ನಿನ್ನ ತುಟಿ
ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವು
ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವು
ಹಿಡದ ನೋಡಿದ್ರ ಮೆತ್ತಗ ಅದಾವು
ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವು
ಕುಡುದ ನೋಡಿದ್ರ ತಣ್ಣಗ ಅದಾವು
ನೆಂದೂ ನೆಂದೂ
ನೆಂದೂ ನೆಂದೂ ನಿರಾಗಾ ಇದ್ದು
ಯಾವ ಕಲ್ಲೂ ಮೆತ್ತಗಾಗಲಿಲ್ಲ
ನೆಂದೂ ನೆಂದೂ ನಿರಾಗಾ ಇದ್ದು
ಯಾವ ಕಲ್ಲೂ ಮೆತ್ತಗಾಗಲಿಲ್ಲ
ಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆ
ಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆ
ಅನೌನ್ ನಾನೂ ಯಾಕಾರ ಕಲ್ಲಾಗಲಿಲ್ಲ
ವಿವರಣೆ
ಇಲ್ಲಿರುವ ಎರಡೂ ಶಾಯರಿಗಳನ್ನ ಗಂಡು ಭಾಷೆಯಲ್ಲಿ ಬರೆದವರು ಶ್ರೀ. ಇಟಗಿ ಇರಣ್ಣ ಅವರು.
ನಿನ್ನ ತುಟಿ ಶಾಯರಿಯಲ್ಲಿ ಅವರು ಒಂದು ಹೆಣ್ಣಿನ ತುಟಿಗಳ ಬಗ್ಗೆ ಹೇಳಿದ್ದಾರೆ. ಆ ತುಟಿಗಳು ನೋಡ್ಲಿಕ್ಕೆ ಕೆಂಪಗೆ ಕೆಂಡದ ಥರ ಬಿಸಿ ಬಿಸಿ ಕಾಣಿಸುತ್ತವೆ .
ತುಟಿಗಳನ್ನ ಮುಟ್ಟಿ ನೋಡಿದ್ರೆ ಬಹಳ ಮೆತ್ತಗೆ ಇವೆ
ಇನ್ನ ಅವನ್ನ ಕುಡಿದು ನೋಡಿದ್ರೆ ಅಂದ್ರೆ ಚುಂಬಿಸಿದ್ರೆ ಬಹಳ ತಂಪಾಗಿವೆ ನಿದ್ರೆ ಸುಖಾನುಭೂತಿ ಆಗುತ್ತದೆ ಎಂದು ಹೇಳಿದ್ದಾರೆ.
ನೆಂದೂ ನೆಂದೂ ಶಾಯರಿ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.
ಕಲ್ಲುಗಳು ಎಷ್ಟೋ ದಿನಗಳವರೆಗೂ ನೀರಿನಲ್ಲೇ ಇದ್ದರು ಮೆತ್ತಗಾಗಲ್ಲ. ಆದರೆ ನನ್ನ ಮನಸ್ಸು ಒಂದೇ ದಿನ ನಿನ್ನ ನೆನೆಸಿದ್ರೆ ಕರಗಿ ಹೋಗುತ್ತದೆ ಅಂದಿದ್ದಾರೆ. ಇಲ್ಲಿ ಅವರ ಮನಸ್ಸು ಕಲ್ಲಿನ ಥರ ಗಟ್ಟಿಯಲ್ಲ, ಬಹಳ ಕೋಮಲ ವಾಗಿದೆ ಅಂತೇ !!
Hi friends
****