FRUITS Portal

ಏನಿದು FRUITS ಪೋರ್ಟಲ್|What is FRUITS Karnataka Portal?

ನಿಮಗೆ ಫ್ರೂಟ್ಸ್ ಪೋರ್ಟಲ್ ಗೊತ್ತಾ ?
ಏನಪ್ಪಾ ಇದು ಫ್ರೂಟ್ಸ್ ಅಂತ ಕೇಳ್ತಾ ಇದ್ದಾರೆ?
ಫ್ರೂಟ್ಸ್ ಅಂದ್ರೆ ಹೆಣ್ಣು… ಪೋರ್ಟಲ್ ಅಂದ್ರೆ ವೆಬ್ಸೈಟ್…
ಫ್ರೂಟ್ಸ್ ಪೋರ್ಟಲ್ ಅಂದ್ರೆ ಹಣ್ಣಿನ ವೆಬ್ ಸೈಟ್ ಅಲ್ಲಿ ಹಣ್ಣು ಮಾರಾಟ ಮಾಡಬಹುದು ಅಥವಾ ಹಣ್ಣನ್ನ ಖರೀದಿ ಮಾಡಬಹುದು ಅಷ್ಟೇ ಅಲ್ವಾ?

ಇಲ್ಲಾ !!
ಹಣ್ಣಿನ ಪೋರ್ಟಲ್ ಬಗ್ಗೆ ಹೇಳ್ತಾ ಇಲ್ಲ.
ಈಗ ನಾನು ಮಾತಾಡ್ತಾ ಇರೋದು ರೈತರಿಗಾಗಿರುವ ಒಂದು ವೆಬ್ಸೈಟ್!!
ಇದು ಕರ್ನಾಟಕ ಸರ್ಕಾರದವರು ಮಾಡಿರುವಂತಹ ಒಂದು ಉತ್ತಮವಾದ ವೆಬ್ಸೈಟ್.

ಏನಿದು FRUITS ಪೋರ್ಟಲ್? (What is FRUITS Portal?)

FRUITS ಎಂದರೆ ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ.
FRUITS ನ ಪೂರ್ಣ ರೂಪ : Farmer Registration and Unified beneficiary Information System.

ಈ ಮೊದಲು ರೈತರು ಯಾವುದೇ ಸರ್ಕಾರಿ ಯೋಜನೆಗಳ ನೆರವು ಪಡೆಯಲು ಹಲವು ಇಲಾಖೆಗಳಿಗೆ ಅಲೆಯಬೇಕಿತ್ತು.
‘ನಾಳೆ ಬಾ’, ‘ಆಮೇಲೆ ಬಾ’ ಎಂಬ ಉತ್ತರಗಳು ಆ ಕಚೇರಿಗಳಿಂದ ಬರುತ್ತಿದ್ದವು. ಇದು ನಿಮ್ಮ ಅನುಭವಕ್ಕೆ ಬಂದಿರ ಬಹುದು ಅಲ್ಲವೇ ?

ಈ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ಸರಕಾರ FRUITS ಪೋರ್ಟಲ್ ಅನ್ನು ಬಿಡುಗಡೆಗೊಳಿಸಿದೆ.

ರಾಜ್ಯದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವ ಯಾವುದೇ ರೈತರು FRUITS ಕರ್ನಾಟಕ ಪೋರ್ಟಲ್ನಲ್ಲಿ ನೋಂದಣಿ ಮತ್ತು ಲಾಗಿನ್ ಮಾಡಬಹುದು.

ಹಾಗೆ ನೊಂದಣಿ ಆದ ರೈತರು ಬೇರೆ ಬೇರೆ ಇಲಾಖೆಗಳಿಗೆ ಅಲೆದಾಡುವ ಅಗತ್ಯ ಇಲ್ಲ.
ಈ ಪೋರ್ಟಲ್ನಲ್ಲಿರುವ ಮಾಹಿತಿ ಏಕೀಕೃತ ವಾಗಿದೆ. ಅಂದರೆ ಎಲ್ಲ ಸರಕಾರಿ ಇಲಾಖೆಗಳು ರೈತರ ಮಾಹಿತಿ ಪಡೆಯುತ್ತವೆ.

ಇದನ್ನು ಉಪಯೋಗಿಸಿ ಸರಕಾರಿ ಯೋಜನೆಗಳ ಫಲಾನುಭವಿಗಳಾಗಬಹುದು.

ಉದಾಹರೆಣೆಗೆ : ಒಂದೇ ವೆಬ್ ಸೈಟ್ ನಲ್ಲಿ ರೈತರ ಭೂಮಿಗೆ ಸಂಬಂಧಿಸಿದ ಪೂರ್ಣ ಮಾಹಿತಿಗಳು ಹಣಕಾಸಿನ ಸಂಸ್ಥೆಗಳಿಗೆ ದೊರೆಯಲಿವೆ.
ಇದರಿಂದ ಸಂಸ್ಥೆಗಳಿಗೆ ಕೇವಲ ಆಧಾರ್‌ ನಂಬರ್‌ ನೀಡುವ ಮೂಲಕ ಅರ್ಹ ರೈತರು ಕೆಲವೇ ನಿಮಿಷಗಳಲ್ಲಿ ಕೃಷಿ ಸಾಲ ಪಡೆಯಬಹುದಾಗಿದೆ.

FRUITS ಕರ್ನಾಟಕ ಪೋರ್ಟಲ್ ಯಾವುದು?

FRUITS ಪೋರ್ಟಲ್ ನ ಅಡ್ರೆಸ್ :FRUITS

ಇದು ಮೇಲೆ ತಿಳಿಸಿದಂತೆ ಕರ್ನಾಟಕ ಸರಕಾರದ ಒಂದು ಯೋಜನೆ.

FRUITS ಕರ್ನಾಟಕ ಪೋರ್ಟಲ್ ನ ಪ್ರಯೋಜನಗಳು ಯಾವವು? (What are the Benefits of FRUITS Portal Karnataka?)

FRUITS ಕರ್ನಾಟಕ ಪೋರ್ಟಲ್ ಒಂದು ಏಕೀಕೃತ ಅಪ್ಲಿಕೇಶನ್. ಈ ದತ್ತಾಂಶವನ್ನು (ಡೇಟಾ) ಬೇರೆ ಬೇರೆ ಸರಕಾರಿ ಇಲಾಖೆಗಳು ಉಪಯೋಗಿಸುತ್ತವೆ.
ಹೀಗಾಗಿ ನೀವು ಸರಕಾರಿ ಯೋಜನೆಗಳ ಫಲಾನುಭವಿಗಳಾಗಲು ಈ ಪೋರ್ಟಲ್ ನಲ್ಲಿ ನೊಂದಣಿ (ಒಂದು ಬಾರಿ ಮಾತ್ರ) ಆದರೆ ಸಾಕು. ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.

ಹಲವು ಪ್ರಯೋಜನಗಳು :

  • ಸರಕಾರ ಪೋರ್ಟಲ್ ಮೂಲಕ ರೈತರ ಡೇಟಾಬೇಸ್ ಅನ್ನು ನಿರ್ವಹಿಸುತ್ತದೆ ಹಾಗೂ ಮೇಲ್ವಿಚಾರಣೆ ಮಾಡುತ್ತದೆ. ಇದರಿಂದ ಪ್ರಭಾವಿಗಳ, ಏಜಂಟರ ಮೊರೆಹೋಗಬೇಕಾಗಿಲ್ಲಾ.
  • ಹಲವಾರು ಯೋಜನೆಗಳ ಪ್ರಯೋಜನವನ್ನು ಪಡೆಯಲು ರೈತರು ತಮ್ಮ ದಾಖಲೆಗಳನ್ನು ಸಲ್ಲಿಸಲು ವಿವಿಧ ಇಲಾಖೆಗಳಿಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲ.
  • FRUITS ಉಪಕ್ರಮದಿಂದ ರೈತರು ಬಹಳಷ್ಟು ಸಮಯ ಮತ್ತು ಹಣವನ್ನು ಉಳಿಸಬಹುದು.
  • FRUITS ನಲ್ಲಿಯ ಪಾಲುದಾರರು :ಕೃಷಿ ಇಲಾಖೆ , ಮೀನುಗಾರಿಕೆ ಇಲಾಖೆ , ಪಶುಸಂಗೋಪನಾ ಇಲಾಖೆ,ರೇಷ್ಮೆಇಲಾಖೆ ಮತ್ತು ತೋಟಗಾರಿಕಾ ಇಲಾಖೆ.ಹೀಗಾಗಿ ನೀವು ಈ ಯಾವುದೇ ಇಲಾಖೆಯ ಸಂಭಂದಿಸಿದ ಚಟುವಟಿಕೆ ಮಾಡುತ್ತಿದ್ದಾರೆ ಒಂದು ಬಾರಿ ನೋಂದಾಯಿಸಿದರೆ ಸಾಕು. ಎಲ್ಲ ಯೋಜನೆಗಳ ಫಲ ಅನುಭವಿಸಬಹುದು.

FRUITS ಪೋರ್ಟಲ್ ನಲ್ಲಿ ನೊಂದಾವಣೆ ಮಾಡಲು ಅರ್ಹತೆಗಳು ಯಾವವು? (Eligibility for Registering in FRUITS Portal)

FRUITS ಪೋರ್ಟಲ್ ನಲ್ಲಿ ನೊಂದಾವಣೆ ಮಾಡಲು ಕೆಲವು ಅರ್ಹತೆಗಳು ಇರಬೇಕು.
ಅವು ಯಾವಾವವೆಂದರೆ:
1.ಅರ್ಜಿದಾರರು ಕರ್ನಾಟಕದ ವಾಸಿಗಳಾಗಿರಬೇಕು
2.ರೈತರಾಗಿರಬೇಕು

FRUITS ಕರ್ನಾಟಕ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವವು ? (Which Are The Documents Required For FRUITS Portal Registration ?)

FRUITS ಕರ್ನಾಟಕ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
1.ಆಧಾರ ಕಾರ್ಡ್
2.ನಿವಾಸ ಪ್ರಮಾಣಪತ್ರ
3.ವಯಸ್ಸಿನ ಪುರಾವೆ
4.ಭೂಮಿಯ ವಿವರಗಳು
5.ಆದಾಯ ಪ್ರಮಾಣಪತ್ರ
6.ಬ್ಯಾಂಕ್ ಖಾತೆ ವಿವರಗಳು
7.ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
8.ಮೊಬೈಲ್ ನಂಬರ್

FRUITS ಕರ್ನಾಟಕ ಪೋರ್ಟಲ್‌ನಲ್ಲಿ ಹೇಗೆ ನೊಂದಾವಣೆ ಮಾಡಬೇಕು? (How To Register In FRUITS Portal?)

FRUITS ಪೋರ್ಟಲ್‌ನಲ್ಲಿ ರೈತರು ಹೀಗೆ ನೊಂದಾವಣೆ ಮಾಡಬೇಕು.

  • ಈ ಲಿಂಕನ್ನು ಕ್ಲಿಕ್ ಮಾಡಿರಿ : https://fruits.karnataka.gov.in/
  • FRUITS ಡ್ಯಾಶ್ ಬೋರ್ಡ್ ಕಿಟಕಿ ಬಂದರೆ ‘ಸ್ಕಿಪ್’ ಮೇಲೆ ಕ್ಲಿಕ್ ಮಾಡಿರಿ
  • ಕನ್ನಡಲ್ಲಿ ವೆಬ್ ಸೈಟ್ ಬೇಕಾದರೆ ‘Kannada ‘ ಲಿಂಕ್ ಮೇಲೆ ಕ್ಲಿಕ್ ಮಾಡಿರಿ
  • FRUITS ಡ್ಯಾಶ್ ಬೋರ್ಡ್ ಕಿಟಕಿ ಬಂದರೆ ‘ಸ್ಕಿಪ್’ ಮೇಲೆ ಕ್ಲಿಕ್ ಮಾಡಿರಿ
  • ಲಾಗಿನ್ ಅಥವಾ ನೋಂದಣಿ ಆಗಲು ‘ ನಾಗರಿಕರು ಪ್ರವೇಶ ಮಾಡಿ’ ಲಿಂಕ್ ಕ್ಲಿಕ್ ಮಾಡಿರಿ
  • ನೊಂದಣಿ ಮಾಡಲು ‘ನಾಗರಿಕರ ನೋಂದಣಿ’ ಬಟನ್ ಕ್ಲಿಕ್ ಮಾಡಿರಿ
  • ಮುಂದಿನ ಕಿಟಕಿ (ವೆಬ್ ಪೇಜ್) ನಲ್ಲಿ ಸೂಕ್ತ ಕಾಲಂನಲ್ಲಿ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿರಿ
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ‘Submit’ ಬಟನ್ ಅನ್ನು ಕ್ಲಿಕ್ ಮಾಡಿ
  • ನಿಮ್ಮ ಪರದೆಯ ಮೇಲೆ ಮುಂದಿನ ಪೇಜ್ ಬರುತ್ತದೆ
  • ಈಗ ನಿಮ್ಮ ಆಧಾರ್ ಸಂಖ್ಯೆ, ಹೆಸರು (ನೀಡಿರುವ ಭಾಷೆಯ ಆಯ್ಕೆಯಲ್ಲಿ), ವಯಸ್ಸು, ಹುಟ್ಟಿದ ದಿನಾಂಕ, ಲಿಂಗ, ಗುರುತಿಸುವಿಕೆಯ ಪ್ರಕಾರ, ಕನ್ನಡದಲ್ಲಿ ಗುರುತಿಸುವಿಕೆಯ ಹೆಸರು, ಇಂಗ್ಲಿಷ್‌ನಲ್ಲಿ ಗುರುತಿಸುವಿಕೆಯ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ
  • ಇದಲ್ಲದೆ, ಜಿಲ್ಲೆ, ಗ್ರಾಮ ಮತ್ತು ಭೂಮಿಯ ಸ್ಥಿತಿಯನ್ನು ನಮೂದಿಸಲು ಇದು ಸಹಾಯ ಮಾಡುತ್ತದೆ, ಅದನ್ನು ಸರಿಯಾಗಿ ಭರ್ತಿ ಮಾಡಬೇಕು
  • ಇತರ ವಿವರಗಳ ಪೆಟ್ಟಿಗೆಯಲ್ಲಿ ನಿಮ್ಮ ಜಾತಿ, ರೈತ ಪ್ರಕಾರ, ವಿಶೇಷ-ಚೇತನ ಸ್ಥಿತಿ ಮತ್ತು ಅಲ್ಪಸಂಖ್ಯಾತ ಸ್ಥಿತಿಯನ್ನು ನೀವು ಸೂಚಿಸಬೇಕು
  • ನಿಮ್ಮ ಗುರುತಿಸುವ ಮಾಹಿತಿಯನ್ನು ನಮೂದಿಸಿದ ನಂತರ, ನೀವು ನಿಮ್ಮ EPIC ಮತ್ತು ರೇಷನ್ ಕಾರ್ಡ್ ಮಾಹಿತಿಯನ್ನು ನಮೂದಿಸಬೇಕು
  • ಅಂತಿಮವಾಗಿ, ಜಮೀನು ಮಾಲೀಕರ ಮಾಹಿತಿ, ನಿಮ್ಮ ಖಾತೆಯ ಮಾಹಿತಿ, ವಿಳಾಸ ಪುರಾವೆಗಳನ್ನು ನಮೂದಿಸಬೇಕು ಮತ್ತು ವಿಳಾಸ ಪುರಾವೆಗಳನ್ನು ಅಪ್‌ಲೋಡ್ ಮಾಡಬೇಕು
  • ನಂತರ ನೀವು ‘Submit ‘ ಬಟನ್ ಅನ್ನು ಕ್ಲಿಕ್ ಮಾಡಬೇಕು

Leave a Comment

Your email address will not be published. Required fields are marked *