ಮಧ್ವನಾಮ | Madhwanama Lyrics | Kannada | English
ರಚನೆ : ಶ್ರೀ ಶ್ರೀ ಶ್ರೀಪಾದರಾಜರು Madhwanama Lyrics In Kannada ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ || ಪ. || ಆವ ಕಚ್ಚಪ ರೂಪದಿಂದ ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು ಆ ವಾಯು ನಮ್ಮ ಕುಲ ಗುರುರಾಯನು || 1 || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು || 2 || ಕರಣಾಭಿಮಾನಿ ಸುರರು ದೇಹವ …