddava Song Lyrics In Kannada

ದಾಸರ ಮನೆಯಲ್ಲಿ ವಾಸವಾಗಿದ್ದವ
ದಾಸರ ಬಳಿಯಲ್ಲಿ ಸೇರಿಕೊಂಡವನೇನೋ

ದಾಸರ ಮನೆಯಲ್ಲಿ ನೀರು ಪೊತ್ತವ ನಾನು
ದಾಸರ ಮನೆಎಂಜೆಲೆಡೆ ತೆಗೆದವ ನಾನು
ದಾಸರುಂಡದ್ದು ಉಂಡು ಬೆಳೆದವ ನಾನು
ದಾಸರ ಮನೆ ಮುಂದೆ ರಾತ್ರಿ ಜಾಗರ ನಾನು
ದಾಸರ ನಂಬಿದ ದಾಸ ನಾನು

ದೋಷಿ ನಾನಾದಡೆ ದೋಷರಹಿತ
ಪುಣ್ಣ್ಯ ರಾಶಿ ಪುರಂದರದಾಸರ ಮ್ಯಾಲೆ ದಯಶರಧಿ ಇಟ್ಟು
ನೀ ಸಲಹು ಎನ್ನ ಪಾಶವ ಬಿಡಿಸುತ್ತ
ಲೇಸು ಪಾಲಿಪ ನಮ್ಮ ವಿಜಯವಿಠ್ಠಲರೇಯ
ಬೀಸಿ ಬೀಸಾಟದಿರು ಬಿಂಕದ ದೈವಾ

ದಾಸರ ಮನೆಯಲ್ಲಿ ವಾಸವಾಗಿದ್ದವ
ದಾಸರ ಬಳಿಯಲ್ಲಿ ಸೇರಿಕೊಂಡವನೇನೋ

Dasara Maneyali Vasavagiddava Song Lyrics In English

By : Shri Vijayadasaru

Dasara maneyalli vaasavagiddava
Dasara baliyalli serikondavaneno

Dasara maneyalli neeru pottava naanu
Dasara maneyenjalede tegedava naanu
Dasarundaddu undu beledava naanu
Dasar mane munde ratri jaagara naanu
Dasara nambida dasa naanu

Doshi naanadede dosharahita
Punya raashi purndaradasara myale daya sharadhi ittu
Ni salahu yenna pashava bidisutta
Lesu palipa namma vijavitthalareya
Bisi bisatadiru binkada daiva

Dasara maneyalli vaasavagiddava
Dasara baliyalli serikondavaneno

Download this lyrics in Kannada and English:

Leave a Comment