ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞ ರಾಯರ ಮಧ್ವರಾಯರ || Pa || ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ || 1 || ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ || 2 || ಆರು ಮಂದಿ ವೈರಿಗಳನು ಸೇರಲೀಸದಂತೆ ಜರಿದು ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ || 3 || ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ || 4 || ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವ ಮುನಿಯ || 5 ||