ನೀನಲ್ಲವೇ

ಲವ್ Mocktail 2

ಸಂಗೀತ : ನಕುಲ ಅಭಯಂಕರ್

ಗಾಯಕರು : ನಕುಲ ಅಭಯಂಕರ್

ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ ಹೆಸರಲ್ಲಿರೋ  ಶ್ರೀಮಂತಿಕೆ ನೀನಲ್ಲವೇ?

Lyrics

ಎದೆಯಾಳುವ ಧೀಮಂತಿಕೆ ನೀನಲ್ಲವೇ? ನಿಜ ಪ್ರೇಮದ ಆ ನಂಬಿಕೆ   ನೀನಲ್ಲವೇ? ಓ ದೇವತೆ.. ನೀನಲ್ಲವೇ? ನೀನಲ್ಲವೇ?

ಏಕಾಂತದ ಸಾಂಗತ್ಯಕೆ ಸಂಗಾತಿಯು ನೀನಲ್ಲವೇ? ನನ್ನುಸಿರಲಿ ಹರಿದಾಡುವ ಸಂಪ್ರೀತಿಯು ನೀನಲ್ಲವೇ? ಸೌಂದರ್ಯದ ಗುಣಗಾನವು ನೀನಲ್ಲವೇ? ಆಂತರ್ಯದ ಅಭಿಮಾನವು ನೀನಲ್ಲವೇ? ಓ ದೇವತೆ ... ನೀನಲ್ಲವೇ? ನೀನಲ್ಲವೇ?

"ಮತ್ತೆ ನೋಡಬೇಡ" ಏಕ್ ಲವ್ ಯಾ ಹಾಡು ನೋಡಲು ಕ್ಲಿಕ್ ಮಾಡಿರಿ