Table of Contents
Sakhi Song Credits
Song | Sakhi |
Movie | Blink |
Singers | Siddhartha Belmannu |
Music Director | Prasanna Kumar M S |
Lyrics | Pramod Maravanthe |
Star Cast | Dheekshith Shetty,Chaithra J Achar |
Audio Label/Credit | Janani Pictures |
Sakhi Lyrics In Kannada | ಸಖಿ ಲಿರಿಕ್ಸ್
ಸಖಿಯೇ ನಿನ್ನ ಸಂಗಾನೇ ಚಂದಾನೇ
ಸನಿಹಾನೆ ಸುಳಿದಾಗ ನಿನ ಗಮನ
ಮನದಾಳ ಕಾದಂತೆ ಮರು ಜನನ
ಉಸಿರಾಗಿ ಬದಲಾಗಿದೆ ಆ ನಿನ್ನ ಮೌನ
ಎದುರಾಗಿ ಬಂದಾಗ ಕೊನೆಯ ದಿನ
ಉಳಿಸಿ ಶುರುಮಾಡು ಹೊಸ ಪಯಣ
ನಿನಗೆ ವರ ನೀಡಲಿ ನನ್ನೆಲ್ಲ ಧ್ಯಾನ
ಸಮಯವ ಕಳೆಯಲು ನೀನಿರೋ ಕನಸಲಿ
ಇರುಳನು ಇರಿಸಿದೆ ನಿನ್ನಯ ಕಣ್ಣಲಿ
ದಿನವೂ ನಿನ್ನಯ ದನಿಯೇ ಕೇಳಿಸುವ ಹಾಗೆ
ಜಗವೇ ಸದ್ದಿಲ್ಲದೇ ಸ್ಪಂದಿಸಿದೆ ನಂಗೆ
ನಗುವ ನಿನ್ನ ಮೊಗವು ಕಾಣಿಸಿದ ಮೇಲೆ
ಜೊತೆಗೆ ಓಡಾಡಿದೆ ದೀಪಗಳ ಮಾಲೆ
ಬಾಡುವ ಹೂವು ಅಂತಿಮ ಬಾರಿ
ನನ್ನನ್ನು ನೋಡಿ ನಕ್ಕಂತಿದೆ
ರಂಗೋಲಿ ಹಾಕಿ ಹೊಂದಂತ ಬಾನು
ರಂಗಿಲ್ಲದೇನೆ ದೂರಾಗಿದೆ
ಮರೆಯಾಗೋ ಮುಂಚೆನೇ ಖಾಲಿ ಮಾಡು ಬಾಕಿ ಭಾವನೆ
ಉಸಿರೇ ಬೇಕಿಲ್ಲ ನಾ ಬದುಕೋಕೆ ಸಾಕು ಪ್ರೀತಿನೇ
ಸಖಿಯೇ ಸಖಿಯೇ