ಚಂದ್ರಚೂಡ ಶಿವಶಂಕರ

ರಚನೆ : ಶ್ರೀ ಪುರಂದರದಾಸರು

'ಚಂದ್ರಚೂಡ ಶಿವಶಂಕರ'  ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ. ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ.

ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ.

ನಂದಿ ವಾಹನದ ಮೇಲೆ ಶಿವನು ಆನಂದದಿಂದ ತ್ರಿಲೋಕಗಳಲ್ಲೂ ಸಂಚರಿಸುತ್ತಾರೆ. ಸುಮುದ್ರ ಮಥನ ಕಾಲದಲ್ಲಿ ಬಂದ ಹಾಲಾಹಲ ವಿಷವನ್ನು ಕುಡಿದವನು. ಹಿಂದೆ ಕಾಮನನ್ನು ಮೂರನೇಯ ಕಣ್ಣಿನಿಂದ ಸುಟ್ಟು ಬೂದಿ ಮಾಡಿದ್ದಾನೆ. ಯಾವಾಗಲೂ ಶ್ರೀ ರಾಮನ ಜಪ ಮಾಡುತ್ತ ಪೂಜಿಸುತ್ತಿರುತ್ತಾನೆ.

Lyrics

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ  ಗಜಚರ್ಮಾಂಬರಧರ ನಮೋ ನಮೋ || ಅ ಪ ||

Lyrics

ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || 1 ||

Lyrics

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || 2 ||

Click For Full Lyrics

Click For Full Lyrics