ರಚನೆ : ಪ್ರಿಯಾ ದೀಕ್ಷಿತ್
ಶ್ರೀಮತಿ ಪ್ರಿಯಾ ದೀಕ್ಷಿತ್ ಅವರು ಹವ್ಯಾಸಿ ಬರಹಗಾರರರು, ಕವಿಯಿತ್ರಿ .
ಅವರ ಬರವಣಿಗೆಯಲ್ಲಿ ಧಾರವಾಡ ಭಾಷೆಯ ಘಮ ಎದ್ದು ಬರುವ ಹಾಗಿರುತ್ತದೆ.
Table of Contents
ತೊರೆದು ಸಾವಿರ ಚಿಂತೆ
ಬಿಸಿಲ ಬಿಸಿ ಋಣ ಮುಗಿದು
ಮಳೆಗೆ ಖೊ ಎಂಬಂತೆ
ಬಾನ ಹೆಬ್ಬಾಗಿಲಲಿ
ಅದ್ದೂರಿ ಸ್ವಾಗತದಂತೆ
ದಟ್ಟ ಮೋಡಗಳಾವರಿಸಿ
ನೋಡುನೋಡುವ ಮೊದಲೇ ಕಪ್ಪುಕತ್ತಲಿರಿಸಿ
ಬಿರುಸಿನ ಗಾಳಿಯ ಆರ್ಭಟದ ಮಧ್ಯೆ
ಹೆಪ್ಪೊಡೆದ ಆಕಾಶ ಸುರಿಸಿತ್ತು ಭೋರ್ಗರೆವ ಮುಂಗಾರು ಮಳೆಯ!
ಥೇಟ್ ನನ್ನ ನೆಚ್ಚಿನ ಕವಿಗಳ ಸಾಲಿನಂತೆ…
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ…ಎಂಬಂತೆ
ಮೇ ಫ್ಲಾವರ್
ಬೇಸಿಗೆ ರಜೆಯಲ್ಲಿ ಭೇಟಿಗೆ
ಬರುವ ಮೊಮ್ಮಕ್ಕಳಂತೆ
ವರುಷಕ್ಕೊಮ್ಮೆ ಬಂದು ಹೋಗುವ
ಎನ್ ಆರ್ ಆಯ್ ಗಳಂತೆ
ಹಣ್ಣುಗಳ ರಾಜ ಅಲ್ಲಲ್ಲಿ
ಘಮಘಮಿಸಿ
ತಿನಿಸಿ ಉಣಿಸಿ ಮರೆಯಾಗುವಂತೆ
ಎಲ್ಲಿಂದಲೋ ತಂದು
ಚಿಕ್ಕ ಪಾಟಲಿ ಊರಿದ ತುಣುಕು
ಸತತ ಮೂರು ವರ್ಷದಿಂದ
ಮೇ ಫ್ಲಾವರ್ ,
ಮಳೆಯ ಮರುದಿನದ ತಣ್ಣನೆಯ ಬೆಳಗಿನಲಿ
ಮತ್ತೆ ಅರಳಿ ನಿಂತಿದೆ
ಥೇಟ್ ಮದುವೆ ಮರುದಿನ
ಮುಗುಳ್ನಗುತಿರುವ ಮದುಮಗಳಂತೆ!!
ಸಣ್ಣಮಳೆ
ಎದ್ದೊಡನೆ ಧಗೆಧಗೆ ಉರಿಯ
ಮೋಡ ಅರಝಳದ ರಗಳೆ
ಎನೂ ಮಾಡದೆಯೆ
ಆಯಾಸ ಬೇಸರದಿ
ಉಶ್sss ಅನ್ನುವ ಸುಸ್ತುಕಳೆ
ಕಪ್ಪಾಗಿ ಮುಗಿಲು ಜೋರಾಗಿ
ಬೀಸುವ ಬಿರುಗಾಳಿಯೊಡನೆ ಬೆಳಕ್ಮಿಂಚಿನಲಿ
ಗುಡುಗುಡುತ ಹನಿಯೊಡೆಯುವ ರಣಕಹಳೆ
ಮೈಮನವ ಆಹ್ಲಾದಿಸಲು
ನಮ್ಮೂರಲಿ ಉದುರುತಿದೆ
ತಣ್ಣನೆಯ ಸಣ್ಣಮಳೆ
ಮಲ್ಲಿ
ಬಹಳ ಹಿಂದೆ
ಬಿಟ್ಟು ಬಂದ ದಾರಿಗೆ
ಮತ್ತೆಂದೊ ಕ್ಷಣದಿ ತಿರುಗುವಲಿ
ಅಗಲಿದ ಜೀವಗಳ ಆಪ್ತ ಸ್ಮರಣೆಯ
ನಡುವೆಯೂ
ಕಳೆದ ಹುಸಿ ಹುಡುಗಾಟದ ನಮ್ದಿನಗಳ
ನಗೆ ನೆನಪು ಮೆಲುಕಿನಲಿ
ಮನದ ಭಾವವು
ಥೇಟ್
ಬೆಳಗಿನ ತುಂತುರು , ಎಳೆ ಬಿಸಿಲಿನ
ಮಧ್ಯೆ ಅರಳಿದ
ಶುಭ್ರ ಬಿಳುಪಿನ ಘಮದ ಮಲ್ಲಿ!!
damn good!
Yes. Its great