ರಚನೆ : ಕುವೆಂಪು
ರಾಷ್ಟ್ರಕವಿ ಕುವೆಂಪು ಅವರ ಸುಂದರ ಕಾವ್ಯ ‘ಸ್ವರ್ಗವೇ ಭೂಮಿಯೊಳಲಿರದಿರೆ’.
‘ಸ್ವರ್ಗವೇ ಭೂಮಿಯೊಳಲಿರದಿರೆ’ ಕಾವ್ಯದಲ್ಲಿ ಕುವೆಂಪು ಅವರು ಭೂಮಿಯ ಸುಂದರತೆಯನ್ನು ಬಣ್ಣಿಸಿ ಸ್ವರ್ಗವೇ ಭೂಮಿಯಲ್ಲಿದೆ ಎಂದು ಹೇಳಿದ್ದಾರೆ.
Table of Contents
ಶ್ರೀ ಕುವೆಂಪು ಅವರ ಬಯಾಗ್ರಫಿ । ಜೀವನ ಚರಿತ್ರೆ (Biography of Kuvempu In Kannada)
ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (Kuppalli Venkatappa Puttappa).
ಜನನ: 29-ಡಿಸೆಂಬರ್1904
ಹುಟ್ಟಿದ ಸ್ಥಳ : ಹಿರೇಕೊಡಿ ಚಿಕ್ಕಮಗಳೂರು, ಕರ್ನಾಟಕ
ತಾಯಿ : ಸೀತಮ್ಮ
ತಂದೆ : ವೆಂಕಟಪ್ಪ
ಶಿಕ್ಷಣ : ಮೊದಲು ಮನೆಯಲ್ಲಿಯೇ ಪಾಠ. ನಂತರ ತೀರ್ಥಹಳ್ಳಿಯ ಆಂಗ್ಲೋ-ವೆರ್ನಾಕ್ಯುಲರ್ ಶಾಲೆ ಸೇರಿದರು. ನಂತರ ಮೈಸೂರಿನ ವೆಸ್ಲೆಯನ್ ಹೈಸ್ಕೂಲ ನಲ್ಲಿ ಪ್ರೌಢ ಶಿಕ್ಷಣ ಹೊಂದಿದರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ ಪಡೆದರು.
ಹೆಂಡತಿ : ಹೇಮಾವತಿ (ಮದುವೆ : 30-ಏಪ್ರಿಲ್-1937)
ಮಕ್ಕಳು : ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗು ತರಿಣಿ
ವೃತ್ತಿ : ಉಪನ್ಯಸಕರು (ಮಹಾರಾಜಾ ಕಾಲೇಜು, ಮೈಸೂರು),ಸಹಾಯಕ ಪ್ರಾಧ್ಯಾಪಕರು,ಪ್ರಾಧ್ಯಾಪಕರು,ಪ್ರಾಂಶುಪಾಲರು (ಸೆಂಟ್ರಲ್ ಕಾಲೇಜು, ಬೆಂಗಳೂರು) ಕೊನೆಗೆ ಉಪಕುಲಪತಿಗಳು (ಮೈಸೂರು ವಿಶ್ವವಿದ್ಯಾಲಯ)
ಕೃತಿಗಳು : ಮಹಾಕಾವ್ಯಗಳು ,ಕಾದಂಬರಿಗಳು, ನಾಟಕಗಳು, ಕಥೆಗಳು, ನಿಬಂಧಗಳು, ವಿಮರ್ಶೆಗಳು, ಜೀವನಚರಿತ್ರೆಗಳು, ಕವನಗಳು, ಅನುವಾದಗಳು
ಪ್ರಶಸ್ತಿಗಳು :
ಜ್ನ್ಯಾನಪೀಠ ಪ್ರಶಸ್ತಿ (‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ 1967)
ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955)
ಪದ್ಮಭೂಷಣ (1938)
ಪದ್ಮ (1987)
ಪದ್ಮವಿಭೂಷಣ (1988)
ಕರ್ನಾಟಕ ರತ್ನ (1992)
ಮರಣ : 11-ನವೆಂಬರ್-1994
Swargave Bhoomiyolaradire Song Lyrics In Kannada
ಸ್ವರ್ಗವೇ ಭೂಮಿಯೊಳಲಿರದಿರೆ ನೀನು
ಮೇಲೆಲ್ಲಿಯು ನೀನಿಲ್ಲಾ
ಸ್ವರ್ಗವೇ ಭೂಮಿಯೊಳಲಿರದಿರೆ ನೀನು
ಮೇಲೆಲ್ಲಿಯು ನೀನಿಲ್ಲಾ
ದೇವತೆಗಳು ನಾವಾಗಲಿರದಿರೆ
ದೇವತೆಗಳು ಇನ್ನಿಲ್ಲಾ
ಅಪ್ಸರೆಯರು ನಾವಾಗಲಾರದಿರೆ
ಅಪ್ಸರೆಯರು ಬೇರಿಲ್ಲಾ
ಸ್ವರ್ಗವೇ ಭೂಮಿಯೊಳಲಿರದಿರೆ ನೀನು
ಮೇಲೆಲ್ಲಿಯು ನೀನಿಲ್ಲಾ
ಮೊರೆ ಮೊರೆಯುತ ಓಡುವ ಈ ತೊರೆಯಿರೆ
ತೆರೆಗಳ ತುದಿಯಲಿ ತಿರುಗುವ ನೊರೆಯಿರೆ
ಹಸಿರು ಬನಗಳಲಿ ಹೂಬಿಸಿಲೊರಗಿರೆ
ಕೋಮಲ ರವಿಯಿರೆ ನಾಕವು ಈ ಧರೆ
ಸ್ವರ್ಗವೇ ಭೂಮಿಯೊಳಲಿರದಿರೆ ನೀನು
ಮೇಲೆಲ್ಲಿಯು ನೀನಿಲ್ಲಾ
ಸುಗ್ಗಿಯ ಸೊಬಗಲಿ ತಿಂಗಳ ಬೆಳಕಳಿ
ಸಗ್ಗವು ಬಿದ್ದಿರುವದು ಅಲ್ಲಲ್ಲಿ
ಕಬ್ಬಿಗನಿಂಚರ ಸೊದೆಯೊಂದು ಚೆಲ್ಲಿ
ಸಗ್ಗವ ಮಾಲ್ಪನು ಈ ಭುವಿಯಲ್ಲಿ
ಸ್ವರ್ಗವೇ ಭೂಮಿಯೊಳಲಿರದಿರೆ ನೀನು
ಮೇಲೆಲ್ಲಿಯು ನೀನಿಲ್ಲ
Swargave Bhoomiyolaradire Song Lyrics In English
Svargave bhumiyolaliradire neenu
melelliyu neenillaa
Svargave bhumiyolaliradire neenu
melelliyu neenillaa
Devategalu naavaagaliradire
Devategalu innillaa
Apsareyaru naavaagalaaradire
apsareyaru berillaa
Svargave bhumiyolaliradire neenu
melelliyu neenillaa
More moreyuta oduva ee toreyire
Teregala tudiyali tiruguva noreyire
hasiru banagalali hoobisiloragire
komala Raviyire naakavu ee Dhare
Svargave bhumiyolaliradire neenu
melelliyu neenillaa
Suggiya sobagali tingala belakali
saggavu biddiruvadu allalli
kabbiganinchara sodeyondu chelli
saggava maalpanu ee bhuviyalli
Svargave bhumiyolaliradire neenu
melelliyu neenilla