ಇದು ಒಂದು ತರಹ ಮಹಾರಥಿಗಳ ಯುಧ್ಧ. ಕೃತಕ ಬುದ್ಧಿಮತ್ತೆಯ ಯುಧ್ಧ.
ಅವು ಎರಡು ದೈತ್ಯ ಕಂಪನಿಗಳು. ಒಂದಕ್ಕಿಂತ ಒಂದು ಮೇಲೆ. ಇಬ್ಬರಿಗೂ ಕೃತಕ ಬುದ್ಧಿಮತ್ತೆಯ (AI ) ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ತವಕ.
ಜಯ ಯಾರದಾಗುತ್ತೋ ಕಾದು ನೋಡಬೇಕು.
ಹಾ , ನಾನು ಹೇಳಿದ ಆ ಎರಡು ದೈತ್ಯ ಕಂಪನಿಗಳು ಮೈಕ್ರೋಸಾಫ್ಟ್ ಹಾಗೂ ಗೂಗಲ್.
Table of Contents
ಕೃತಕ ಬುದ್ಧಿಮತ್ತೆ ಹಾಗೂ ಮೈಕ್ರೋಸಾಫ್ಟ್
ಚಾಟ್ GPT ಒಂದು ದಂತ ಕಥೆಯಾಗಿದೆ. ಇದು ಜಗತ್ತನ್ನೇ ಬದಲಾಯಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ.
ಅದು ಒಂದು ಸಹಾಯಕನ ರೀತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುತ್ತಿದೆ.
ಅನೇಕ ರೀತಿಯಲ್ಲಿ ಬಳಕೆಯಾಗುತ್ತಿದೆ. ಇದು ನಿಮಗೆ ಗೊತ್ತೇ ಇದೆ.
ಈ ಚಾಟ್ GPT ಅನ್ನು ಮೈಕ್ರೋಸಾಫ್ಟ್ ಕಂಪನಿ ಖರೀದಿಸಿದೆ. 10 ಬಿಲಿಯನ್ ಡಾಲರ್ ಕೊಟ್ಟು.
ಇಷ್ಟು ದೊಡ್ಡ ಮೊತ್ತದ ಹೂಡಿಕೆ ಒಂದು ಕಂಪನಿ ಮಾಡಬೇಕೆಂದರೆ, ಆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮಾರುಕಟ್ಟೆಯು ಬಹಳ ದೊಡ್ಡದೇ ಇರುತ್ತದೆ. ಹಾಗೆ ಊಹಿಸುವದು ಸರಿಯೇ.
ಕೃತಕ ಬುದ್ಧಿಮತ್ತೆ ಹಾಗೂ ಗೂಗಲ್
ಮೈಕ್ರೋಸಾಫ್ಟ್ ಇಷ್ಟು ದೊಡ್ಡ ಮೊತ್ತದ ಹೂಡಿಕೆ ಕೃತಕ ಬುದ್ಧಿಮತ್ತೆಯ ಮೇಲೆ ಮಾಡುತ್ತಿದೆ ಎಂದರೆ ಗೂಗಲ್ ಸುಮ್ಮನಿರಲು ಸಾಧ್ಯವೇ?
ಇಲ್ಲ.
ಚಾಟ್ GPT ಗೂಗಲ್ ನ ನಿದ್ದೆಯನ್ನೇ ತಪ್ಪಿಸಿರಬಹುದು. ಯಾಕೆಂದರೆ ಇದು ಗೂಗಲ್ ಸರ್ಚ್ ಎಂಜಿನ್ ನ ನೇರ ಎದುರಾಳಿ.
ಜನರು ಗೂಗಲ್ ನಲ್ಲಿ ಸರ್ಚ್ ಮಾಡದೇ ಚಾಟ್ GPT ಅನ್ನು ಉಪಯೋಗಿಸತೊಡಗಿದ್ದರೆ. ಇದು ಅದಕ್ಕೆ ದೊಡ್ಡ ಹೊಡೆತ. ಕಟ್ಟಾ ಎದುರಾಳಿ.
ಅದಕ್ಕೆಂದೇ ಗೂಗಲ್ ತನ್ನ ಹೊಸ ಕೃತಕ ಬುದ್ಧಿಮತ್ತೆಯ ಸಾಫ್ಟ್ ವೆರ್ ಅನ್ನು ಬಿಡುಗಡೆ ಮಾಡಲಿದೆ.
ಅದುವೇ ಬಾರ್ಡ್ (Bard).
ಏನಿದು ಗೂಗಲ್ ಬಾರ್ಡ್ (Bard) ?
ಬಾರ್ಡ್, ಚಾಟ್ GPT ಗೆ ನೇರ ಸ್ಪರ್ಧಿ.
ಬಾರ್ಡ್ ಅನ್ನು ಅಭಿವೃದ್ಧಿ ಮಾಡಿದ್ದು ಗೂಗಲ್ ನ Language Model for Dialogue Applications (LaMDA) ವೇದಿಕೆಯ ಮೇಲೆ.
LaMDA ಒಂದು ಭಾಷೆ ಹಾಗು ಸಂಭಾಷಣೆ ಗೆ ಉಪಯೋಗಿಸುವ ಪ್ಲಾಟ್ ಫಾರಂ.
ಇದನ್ನು ಗೂಗಲ್ ನ ಇಂಜಿನೀರ್ ಗಳು ಅಭಿವೃದ್ಧಿ ಮಾಡಿದ್ದಾರೆ.
ಗೂಗಲ್ ನ ಪ್ರಕಾರ,
“ಬಾರ್ಡ್ ಪ್ರಪಂಚದ ಜ್ಞಾನದ ವಿಸ್ತಾರವನ್ನು ನಮ್ಮ ದೊಡ್ಡ ಭಾಷಾ ಮಾದರಿಗಳ (ಲ್ಯಾಂಗ್ವೇಜ್ ಮಾಡೆಲ್)ಶಕ್ತಿ, ಬುದ್ಧಿವಂತಿಕೆ ಮತ್ತು ಸೃಜನಶೀಲತೆಯೊಂದಿಗೆ ಸಂಯೋಜಿಸಲು ಪ್ರಯತ್ನಿಸುತ್ತದೆ . ತಾಜಾ, ಉತ್ತಮ ಗುಣಮಟ್ಟದ ಪ್ರತಿಕ್ರಿಯೆಗಳನ್ನು ಒದಗಿಸಲು ಇದು ವೆಬ್‌ನಿಂದ ಮಾಹಿತಿಯನ್ನು ಪಡೆಯುತ್ತದೆ. ಬಾರ್ಡ್ ಸೃಜನಶೀಲತೆಗೆ ಒಂದು ಔಟ್ಲೆಟ್ ಆಗಿರಬಹುದು ಮತ್ತು ಕುತೂಹಲಕ್ಕಾಗಿ ಲಾಂಚ್ಪ್ಯಾಡ್ ಆಗಿರಬಹುದು”.
ಕೊನೆಗೆ
ಚಾಟ್ GPT ಬಿಡುಗಡೆ ಆದಮೇಲೆ ಕೃತಕ ಬುದ್ಧಿಮತ್ತೆ ಈಗ ಮತ್ತೆ ಮುನ್ನೆಲೆಗೆ ಬಂದಿವೆ. ಜಗತ್ತಿನ ದೈತ್ಯ ಕಂಪನಿಗಳು ಈ ತಂತ್ರಜ್ನ್ಯಾನದ ಮೇಲೆ ಹೂಡಿಕೆ ಮಾಡುತ್ತಿದ್ದರೆ. ಇದೊಂದು ಸ್ಪರ್ಧಾತ್ಮಕ ಬೆಳೆವಣಿಗೆ.
ಚಾಟ್ GPT ಅಥವಾ ಬಾರ್ಡ್ ನಂಥ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಫ್ಟ್ ವೆರ್ ಗಳಿಂದ ಮನುಕುಲಕ್ಕೆ ಒಳ್ಳೆಯದಾಗಬೇಕು. ಅಷ್ಟೇ ಆಶೆ. ಅಲ್ಲವೇ?!