ಶ್ರಾವಣಾ | ದ.ರಾ.ಬೇಂದ್ರೆ | Shravana | Da.Ra. Bendre | Kannada

ರಚನೆ : ಡಾ || ದ.ರಾ.ಬೇಂದ್ರೆ | ಅಂಬಿಕಾತನಯದತ್ತ

Here you fill enjoy Da Ra Bendre bhavageethe lyrics in Kannada.

ಭೂಮಿ ತಾಯಿಯ ಚೊಚ್ಚಿಲ ಮಗ ಕವನ ನೋಡಿ

Shravana Poem Detail | ಶ್ರಾವಣ ಕವಿತೆಯ ಮಾಹಿತಿ

ಕವಿತೆಶ್ರಾವಣ
ರಚನೆಡಾ ।। ದ.ರಾ.ಬೇಂದ್ರೆ । ಅಂಬಿಕಾತನಯದತ್ತ
ವಿವರಶ್ರಾವಣ ಮಾಸದ ಮಳೆ ಬರುವ ಸಮಯದ ವರ್ಣನೆ
ಕೆಟಗರಿಭಾವಗೀತೆಗಳು
Da.Ra.Bendre Poems Lyrics in Kannada – Shravana

Da.Ra.Bendre Poems – Shravana in Kannada

ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು
ಆs ಹಸಿರ ಒಳಗೆ ಹೊರಗೆ
ನೀರ ಬೆಳಕು ತುಣುಕು ಮಿಣುಕು
ಅಲ್ಲಿನಿಂದ ಬಂದೆಯಾ !
ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ ?
ಏಕೆ ಬಂದೆ ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀನು ಬಂದ ಕಾರಣಾ

ಪಡುವ ದಿಕ್ಕಿನಿಂದ ಹರಿವಗಾಳಿ
ಕುದುರೆಯನ್ನು ಏರಿಪರ್ಜನ್ಯ ಗೀತವನ್ನು
ಹಾsಡುತ್ತ ಬಂದಿತು

ಬನದ ಮನದ ಮೇಳವೆಲ್ಲ
ಸೋs ಎಂದು ಎಂದಿತು
ಬಿದಿರ ಕೊಳಲ ನುಡಿಸಿತು
ಮಲೆಯ ಹೆಳಲ ಮುಡಿಸಿತು
ಬಳ್ಳಿ ಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು
ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿದ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ  
ಸೂಸು ಸೊಗಸು ಆನಂದ

ನೀನು ನಡೆದ ಬಂದ ಮಾಸ
ಹೆಣ್ಗೆ ತವರು ಮನೆಯ ಮಾಸ 
ಬರಿಯ ಆಟ, ಬರಿಯ ಹಾಸ
ಮಧುಮಾಸಕು ಹಿರಿದದು
ಮಧುರಮಾಸ ಸರಿಯದು

ಮೋಡಗವಿದ ಕಣ್ಣಿನವನು
ಮುದಿಯ  ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ
ಕಣ್ಣು ಕೆನ್ನೆ ತೊಯ್ಸಿದಾ
ಬಿಸಿಲಹಣ್ಣ ತಿಂದು ಹೊತ್ತು
ಹೆತ್ತ ನಿನ್ನ ಭೂಮಿತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗು ನನೆಸಿತು
ಅಂತೆ ಬಂದೆ ಬಾರಣಾ 
ಬಾರೊ ಮಗುವೆ ಶ್ರಾವಣಾ!

3 thoughts on “ಶ್ರಾವಣಾ | ದ.ರಾ.ಬೇಂದ್ರೆ | Shravana | Da.Ra. Bendre | Kannada”

Leave a Comment