ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre

“ಭೂಮಿತಾಯಿಯ ಚೊಚ್ಚಿಲಮಗ”, ದ.ರಾ.ಬೇಂದ್ರೆಯವರು ಬರೆದ ಕನ್ನಡ ಕವನ.
“ಭೂಮಿತಾಯಿಯ ಚೊಚ್ಚಿಲಮಗ” ಬೇಂದ್ರೆಯವರ (ಅಂಬಿಕಾತನಯದತ್ತ) ‘ನಾದಲೀಲೆ’ ಕವನ ಸಂಕಲನದಿಂದ ಆರಿಸಲಾಗಿದೆ.

ಬೇಂದ್ರೆ ಅವರ “ಶ್ರಾವಣ” ಕವನ ಓದಿ

‘ನಾದಲೀಲೆ’ 1938 ರಲ್ಲಿ ಪ್ರಕಾಶನಗೊಂಡಿತ್ತು.

Bhoomitayiya Chocchila Maga Poem Detail | ಭೂಮಿತಾಯಿಯಾ ಚೊಚ್ಚಿಲ ಮಗ ಕವಿತೆಯ ಮಾಹಿತಿ

ಕವಿತೆಭೂಮಿತಾಯಿಯಾ ಚೊಚ್ಚಿಲ ಮಗ
ರಚನೆಡಾ ।। ದ.ರಾ.ಬೇಂದ್ರೆ । ಅಂಬಿಕಾತನಯದತ್ತ
ವಿವರಅನ್ನದಾತ ರೈತನ ಜೀವನದ ವರ್ಣನೆ
ಕೆಟಗರಿಭಾವಗೀತೆಗಳು
Da.Ra.Bendre Poems Lyrics in Kannada – Shravana

ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?


ಮುಗಿಲೆಂಬುವುದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು !
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ !
ಮೋರೆಯು ಸಾವನು
ಅಣಕಿಸುತಿಹುದು !
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣಾ.


ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು !
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೊ ಬಂದು !
ಸಾವಿನ ಬೆಳಕದು
ಕಾಣುವದೆಂದು ?
ಎಂದೋ ಎಂದೋ
ಎಂದೋ ಎಂದು
ಕನವರಿಸುವದು
ತಳಮಳಿಸುವದು !

Bhumitayiya Chocchila Maga” By Da.Ra.Bendre in English

“Bhumitayiya Chocchila Maga” is Kannada poem written by Da.Ra.Bendre.

This poem is from the book ‘Naadaleele’ published in 1938.

In “Bhumitayiya Chocchil Maga” poem Da.Ra.Bendre (Ambikatanayadatta) explains the life and difficulties faced by farmers.

Bhūmitāyiyā
coccila magananu
kaṇteredom’me nōḍ’̔ihirēnu?

Mugilembuvudu kisiditu hallu!
Bandā beḷeyu miḍiciya mēvu;
bittiddāyitu
uttiha maṇṇu!
Dinavū san̄jege
bevarina jaḷaka,
usirina kūḷige
kambani nīru!
Hoṭṭeyu hattitu
bennina bennu!
Edeya gūḍinoḷu
cinteya gūgi!
Miduḷina mūlege
loṭa loṭa halli!
Mōreyu sāvanu
aṇakisutihudu!
Koraḷige hattide
sālada śūla!
Ādaru baradō
yamanige karuṇa
usirige om’me jananā maraṇā.

Naragaḷa nūlina
pare pare cīlā
tere tereyāgide
jirijiriyāgide;
adaroḷagondu
elubina baleyu!
Ṭuku ṭuku
ḍugu ḍugu
uliyuva naraḷuva
jīvada jantuvu
horaḷuta uruḷuta;
janumavembuvā
kattaleyalli
biddide oḷage
hēgo bandu!
Sāvina beḷakadu
kāṇuvadendu?
Endō endō endō
endu kanavarisuvadu
taḷamaḷisuvadu!

1 thought on “ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre”

Leave a Comment