ಕ್ಲೌಡ್ ಕಂಪ್ಯೂಟಿಂಗ್ ಅಂದರೆ- ಸರ್ವರ್ಗಳು, ಸ್ಟೋರೇಜ್, ಡೇಟಾಬೇಸ್, ನೆಟ್ವರ್ಕಿಂಗ್, ಸಾಫ್ಟ್ವೇರ್, ಅನಾಲಿಟಿಕ್ಸ್ , ಇಂಟೆಲಿಜೆನ್ಸ್ ಇತ್ಯಾದಿ ಕಂಪ್ಯೂಟಿಂಗ್ ಸೇವೆಗಳ ಇಂಟರ್ನೆಟ್ ಮೂಲಕ ವಿತರಣೆ
ಕ್ಲೌಡ್ ಕಂಪ್ಯೂಟಿಂಗ್ ಉಪಯೋಗಿಸುವ ಕಾರಣಗಳು : ವೇಗವಾದ ನಾವೀನ್ಯತೆ, ಹೊಂದಿಕೊಳ್ಳುವ ಸಂಪನ್ಮೂಲಗಳು, ಕಡಿಮೆ ವ್ಯಚ್ಚದಲ್ಲಿ ಭಾರೀ ಪ್ರಮಾಣದ ಬೆಳವಣಿಗೆ ಅಥವಾ ಕುಂಠಿತತೆ (ಸ್ಕೇಲ್ ಅಪ್ or ಡೌನ್ )
ಸಾಮಾನ್ಯವಾಗಿ ಬಳಸುವ ಕ್ಲೌಡ್ ಸೇವೆಗಳಿಗೆ ಮಾತ್ರ ಹಣ ಕೊಡಬೇಕಾಗುತ್ತದೆ. ಇದರಿಂದ ಸಂಪನ್ಮೂಲ ನಿರ್ವಹಣೆಯ ವೆಚ್ಚಕಡಿಮೆ.
ವೆಚ್ಚ - ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಖರೀದಿಸುವ ಮತ್ತು ಆನ್-ಸೈಟ್ ಡೇಟಾಸೆಂಟರ್ಗಳನ್ನು ಹೊಂದಿಸುವ & ಚಾಲನೆ ಮಾಡುವ ಬಂಡವಾಳ ವೆಚ್ಚವನ್ನು ನಿವಾರಿಸುತ್ತದೆ
ಕ್ಲೌಡ್ ಕಂಪ್ಯೂಟಿಂಗ್ ಅನುಕೂಲತೆ - 1
ವೇಗ - ದೊಡ್ಡ ಪ್ರಮಾಣದ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ನಿಮಿಷಗಳಲ್ಲಿ ಒದಗಿಸಬಹುದು-ಕೆಲವೇ ಮೌಸ್ ಕ್ಲಿಕ್ಗಳೊಂದಿಗೆ. ಕಂಪನಿಗಳಿಗೆ ಯೋಜನೆಯಿಂದ ಒತ್ತಡ ಕಡಿಮೆ ಮಾಡುತ್ತದೆ
ಕ್ಲೌಡ್ ಕಂಪ್ಯೂಟಿಂಗ್ ಅನುಕೂಲತೆ - 2
ಸರಿಯಾದ ಪ್ರಮಾಣದ ಐಟಿ ಸಂಪನ್ಮೂಲಗಳನ್ನು ತಲುಪಿಸುವುದು-ಉದಾಹರಣೆಗೆ, ಹೆಚ್ಚು/ ಕಡಿಮೆ ಕಂಪ್ಯೂಟಿಂಗ್ ಶಕ್ತಿ, ಸ್ಟೋರೇಜ್ , ಬ್ಯಾಂಡ್ವಿಡ್ತ್-ಅದೂ ಅಗತ್ಯವಿರುವಾಗ ಮತ್ತು ಸರಿಯಾದ ಭೌಗೋಳಿಕ ಸ್ಥಳದಿಂದ
ಕ್ಲೌಡ್ ಕಂಪ್ಯೂಟಿಂಗ್ ಅನುಕೂಲತೆ - 3
ಕ್ಷಮತೆ - ಅಪ್ಲಿಕೇಶನ್ಗಳಿಗೆ ಕಡಿಮೆಯಾದ ನೆಟ್ವರ್ಕ್ ಲೇಟೆನ್ಸಿ ಮತ್ತು ಹೆಚ್ಚಿನ ಆರ್ಥಿಕತೆಯ ಪ್ರಮಾಣ
ಕ್ಲೌಡ್ ಕಂಪ್ಯೂಟಿಂಗ್ ಅನುಕೂಲತೆ - 4
ಭದ್ರತೆ - ಕ್ಲೌಡ್ ಪೂರೈಕೆದಾರರು ವ್ಯಾಪಕವಾದ ಭದ್ರತಾ ನೀತಿಗಳು, ತಂತ್ರಜ್ಞಾನಗಳು ಮತ್ತು ನಿಯಂತ್ರಣಗಳನ್ನು ಒದಗಿಸುತ್ತಾರೆ. ಇದರಿಂದ ಭದ್ರತೆಯ ಭಯ ಇರುವದಿಲ್ಲ
ಕ್ಲೌಡ್ ಕಂಪ್ಯೂಟಿಂಗ್ ಅನುಕೂಲತೆ - 5
ವಿಶ್ವಾಸಾರ್ಹತೆ - ಕ್ಲೌಡ್ನಲ್ಲಿ ಡೇಟಾ ಬ್ಯಾಕಪ್, ವಿಪತ್ತು ಚೇತರಿಕೆ ಮತ್ತು ಬಿಸಿನೆಸ್ ನಿರಂತರತೆ ಸುಲಭ ಮತ್ತು ಕಡಿಮೆ ವೆಚ್ಚದಾಯಕ
ಕ್ಲೌಡ್ ಕಂಪ್ಯೂಟಿಂಗ್ ಅನುಕೂಲತೆ - 6
ಆನ್ಲೈನ್ ಸೇವೆಗಳಾದ ಇಮೇಲ್, ಸಂಗೀತ, ಗೇಮ್ಸ್ , ಟಿಕೆಟ್ ಬುಕ್ ಮಾಡುವದು ಇತ್ಯಾದಿ
ಕ್ಲೌಡ್ ಕಂಪ್ಯೂಟಿಂಗ್ ಉದಾಹರಣೆಗಳು :
ಗೂಗಲ್ ಕ್ಲೌಡ್ , ಮೈಕ್ರೋಸಾಫ್ಟ್ ಅಝುರ್, ಅಮೆಜಾನ್ AWS, IBM ಕ್ಲೌಡ್ ಇತ್ಯಾದಿ