ಸೌತೆಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ?
ಸೌತೆಕಾಯಿ ಸರ್ವೇ ಸಾಮಾನ್ಯ ಆಗಿದ್ರೂ ಸಹ, ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.
ಸೌತೆಕಾಯಿಯಲ್ಲಿರುವ ಪೌಷ್ಟಿಕಾಂಶಗಳು:
ಒಂದು 11-ಔನ್ಸ್ (300 ಗ್ರಾಂ) ಸಿಪ್ಪೆಸುಲಿಯದ, ಕಚ್ಚಾ ಸೌತೆಕಾಯಿ ಕೆಳಗಿನ ಪೌಷ್ಟಿಕಾಂಶಗಳನ್ನು ಹೊಂದಿದೆ:
ಕ್ಯಾಲೋರಿಗಳು: | 45 |
ಒಟ್ಟು ಕೊಬ್ಬು | 11 ಗ್ರಾಂ |
ಪ್ರೋಟೀನ್: | 2 ಗ್ರಾಂ |
ಫೈಬರ್: | 2 ಗ್ರಾಂ |
ವಿಟಮಿನ್ C: | RDI ನ 14% |
ವಿಟಮಿನ್ K: | RDI ನ 62% |
ಮೆಗ್ನೀಸಿಯಮ್: | RDI ನ 10% |
ಪೊಟ್ಯಾಸಿಯಮ್: | RDI ನ 13% |
ಮ್ಯಾಂಗನೀಸ್: | RDI ನ 12% |
ನಾವು ಸೌತೆಕಾಯಿಯಲ್ಲಿರುವ ಔಷಧೀಯ ಉಪಯೋಗಗಳನ್ನು ಆಗಲೇ ನೋಡಿದ್ದವೇ. ಮೊತ್ತೊಮ್ಮೆ ಬೇಕಾದರೆ ಇಲ್ಲಿ ನೋಡಿರಿ.
ಇಂತಹ ಉಪಯೋಗಕಾರಿ ಸೌತೆಕಾಯಿಯನ್ನು ಬಳಸಿ ಒಂದು ಸರಳವಾದ ಭಜ್ಜಿಯನ್ನು ಮಾಡೋಣ.
ನಿಮಗೆ ಯಾವದಾದರೂ ಸೈಡ್ ಡಿಶ್ ಅಥವಾ ಪಲ್ಲೆ ಮಾಡಲು ಟೈಮ್ ಇಲ್ಲವಾ?
ಹಾಗಾದರೆ ಸೌತೆಕಾಯಿ ಉಪಯೋಗಿಸಿ ಅತೀ ಸುಲಭವಾಗಿ 5-6 ನಿಮಿಷದಲ್ಲಿ ಭಜ್ಜಿ ಮಾಡಬಹುದು.
ನೀವು ಬ್ಯಾಚುಲರ್ ಆಗಿದ್ರಂತೂ ಇದು ನಿಮಗೆ ಮಾಡಲು ಸುಲಭ.
ಸೌತೆಕಾಯಿ ಭಜ್ಜಿ ಮಾಡಲು ಬೇಕಾಗುವ ಸಾಮಗ್ರಿಗಳು:
1.ಸೌತೆಕಾಯಿ
2.ಹಸಿಮೆಣಸಿನಕಾಯಿ
3.ಮೊಸರು
4.ಕೊತಂಬರಿ ಸೊಪ್ಪು
5.ಕರಿಬೇವು ಸೊಪ್ಪು
6.ಜೀರಿಗೆ ಇಂಗು
7.ಅರಿಶಿನಪುಡಿ
8.ಉಪ್ಪು
9.ಎಣ್ಣೆ
ಸೌತೆಕಾಯಿ ಭಜ್ಜಿ ಮಾಡುವ ವಿಧಾನ:
1. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕೊಚ್ಚಿಕೊಳ್ಳಿ
2. ಒಂದು ಬಟ್ಟಲಿಗೆ ಕೊಚ್ಚಿದ ಸೌತೆಕಾಯಿ ಹಾಕಿಕೊಳ್ಳಿ
3. ಅದಕ್ಕೆ ಅರ್ಧ ಬಟ್ಟಲು ಮೊಸರು ಹಾಕಿ
4. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ
5. ಹಸಿಮೆಣಸಿನಕಾಯಿ ಹೆಚ್ಚಿ ಬಟ್ಟಲಿಗೆ ಹಾಕಿ
6. ಕೊತ್ತಂಬರಿ ಸೊಪ್ಪು ಹಾಕಿ
7. ಒಗ್ಗರಣೆ ಮಾಡಿ ಸೌತೆಕಾಯಿ ಬಟ್ಟಲಿಗೆ ಹಾಕಿ ಕೈ ಆಡಿಸಿ.ಮೇಲೆ ಬೇಕಾದರೆ ಪುದಿನ ಎಲೆ ಇಡಿ
8. ಈಗ ಚಪಾತಿ, ರೊಟ್ಟಿ ಅಥವಾ ಪುಲಾವ್, ಬಿಸಿಬೇಳೆ ಭಾತ್ ಜೊತೆ ಈ ಗೊಜ್ಜನ್ನು ಬಾಡಿಸಿಕೊಳ್ಳಿ
9. ಅಷ್ಟೇ !!
Very nice!
Thank you !