ರಚನೆ : ಶ್ರೀ ಪ್ರಸನ್ನವೆಂಕಟದಾಸರು
ಶ್ರೀ ಪ್ರಸನ್ನವೆಂಕಟದಾಸರು ರಚಿಸಿದ ‘ಸ್ಮರಿಸು ಮನವೇ ಸ್ಮರಿಸು’ ಹಾಡಿನ ಲಿರಿಕ್ಸ್ ನೋಡಿರಿ
Entha Shrimantano Song Lyrics In Kannada
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
Wonderful. By any chance do you have these lyrics in English or Telugu as well? Kindly do publish it.
ಅದ್ಭುತ! ಅಮೋಘ! ಹಾಡಿನಲ್ಲಿ ನೂತನ ರೀತಿಯೊಂದೇ ಅಲ್ಲ, ಭಕ್ತಿ ಭಾವದ ಭವ್ಯತೆ ಇದೆ. ಅಭಿನಯವು ಗಾಯಕ ಮತ್ತು ಅವರ ಜೊತೆಯವರದ್ದು ಹೊಂದಿ ಬಂದಿದೆ. ಸಹ ಗಾಯಕರ ಪಲ್ಲವಿ ಹಾಡಿಗೊಂದು ಉಚ್ಛತೆ ಕೊಟ್ಟಿದೆ. ಒಟ್ಟಾರೆ ರಸದೌತಣ….
ಧನ್ಯವಾದಗಳು